ಅಮೆರಿಕದ ಡ್ರೋನ್ ದಾಳಿಗೆ ಸಾವಿರಾರು ಮಂದಿ ಬಲಿ: ವರದಿ

ಪತ್ರಿಕೆಯು ಉಲ್ಲೇಖಿಸಿದ ಒಂದು ಪ್ರಕರಣದಲ್ಲಿ ಅಮೆರಿಕದ ವಿಶೇಷ ಪಡೆಗಳು ಉತ್ತರ ಸಿರಿಯಾದಲ್ಲಿ 85 "ಇಸ್ಲಾಮಿಕ್ ಸ್ಟೇಟ್" ಹೋರಾಟಗಾರರನ್ನು ಕೊಂದಿರುವುದಾಗಿ ಹೇಳಿಕೊಂಡಿವೆ. ನ್ಯೂಯಾರ್ಕ್ ಟೈಮ್ಸ್ ನಡೆಸಿದ ತನಿಖಾ ವರದಿಯ ಪ್ರಕಾರ ಸತ್ತವರು 120 ಗ್ರಾಮಸ್ಥರು ಎಂದಿದೆ.

ಅಮೆರಿಕದ ಡ್ರೋನ್ ದಾಳಿಗೆ ಸಾವಿರಾರು ಮಂದಿ ಬಲಿ: ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2021 | 11:50 AM

ವಾಷಿಂಗ್ಟನ್: ಪೆಂಟಗನ್ ದಾಖಲೆಗಳ (Pentagon documents) ಪ್ರಕಾರ ವೈಮಾನಿಕ ದಾಳಿಯಲ್ಲಿ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸಾವಿರಾರು ನಾಗರಿಕರು ಹತ್ಯೆಯಾಗಿದ್ದಾರೆ ನ್ಯೂಯಾರ್ಕ್ ಟೈಮ್ಸ್ (New York Times) ಶನಿವಾರ ವರದಿ ಮಾಡಿದೆ. ವೈಮಾನಿಕ ದಾಳಿಯಲ್ಲಿ ಅನೇಕ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ. ದಾಖಲೆ ಪ್ರಕಾರ ಇದು ಗುಪ್ತಚರ ಇಲಾಖೆಯ ತಪ್ಪಿನಿಂದಾಗಿ ಒದಗಿಸಲಾದ ಒಂದೇ ಒಂದು ದಾಖಲೆಯು ತಪ್ಪು ಅಥವಾ ಶಿಸ್ತು ಕ್ರಮಕೈಗೊಂಡಿರುವ ಬಗ್ಗೆ ಹೇಳಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಒಂದು ಡಜನ್‌ಗಿಂತಲೂ ಕಡಿಮೆ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.

ವರದಿಯಲ್ಲೇನಿದೆ? ಪತ್ರಿಕೆಯು ಉಲ್ಲೇಖಿಸಿದ ಒಂದು ಪ್ರಕರಣದಲ್ಲಿ ಅಮೆರಿಕದ ವಿಶೇಷ ಪಡೆಗಳು ಉತ್ತರ ಸಿರಿಯಾದಲ್ಲಿ 85 “ಇಸ್ಲಾಮಿಕ್ ಸ್ಟೇಟ್” ಹೋರಾಟಗಾರರನ್ನು ಕೊಂದಿರುವುದಾಗಿ ಹೇಳಿಕೊಂಡಿವೆ. ನ್ಯೂಯಾರ್ಕ್ ಟೈಮ್ಸ್ ನಡೆಸಿದ ತನಿಖಾ ವರದಿಯ ಪ್ರಕಾರ ಸತ್ತವರು 120 ಗ್ರಾಮಸ್ಥರು ಎಂದಿದೆ. ವರದಿಯ ಪ್ರಕಾರ, ಟ್ಯಾಲೋನ್ ಅನ್ವಿಲ್ ಎಂದು ಕರೆಯಲ್ಪಡುವ ಅಮೆರಿಕ ಸ್ಟ್ರೈಕ್ ಸೆಲ್ ನಿಯಮಿತವಾಗಿ “ಇಸ್ಲಾಮಿಕ್ ಸ್ಟೇಟ್” ವಿರುದ್ಧ ಬಾಂಬ್ ದಾಳಿಯ ಕಾರ್ಯಾಚರಣೆಯಲ್ಲಿ ನಾಗರಿಕರನ್ನು ರಕ್ಷಿಸುವ ಕಾರ್ಯವಿಧಾನಗಳನ್ನು ಬದಿಗೊತ್ತಿದೆ. ಆಗಸ್ಟ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ತನಿಖೆಯು ಕಾಬೂಲ್ ವೈಮಾನಿಕ ದಾಳಿಯು ಕುಟುಂಬದ 10 ಸದಸ್ಯರನ್ನು ಕೊಂದಿದೆ ಎಂದು ಕಂಡುಹಿಡಿದಿದೆ. ಬಾಂಬ್‌ಗಳನ್ನು ಹೊಂದಿರುವ ವಾಹನವನ್ನು ನಾಶಪಡಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದು, ನಂತರ ಈ ವಾದವನ್ನು ಹಿಂತೆಗೆದುಕೊಳ್ಳಲಾಯಿತು.

ಅಮೆರಿಕ ವಾಯು ಕಾರ್ಯಾಚರಣೆಯು ಹೇಗೆ ಪ್ರಾರಂಭವಾಯಿತು? ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸಾವಿರಾರು ಸೈನಿಕರು ಸಾವನ್ನಪ್ಪಿದ ನೆಲದ ಯುದ್ಧಗಳಿಗೆ ಸಾರ್ವಜನಿಕ ವಿರೋಧದ ವ್ಯಕ್ತವಾದ ವೇಳೆ ಅಧ್ಯಕ್ಷ ಬರಾಕ್ ಒಬಾಮಾ ಸರ್ಕಾರದ ಅವಧಿಯಲ್ಲಿ ಅಮೆರಿಕದ ವಾಯುದಾಳಿ ಅಭಿಯಾನವು ರೂಪುಗೊಂಡಿತು. ಯುಎಸ್ ತನ್ನ ನೆಲದ ಉಪಸ್ಥಿತಿಯನ್ನು ಹಿಮ್ಮೆಟ್ಟಿಸಿತು. ಡ್ರೋನ್ ದಾಳಿಯ ಹೆಚ್ಚಿನ ಬಳಕೆಯಿಂದ ಅದನ್ನು ಬದಲಾಯಿಸಿತು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಈ ಅಭಿಯಾನವು ಮತ್ತಷ್ಟು ತೀವ್ರಗೊಂಡಿತು. ಒಬಾಮಾ ಇದನ್ನು “ಇತಿಹಾಸದಲ್ಲಿ ಅತ್ಯಂತ ನಿಖರವಾದ ವಾಯು ಅಭಿಯಾನ” ಎಂದು ಕರೆದರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ಅಮೆರಿಕ ಪಡೆಗಳು ಅಫ್ಘಾನಿಸ್ತಾನ, ಇರಾಕ್ ಮತ್ತು ಸಿರಿಯಾದಲ್ಲಿ 50,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿವೆ.

ಇದನ್ನೂ ಓದಿ: ಮಸೂದ್ ಅಜರ್ ಸೇರಿದಂತೆ ಉಗ್ರರನ್ನು ವಿಚಾರಣೆಗೆ ಒಳಪಡಿಸಲು ಪಾಕಿಸ್ತಾನ ವಿಫಲ: ಅಮೆರಿಕ ವರದಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್