Annapurna Mountain: ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ರಕ್ಷಣೆ, ಸ್ಥಿತಿ ಗಂಭೀರ
ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಚಾರಣದ ಸಮಯದಲ್ಲಿ ಕಾಣೆಯಾಗಿದ್ದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲು ಅವರನ್ನು ರಕ್ಷಣೆ ಮಾಡಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಚಾರಣದ ಸಮಯದಲ್ಲಿ ಕಾಣೆಯಾಗಿದ್ದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲು ಅವರನ್ನು ರಕ್ಷಣೆ ಮಾಡಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅನುರಾಗ್ ಸಹೋದರ ಸಾಮಾಜಿಕ ಜಾಲತಾಣಗಳಲ್ಲಿ ಅನುರಾಗ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅನುರಾಗ್ ಪತ್ತೆಯಾಗಿದ್ದಾರೆ, ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
By god grace @anuragmaloo is found! Wish for his speedy recovery.
Grateful to all whose who put their heart and soul. @DrSJaishankar #anuragmaloo pic.twitter.com/FyW9ROXKas
— Nitin Jain (@indianimator) April 20, 2023
ಅನ್ನಪೂರ್ಣ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದ್ದು, ಸಮುದ್ರ ಮಟ್ಟದಿಂದ 8,091 ಮೀಟರ್ ಎತ್ತರದಲ್ಲಿದೆ. ಸುಮಾರು 6,000 ಮೀಟರ್ ಕೆಳಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ಹಿಮಾಲಯನ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಮತ್ತಷ್ಟು ಓದಿ: Nepal Annapurna Mountain: ನೇಪಾಳದ ಅನ್ನಪೂರ್ಣ ಪರ್ವತದಿಂದ ಭಾರತೀಯ ಪರ್ವತಾರೋಹಿ ಅನುರಾಗ್ ನಾಪತ್ತೆ
ಮಾಲು ಪರ್ವತಾರೋಹಣಕ್ಕಾಗಿ ಖ್ಯಾತ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನ ಮತ್ತು ಸಲಹೆಯನ್ನು ಪಡೆದಿದ್ದರು. ಕಾಣೆಯಾದ ಆರೋಹಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಶೆರ್ಪಾ ಹೇಳಿದರು, ಆದರೆ ಅವರ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಪರ್ವತದಲ್ಲಿ ಇಂತಹ ಹಲವು ಅವಘಡಗಳು ಸಂಭವಿಸಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 20 April 23