ಟ್ರಂಪ್​ ಹೆಂಡತಿ ವೈಟ್​ಹೌಸ್​ನ ಉದ್ಯಾನವನಕ್ಕೆ ತಂದ ಹೊಸರೂಪ ಕಿತ್ತೊಗೆಯಿರಿ: ಅಮೇರಿಕದ ನಾಗರಿಕರಿಂದ ಅಧ್ಯಕ್ಷ ಜೋ ಬೈಡನ್​ಗೆ ಅರ್ಜಿ

ಅಮೇರಿಕದ ಜನರಿಗೆ ಡೋನಾಲ್ಡ್​ ಟ್ರಂಪ್​ ಮೇಲಿನ ಸಿಟ್ಟು ಇನ್ನೂ ಹೋಗಿಲ್ಲ. ಅವರ ಹೆಂಡತಿ ಮೆಲಾನಿ ಟ್ರಂಪ್​ ವೈಟ್​ಹೌಸ್​ನ ಉದ್ಯಾನವನಕ್ಕೆ ತಂದ ಬದಲಾವಣೆಯನ್ನು ತೆಗೆದು 1960ರ ದಶಕದಲ್ಲಿ ಜಾಕ್​ಲಿನ್​ ಕೆನಡಿ ರೂಪಿಸಿದ್ದ ಉದ್ಯಾನವನವನ್ನು ಮತ್ತೆ ಪುನರೂಪಿಸಿ ಎಂದು ಅಧ್ಯಕ್ಷ ಜೋ ಬೈಡನ್​ಗೆ ಸಲ್ಲಿಸಿರುವ ಆನ್​ಲೈನ್​ ಅರ್ಜಿಯಲ್ಲಿ ಜನ ಒತ್ತಾಯಿಸಿದ್ದಾರೆ.

  • TV9 Web Team
  • Published On - 20:30 PM, 1 May 2021
ಟ್ರಂಪ್​ ಹೆಂಡತಿ ವೈಟ್​ಹೌಸ್​ನ ಉದ್ಯಾನವನಕ್ಕೆ ತಂದ ಹೊಸರೂಪ ಕಿತ್ತೊಗೆಯಿರಿ: ಅಮೇರಿಕದ ನಾಗರಿಕರಿಂದ ಅಧ್ಯಕ್ಷ ಜೋ ಬೈಡನ್​ಗೆ ಅರ್ಜಿ
ವೈಟ್​ ಹೌಸ್​ ಗಾರ್ಡನ್​

ಕೈ ತೋಟದಲ್ಲಿ ಯಾವ ತರಕಾರಿ ಬೆಳೆಯಬೇಕು ಎನ್ನುವ ಬಗ್ಗೆ ಅತ್ತೆ ಸೊಸೆ ಜಗಳ ಮಾಡಿಕೊಂಡಿರುವುದು ಗೊತ್ತು. ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಎಡ ಮತ್ತು ಬಲಪಂಥೀಯರ ಜಗಳ ಹೇಗೆ ನಡೆಯುತ್ತೆ ಗೊತ್ತು. ಅಮೇರಿಕದ ಜನರನ್ನು ನೋಡಿ. ಈ ಹಿಂದಿನ ಅಧ್ಯಕ್ಷ, ಡೋನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕಿತ್ತೊಗೆದರೂ ಅವರಿಗೆ ಸಮಾಧಾನ ಆಗಿಲ್ಲ. ಟ್ರಂಪ್ ಕುಟುಂಬ ಪರಂಪರೆಯನ್ನು ಅಳಿಸುವ ಪ್ರಯತ್ನಗಳು ಶ್ವೇತಭವನದ ಪಾಟಿಂಗ್ ಶೆಡ್‌ಗಳು ಮತ್ತು ನರ್ಸರಿವರೆಗೂ ತಲುಪಿದೆ. ಟ್ರಂಪ್ ಪತ್ನಿ ಮಾಜಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರ 2019 ರಲ್ಲಿ ವೈಟ್ ಹೌಸ್ನ ಉದ್ಯಾನವನದಲ್ಲಿ ತಂದ ಎಲ್ಲಾ ಬದಲಾವಣೆಯನ್ನು ಕಿತ್ತು ಹಾಕಿ 1960 ರಲ್ಲಿ ಕೆನೆಡಿ ಕುಟುಂಬದವರು ಯಾವ ರೀತಿಯ ಉದ್ಯಾನವನ ಬೆಳೆಸಿದ್ದರೋ ಆ ಪದ್ಧತಿಯನ್ನು ವಾಪಸ್ ತನ್ನಿ ಎಂದು 54000 ಜನ ಈಗಿನ ಅಧ್ಯಕ್ಷ ಜೋ ಬೈಡನ್ಗೆ ಆನ್ಲೈನ್ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಟ್ರಂಪ್ ಕುಟುಂಬ ಬಿಟ್ಟು ಹೋಗಿರುವ ಎಲ್ಲಾ ಕುರುಹನ್ನು ಅಳಿಸಲು ಅವರು ಮುಂದಾಗಿದ್ದಾರೆ.

ಸಿಟ್ಟೇಕೆ?

ಜಾಕ್ವೆಲಿನ್ ಕೆನಡಿ ವಿನ್ಯಾಸಗೊಳಿಸಿದಂತೆ ಉದ್ಯಾನವನ್ನು ತನ್ನ ‘ಹಿಂದಿನ ವೈಭವಕ್ಕೆ’ ಹಿಂದಿರುಗಿಸುವಂತೆ 54,000 ಕ್ಕೂ ಹೆಚ್ಚು ಜನರು ಸಹಿ ಮಾಡಿದ ಅರ್ಜಿಯಲ್ಲಿ ಜಿಲ್ ಬೈಡೆನ್‌ಗೆ ಕೋರಲಾಗಿದೆ ಎಂದು ಬ್ರಿಟನ್ನ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಮೆಲಾನಿ ಟ್ರಂಪ್‌ ಮಾಡಿದ್ದ ರೋಸ್ ಗಾರ್ಡನ್ ಬದಲಾವಣೆ ಮತ್ತು ಕ್ರಾಬ್ ಸೇಬಿನ ಮರಗಳ ಮತ್ತು ಹೊಸ ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಯ್ತು. ಜಪಾನ್‌ನಿಂದ ಉಡುಗೊರೆಯಾಗಿ ಕೊಟ್ಟಿದ್ದ ಚೆರಿ ಮರಗಳನ್ನು ತೆಗೆಯಲಾಗಿದೆ ಮತ್ತು ಉಳಿದ ಗಿಡ ಕೀಳಿಸಿ ತಮ್ಮ ಇಷ್ಟದ ಗಿಡ ಹಾಕಿ ಆ ಉದ್ಯಾನವನದ ಅಂದವನ್ನೇ ಕೆಡಿಸಿದ್ದಾರೆ, ಎಂದು ಆ ಅರ್ಜಿ ಹೇಳಿದೆ.

ಪ್ರಸಿದ್ಧ ವಿನ್ಯಾಸಕ ಬನ್ನಿ ಮೆಲನ್ ಅವರ ಸಹಾಯದಿಂದ ಉದ್ಯಾನವನ್ನು 1960 ರ ದಶಕದ ಆರಂಭದಲ್ಲಿ ಜಾಕ್ವೆಲಿನ್ ಕೆನಡಿ ರಚಿಸಿದ ಸ್ಥಿತಿಗೆ ಹಿಂದಿರುಗಿಸಬೇಕೆಂದು ಪುನಃಸ್ಥಾಪಕರು ಒತ್ತಾಯಿಸುತ್ತಿದ್ದಾರೆ. ಅಮೆರಿಕನ್ನರಿಂದ ಜಾಕಿಯ (ಜಾಕ್ಲಿನ್ ಕೆನಡಿ) ಪರಂಪರೆಯನ್ನು ಕಿತ್ತುಹಾಕಲಾಯಿತು. ಯುರೋಪಿನ ಉದ್ಯಾನವನಕ್ಕೆ ಹೋಲಿಸಿದರೆ ಶ್ವೇತಭವನದ ಉದ್ಯಾನವನವು, ಗುಣಮಟ್ಟ ಅಥವಾ ಆಕರ್ಷಣೆಯನ್ನು ಹೊಂದಿಲ್ಲ, ಟ್ರಂಪ್ ಹೇಳಿದ್ದರು ಮತ್ತು ತಮ್ಮ ಹೆಂಡತಿ ಗಾರ್ಡನ್ಗೆ ತರುತ್ತಿರುವ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ಈ ಬದಲಾವಣೆ ಮುಂದಿನ ಜನಾಂಗ ಭವಿಷ್ಯದ ಮೇಲಿಟ್ಟಿರುವ ಭರವಸೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಟ್ರಂಪ್ ಹೇಳಿದ್ದರು. ವಿದ್ಯುತ್ ಸಂಪರ್ಕದ ನವೀಕರಣಗಳು, ಹೊಸ ನಡಿಗೆ ಮಾರ್ಗ ಮತ್ತು ಹೊಸ ಪೊದೆಗಳನ್ನು ಒಳಗೊಂಡಿರುವ ತನ್ನ ನವೀಕರಣ ಯೋಜನೆಯು “ಭರವಸೆಯನ್ನು ವ್ಯಕ್ತಪಡಿಸುವ ಕ್ರಿಯೆ” ಎಂದು ಟ್ರಂಪ್ ಘೋಷಿಸಿದ್ದರು.

ಇದಕ್ಕೂ ಮೊದಲು 2009 ರಲ್ಲಿ ಮಿಚೆಲ್ ಒಬಾಮ ತರಕಾರಿ ಉದ್ಯಾನಕ್ಕಾಗಿ ಟೆನಿಸ್ ಕೋರ್ಟ್‌ಗಳ ಪಕ್ಕದಲ್ಲಿರುವ ದಕ್ಷಿಣ ಹುಲ್ಲುಹಾಸಿನ ಮೇಲೆ 1,100 ಚದರ ಅಡಿ ಜಾಗವನ್ನು ಅಗೆಯುವ ಯೋಜನೆಯನ್ನು ಪ್ರಾರಂಭಿಸಿದ ನಂತರ ಉದ್ಯಾನದಲ್ಲಿ ಬದಲಾವಣೆ ಆಯಿತು. ಈ ಯೋಜನೆಯಲ್ಲಿ ಕ್ರಾಬ್ ಸೇಬಿನ ಮರಗಳನ್ನು ಬದಲಾಯಿಸುವುದು, ಬಿಳಿ ಮತ್ತು ಮಸುಕಾದ ಗುಲಾಬಿ ಹೂಗಳು ಒಂದು ರೀತಿಯಲ್ಲಿ, ಮುಕ್ತತೆ ಮತ್ತು ನಮ್ಮ ಒಟ್ಟಾರೆ ಬದುಕಿನ ಪರಿಕಲ್ಪನೆಯಾಗಿದೆ. ಹಾಗಾಗಿ ಅದನ್ನು ವಾಪಸ್ ತನ್ನಿ, ಎಂದು ಯೋಜನೆಯ ಮೇಲ್ವಿಚಾರಣೆಯ ಭೂದೃಶ್ಯ ವಾಸ್ತುಶಿಲ್ಪಿ ಪೆರ್ರಿ ಗಿಲ್ಲಟ್ ಬರೆದಿದ್ದಾರೆ.

ಇದನ್ನೂ ಓದಿ: 

ಅಮೆರಿಕ ಅಧ್ಯಕ್ಷ ಜೋ ಬೈಡನ್​ ಸಾಕು ನಾಯಿ ವೈಟ್​ ಹೌಸ್​ ಕೆಲಸಗಾರನಿಗೆ ಕಚ್ಚಿದ್ದು ಈಗ ಅಂತರಾಷ್ಟ್ರೀಯ ಸುದ್ದಿ!

ವಿಮಾನದ ಮೆಟ್ಟಿಲೇರುವಾಗ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ; ಜೋ ಬೈಡನ್​ ಆರೋಗ್ಯದ ಬಗ್ಗೆ ತಿಳಿಸಿದ ಮಾಧ್ಯಮ ಕಾರ್ಯದರ್ಶಿ

(Over 54000 Americans petitioned Joe Biden to remove changes brought into the White House garden by Melania Trump)