ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿಯಾಗಿದ್ದಕ್ಕಿಂತ ಹೆಚ್ಚು ಸಾಕ್ಷಿ ಬೇಕಾ?; ಇಸ್ಲಮಾಬಾದ್ ಬಣ್ಣ ಬಿಚ್ಚಿಟ್ಟ ಅಭಿಷೇಕ್ ಬ್ಯಾನರ್ಜಿ

ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದರು. ಪಾಕಿಸ್ತಾನದ ವಿರುದ್ಧ ಭಾರತ ಇದಕ್ಕಿಂತ ಹೆಚ್ಚಿನ ಸಾಕ್ಷಿಯೇನು ಕೊಡಲು ಸಾಧ್ಯ? ಎಂದು ಪಶ್ಚಿಮ ಬಂಗಾಳದ ಸಂಸದ ಅಭಿಷೇಕ್ ಬ್ಯಾನರ್ಜಿ ಸಿಂಗಾಪುರದಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ್ದಾರೆ. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಗಡಿಯಾಚೆಗಿನ ಭಯೋತ್ಪಾದನೆಯ ಬೆಂಬಲದ ಪುರಾವೆಗಳನ್ನು ಎತ್ತಿ ತೋರಿಸಿದರು. ಭಯೋತ್ಪಾದಕರ ಅಂತ್ಯಕ್ರಿಯೆಗಳಲ್ಲಿ ಉನ್ನತ ಶ್ರೇಣಿಯ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿಯನ್ನು ಅವರು ಎತ್ತಿ ತೋರಿಸಿದ್ದಾರೆ.

ಉಗ್ರರ ಅಂತ್ಯಕ್ರಿಯೆಯಲ್ಲಿ ಪಾಕ್ ಸೇನಾಧಿಕಾರಿಗಳು ಭಾಗಿಯಾಗಿದ್ದಕ್ಕಿಂತ ಹೆಚ್ಚು ಸಾಕ್ಷಿ ಬೇಕಾ?; ಇಸ್ಲಮಾಬಾದ್ ಬಣ್ಣ ಬಿಚ್ಚಿಟ್ಟ ಅಭಿಷೇಕ್ ಬ್ಯಾನರ್ಜಿ
Abhishek Banerjee

Updated on: May 28, 2025 | 4:29 PM

ಸಿಂಗಾಪುರ, ಮೇ 28: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದೆ ಎಂದು ಒತ್ತಿ ಹೇಳಿದ್ದಾರೆ. ವಿರೋಧ ಪಕ್ಷದ ನಿಲುವಿನ ಕುರಿತು ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, “ಆಡಳಿತ ಪಕ್ಷ ಅಥವಾ ರಾಜಕೀಯ ಪಕ್ಷದೊಂದಿಗೆ ನಾನು ಭಿನ್ನಾಭಿಪ್ರಾಯ ಹೊಂದಿದ್ದರೂ ನನ್ನ ದೇಶದ ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ ನಾನು ದೃಢವಾಗಿ ನಿಂತು ನನ್ನ ರಾಷ್ಟ್ರದ ಹಿತಾಸಕ್ತಿಗಾಗಿ ಸೇವೆ ಸಲ್ಲಿಸುತ್ತೇನೆ. ನನ್ನ ರಾಜಕೀಯ ಹಿತಾಸಕ್ತಿಗಳು ನನ್ನ ರಾಷ್ಟ್ರೀಯ ಹಿತಾಸಕ್ತಿಗೆ ಅಡ್ಡಿಯಾಗಲು ನಾನು ಬಿಡುವುದಿಲ್ಲ” ಎಂದಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲದ ಪುರಾವೆಗಳನ್ನು ಬ್ಯಾನರ್ಜಿ ಮತ್ತಷ್ಟು ಎತ್ತಿ ತೋರಿಸಿದರು. ಭಾರತ ತನ್ನ ದಾಳಿಯಲ್ಲಿ ಹತ್ಯೆಗೈದ ಭಯೋತ್ಪಾದಕರ ಅಂತ್ಯಕ್ರಿಯೆಗಳಲ್ಲಿ ಉನ್ನತ ಶ್ರೇಣಿಯ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದರು. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ? ಎಂದು ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಕಳುಹಿಸಿರುವ ಸಂಸದರ ನಿಯೋಗದ ಭಾಗವಾಗಿರುವ ಅಭಿಷೇಕ್ ಬ್ಯಾನರ್ಜಿ ಸಿಂಗಾಪುರದಲ್ಲಿ ಇಸ್ಲಾಮಾಬಾದ್‌ನ ಮುಖವನ್ನು ಬಯಲು ಮಾಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಭಾರತೀಯ ಸಶಸ್ತ್ರ ಪಡೆಗಳಿಗೆ ಅಮಿತ್ ಶಾ ಶ್ಲಾಘನೆ

ಇದನ್ನೂ ಓದಿ
ಮೇ 29-30ರಂದು ಈ ನಾಲ್ಕು ರಾಜ್ಯಗಳಿಗೆ ಪ್ರಧಾನಿ ಮೋದಿ ಭೇಟಿ
ಅಮೆರಿಕದ ಅಧೀನ ಕಾರ್ಯದರ್ಶಿ ಜೆಫ್ರಿಯನ್ನು ಭೇಟಿಯಾದ ವಿಕ್ರಮ್ ಮಿಸ್ರಿ
ವೀಸಾ ರದ್ದು; ಭಾರತೀಯ, ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಎಚ್ಚರಿಕೆ
ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು; ದ್ವೀಪ ರಾಷ್ಟ್ರಕ್ಕೆ ಭಾರತದ ಸಹಾಯಹಸ್ತ

“ನಿಮ್ಮ ಬಳಿ ಸಾರ್ವಜನಿಕ ವಲಯದಲ್ಲಿ ಉನ್ನತ ಶ್ರೇಣಿಯ ಪಾಕಿಸ್ತಾನಿ ಮಿಲಿಟರಿ ಜನರಲ್ ಅಧಿಕಾರಿಗಳು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದನ್ನು ನೀವು ನೋಡಬಹುದು. ಇದಕ್ಕಿಂತ ಬೇರೆ ಪುರಾವೆ ಬೇರೇನು ಬೇಕು? ನಾವು ನಿಮಗೆ ಬೇರೆ ಏನು ಪುರಾವೆಯಾಗಿ ನೀಡಲು ಸಾಧ್ಯ?” ಎಂದು ಅವರು ಪ್ರಶ್ನಿಸಿದರು.

“ಭಾರತ ಮತ್ತು ಸಿಂಗಾಪುರ ಈ ವರ್ಷ ರಾಜತಾಂತ್ರಿಕ ಸಂಬಂಧಗಳ 60 ವರ್ಷಗಳನ್ನು ಆಚರಿಸುತ್ತಿವೆ. ಇದು ಸಿಂಗಾಪುರದ 60ನೇ ಹುಟ್ಟುಹಬ್ಬವೂ ಆಗಿದೆ. ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಬೆಂಬಲ ನೀಡುವ ಬಗ್ಗೆ ಟರ್ಕಿಗೆ ಕಟು ಸಂದೇಶ ನೀಡಿದ ಭಾರತ

ಸಿಂಗಾಪುರಕ್ಕೆ ತೆರಳಿದ ಸಂಸದರ ಪಕ್ಷದ ನಿಯೋಗದ ನೇತೃತ್ವವನ್ನು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ವಹಿಸಿದ್ದರು. ಇದರಲ್ಲಿ ಅಪರಾಜಿತಾ ಸಾರಂಗಿ (ಬಿಜೆಪಿ), ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಬ್ರಿಜ್ ಲಾಲಾ (ಬಿಜೆಪಿ), ಜಾನ್ ಬ್ರಿಟ್ಟಾಸ್ (ಸಿಪಿಐ-ಎಂ), ಪ್ರಧಾನ್ ಬರುವಾ (ಬಿಜೆಪಿ), ಹೇಮಾಂಗ್ ಜೋಶಿ (ಬಿಜೆಪಿ), ಸಲ್ಮಾನ್ ಖುರ್ಷಿದ್ ಮತ್ತು ಮೋಹನ್ ಕುಮಾರ್ ಸೇರಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ