AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mummy In Bag: ಈಕೆ ನನ್ನ ಗರ್ಲ್​ ಫ್ರೆಂಡ್! ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್​ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ

ಪೆರುವಿನಲ್ಲಿ ಫುಡ್ ಡೆಲಿವರಿ ಬಾಯ್​ನ ಬ್ಯಾಗ್​ನಲ್ಲಿ 800 ವರ್ಷ ಹಳೆಯ ಮಮ್ಮಿ ಪತ್ತೆಯಾಗಿದೆ. ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳನ್ನು ಮಮ್ಮಿ ಎಂದು ಕರೆಯಲಾಗುತ್ತದೆ.

Mummy In Bag: ಈಕೆ ನನ್ನ ಗರ್ಲ್​ ಫ್ರೆಂಡ್! ಪೆರುವಿನ ಫುಡ್ ಡೆಲಿವರಿ ಬಾಯ್ ಬ್ಯಾಗ್​ನಲ್ಲಿತ್ತು 800 ವರ್ಷ ಹಳೆಯ ಮಮ್ಮಿ
ಮಮ್ಮಿ
ನಯನಾ ರಾಜೀವ್
|

Updated on: Mar 02, 2023 | 10:59 AM

Share

ಪೆರುವಿನಲ್ಲಿ ಫುಡ್ ಡೆಲಿವರಿ ಬಾಯ್​ನ ಬ್ಯಾಗ್​ನಲ್ಲಿ 800 ವರ್ಷ ಹಳೆಯ ಮಮ್ಮಿ ಪತ್ತೆಯಾಗಿದೆ. ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳನ್ನು ಮಮ್ಮಿ ಎಂದು ಕರೆಯಲಾಗುತ್ತದೆ. ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ.

ಆದರೆ, ಮೃತ ದೇಹಗಳನ್ನು ಈ ರೀತಿಯಾಗಿ ನಶಿಸಿಹೋಗಲು ಬಿಡದೆ, ಹಲವು ವರ್ಷಗಳ ಕಾಲ ಅವು ಕ್ಷಯಿಸಿ ಹೋಗದಂತೆ ಸಂರಕ್ಷಿಸಿಡುವ ವಿಶಿಷ್ಟ ಪದ್ಧತಿಯನ್ನು ಪ್ರಾಚೀನ ಈಜಿಫ್ಟ್ ಹಾಗೂ ಇತರ ಕೆಲವು ದೇಶಗಳ ಜನರು ರೂಢಿಸಿ ಕೊಂಡಿದ್ದರು ಅದಕ್ಕೆ ಮಮ್ಮಿ ಎಂದು ಕರೆಯಲಾಗುತ್ತದೆ. ಡೆಲಿವರಿ ಬಾಯ್​ ಒಬ್ಬನ ಬ್ಯಾಗ್​ನಲ್ಲಿ 600-800 ವರ್ಷ ಹಳೆಯ ಮಮ್ಮಿ ಪತ್ತೆಯಾಗಿದೆ. ಸುಮಾರು 30 ವರ್ಷಗಳಿಂದ ಈ ಮಮ್ಮಿ ತಮ್ಮ ಮನೆಯಲ್ಲಿಯೇ ಇದೆ ಎಂದು ಆತ ಹೇಳಿದ್ದಾನೆ.

ಮತ್ತಷ್ಟು ಓದಿ: Viral Video: ಪ್ಲೀಸ್ ಮಮ್ಮಿ ನಮಗೆ ನಿಮ್ಮ ಒಂದು ಮಗುವನ್ನು ಕೊಡಿ ಎಂದು ಅಂಗಲಾಚಿದ ಪುಟ್ಟ ಬಾಲಕ

ಈ ಮೊದಲು ಅದೇ ಬ್ಯಾಗ್​ ಅನ್ನು ಜನರಿಗೆ ಆಹಾರ ವಿತರಣೆ ಮಾಡಲು ಬಳಸುತ್ತಿದ್ದ. ಆ ಡೆಲಿವರಿ ಬಾಯ್ ಮಮ್ಮಿಯನ್ನು ತನ್ನ ಗೆಳತಿ ಎಂದು ಕರೆದಿದ್ದಾನೆ. ಈ ಘಟನೆ ಸಂಬಂಧ 26 ವರ್ಷದ ಜೂಲಿಯೋ ಸೀಸರ್​ ಬರ್ಮೆಜೊ ಅವರನ್ನು ಬಂಧಿಸಲಾಗಿದೆ ಎಂದು ಪೆರು ಪೊಲೀಸರು ತಿಳಿಸಿದ್ದಾರೆ. ಮಮ್ಮಿ ಸದಾ ನನ್ನ ಕೋಣೆಯಲ್ಲಿ ಇರುತ್ತದೆ ಅವಳು ನನ್ನೊಂದಿಗೆ ಸದಾ ಇರುತ್ತಾಳೆ, ಅವಳೊಂದಿಗೆ ನಾನು ಮಲಗುತ್ತೇನೆ ಎಂದು ಜೂಲಿಯೋ ಹೇಳಿದ್ದಾರೆ.

ಅದನ್ನು ನಾನು ಮಾರಾಟ ಮಾಡಲು ಹೋಗುತ್ತಿರಲಿಲ್ಲ, ಅದನ್ನು ಸ್ನೇಹಿತರಿಗೆ ತೋರಿಸಲು ಹೋಗುತ್ತಿದ್ದೆ. ಉದ್ಯಾನದಲ್ಲಿ ತನ್ನ ಸ್ನೇಹಿತರೊಂದಿಗೆ ಆ ಓಡಾಡುತ್ತಿರುವಾಗ ಬೆನ್ನ ಹಿಂದೆ ಬೃಹದಾಕಾರದ ಬ್ಯಾಗ್​ ಅನ್ನು ಪೊಲೀಸರು ನೋಡಿದರು ಅದನ್ನು ಪರಿಶೀಲಿಸಿದಾಗ ಮಮ್ಮಿ ಪತ್ತೆಯಾಗಿದೆ. ಅಸ್ಥಿಪಂಜರದ ವ್ಯಕ್ತಿಗೆ 45 ವರ್ಷ ವಯಸ್ಸಾಗಿತ್ತು. ಅದನ್ನು ಬ್ಯಾಂಡೇಜ್​ನಿಂದ ಸುತ್ತಲಾಗಿತ್ತು. ಪೆರುವಿನ ಸಂಸ್ಕೃತಿ ಸಚಿವಾಲಯವು ಸಂರಕ್ಷಿಸುವ ಉದ್ದೇಶದಿಂದ ರಕ್ಷಿತ ಅವಶೇಷಗಳನ್ನು ವಶಕ್ಕೆ ಪಡೆದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ