ಬೀಜಿಂಗ್: ಚೀನಾದ (China) ರೆಸ್ಟೊರೆಂಟ್‌ವೊಂದರಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಈ ಪ್ರಕರಣಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಇದು ಉತ್ತರ ಚೀನಾದ ಹೆಬೈ ಪ್ರಾಂತ್ಯದ (Hebei province) ಬಾರ್ಬೆಕ್ಯೂ ರೆಸ್ಟೊರೆಂಟ್‌ನಲ್ಲಿ (barbecue restaurant) ನಡೆದ ಘಟನೆ ಆಗಿದೆ. ಮೂವರು ಮಹಿಳೆಯರು ರೆಸ್ಟೊರೆಂಟ್‌ನಲ್ಲಿ ಜತೆಗೆ ಕುಳಿತು ಊಟ ಮಾಡುತ್ತಿರುವಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯ ಬೆನ್ನಿನ ಮೇಲೆ ಕೈ ಹಾಕುತ್ತಿರುವುದು ವಿಡಿಯೊ ದೃಶ್ಯದಲ್ಲಿದೆ. ಮಹಿಳೆ ಅವನನ್ನು ದೂರ ತಳ್ಳಿದಾಗ ಅವನು ಆಕೆಯ ಮೇಲೆ ಹಲ್ಲೆ ಮಾಡುತ್ತಾನೆ. ಅಲ್ಲಿದ್ದ ಮತ್ತೊಬ್ಬ ಮಹಿಳೆ ಆಕೆಯ ರಕ್ಷಣೆಗೆ ಬಂದಾಗ ಆತ ಆಕೆಯ ಮೇಲೂ ಹಲ್ಲೆ ನಡೆಸುತ್ತಾನೆ. ಮಹಿಳೆ ನೆಲದ ಮೇಲೆ ಬಿದ್ದಾಗಲೂ ಆಕೆಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಾಣಿಸುತ್ತದೆ. ಮಹಿಳೆಯನ್ನು ರೆಸ್ಟೊರೆಂಟ್ನ ಹೊರಗೆಳೆದುಕೊಂಡು ಬಂದು ಹಲ್ಲೆ ನಡೆಸುತ್ತಿರುವುದು ವಿಡಿಯೊದಲ್ಲಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಚೀನಾದಲ್ಲಿ ಲೈಂಗಿಕ ಕಿರುಕುಳ ಮತ್ತು ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ಚರ್ಚೆಗಳು ಶುರುವಾಗಿದೆ. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಿತೃಪ್ರಭುತ್ವದ ಸಮಾಜ, ಇಂಟರ್ನೆಟ್ ಸೆನ್ಸಾರ್‌ಶಿಪ್ ಮತ್ತು ಕಾನೂನು ಬೆಂಬಲದ ಹೊರತಾಗಿಯೂ ಮಹಿಳೆಯರ ಹಕ್ಕುಗಳ ಬಗ್ಗೆ ಜನ ಮಾತನಾಡಲು ತೊಡಗಿದ್ದಾರೆ.ಪ್ರಮುಖ ಸ್ತ್ರೀವಾದಿಗಳು ಸಹ ನಿಯಮಿತ ಪೋಲೀಸ್ ಕಿರುಕುಳ ಮತ್ತು ಬಂಧನವನ್ನು ಎದುರಿಸುತ್ತಿರುವಾಗ ಕೌಟುಂಬಿಕ ದೌರ್ಜನ್ಯ ವ್ಯಾಪಕವಾಗಿದ್ದರೂ ಈ ಬಗ್ಗೆ ವರದಿ ಆಗಿದ್ದು ಕಡಿಮೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
2018 ರಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಗ್ಗೆ #MeToo ಚಳುವಳಿಗೆ ಲಿಂಕ್ ಮಾಡಲಾದ ಕೀವರ್ಡ್‌ಗಳನ್ನು ವೆಬ್ ಸೆನ್ಸಾರ್‌ಗಳು ನಿರ್ಬಂಧಿಸಿವೆ. ಹಿಂಸಾತ್ಮಕ ದಾಳಿ ಮತ್ತು “ತೊಂದರೆ ಉಂಟುಮಾಡುವ” ಶಂಕೆಯ ಮೇಲೆ ಎಂಟು ಜನರನ್ನು ಬಂಧಿಸಿರುವುದಾಗಿ ಶನಿವಾರದಂದು ಟಾಂಗ್ಶಾನ್ ನಗರದಲ್ಲಿ ಪೊಲೀಸರು ತಿಳಿಸಿದ್ದಾರೆ. ಇನ್ನೊಬ್ಬ ಶಂಕಿತನ ಹುಡುಕಾಟ ನಡೆಯುತ್ತಿದೆ.
1/ China’s delusion of the safest country ,is exposed by a terrifying assault case against women.
4 men from Tangshan attacked 3 girls after they resisted the men’s sexual harassment in a restaurant publicly.cctv video will b attached in the thread. pic.twitter.com/hv9dYXZj3N
— 巴丢草 Badiucao (@badiucao) June 11, 2022
ಘಟನೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರು ಮಹಿಳೆಯರು ಸ್ಥಿತಿ ಸ್ಥಿರವಾಗಿದೆ. ಆದರೆ ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:58 pm, Wed, 15 June 22