ಕ್ವೆಟ್ಟಾ ಬಳಿ ಪಾಕಿಸ್ತಾನ ಸೇನೆಯ ವಿಮಾನ ಪತನ; ಇಬ್ಬರು ಪೈಲಟ್​​ಗಳು ಸಜೀವದಹನ

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಬಳಿ ಪಾಕ್ ಸೇನೆಯ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಮೃತ ಪೈಲಟ್‌ಗಳನ್ನು ತರಬೇತುದಾರ ಇನ್‌ಸ್ಟ್ರಕ್ಟರ್ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ತರಬೇತಿ ಪಡೆಯುತ್ತಿದ್ದ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ. "ಮಧ್ಯಾಹ್ನದ ವೇಳೆಗೆ ಪಾಕಿಸ್ತಾನ ಆರ್ಮಿ ಏವಿಯೇಷನ್‌ನ 'ಮುಶಕ್' ತರಬೇತಿ ವಿಮಾನವು ತಾಂತ್ರಿಕ ದೋಷದಿಂದಾಗಿ ಕ್ವೆಟ್ಟಾದ ನವಾನ್ ಕಿಲ್ಲಿ ಬಳಿ ಪತನಗೊಂಡಿದೆ. ಈ ಅಪಘಾತದಲ್ಲಿ ತರಬೇತುದಾರ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ಕ್ಯಾಪ್ಟನ್ ಅಬ್ದುಲ್ ಸಮದ್ ಮೃತಪಟ್ಟಿದ್ದಾರೆ" ಎಂದು ಪಾಕ್ ಸೇನೆ ತಿಳಿಸಿದೆ.

ಕ್ವೆಟ್ಟಾ ಬಳಿ ಪಾಕಿಸ್ತಾನ ಸೇನೆಯ ವಿಮಾನ ಪತನ; ಇಬ್ಬರು ಪೈಲಟ್​​ಗಳು ಸಜೀವದಹನ
ಕ್ವೆಟ್ಟಾ ಬಳಿ ಪಾಕಿಸ್ತಾನ ಸೇನೆಯ ವಿಮಾನ ಪತನ
Image Credit source: X

Updated on: Oct 12, 2026 | 5:03 PM

ಇಸ್ಲಾಮಾಬಾದ್, ಅಕ್ಟೋಬರ್ 12: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಬಳಿ ಪಾಕ್ ಸೇನೆಯ ತರಬೇತಿ ವಿಮಾನವೊಂದು ಪತನಗೊಂಡಿದೆ. ಈ ದುರಂತದಲ್ಲಿ ಇಬ್ಬರು ಪ್ರಮುಖ ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಖಚಿತಪಡಿಸಿದ್ದಾರೆ. ಮೃತರನ್ನು ತರಬೇತುದಾರ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ಶಿಕ್ಷಣಾರ್ಥಿ ಪೈಲಟ್ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.

ಕ್ವೆಟ್ಟಾ ಜಿಲ್ಲೆಯ ನವಾನ್ ಕಿಲ್ಲಿ ಎಂಬ ಪ್ರದೇಶದಲ್ಲಿ ಪಾಕಿಸ್ತಾನ ಆರ್ಮಿ ಏವಿಯೇಷನ್‌ಗೆ ಸೇರಿದ ಮುಶಕ್ ಮಾದರಿಯ ತರಬೇತಿ ವಿಮಾನವು ಎಂದಿನಂತೆ ಹಾರಾಟ ನಡೆಸುತ್ತಿದ್ದಾಗ, ಮಧ್ಯಾಹ್ನದ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡು ನೆಲಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣದಿಂದ ಈ ದುರಂತ ಸಂಭವಿಸಿದ್ದು, ಇಬ್ಬರೂ ಪೈಲಟ್‌ಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ.


ಇದನ್ನೂ ಓದಿ: ಪಾಕಿಸ್ತಾನವನ್ನು ವಿಭಜಿಸಲು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ಲ್ಯಾನ್? 4 ಪ್ರಾಂತ್ಯಗಳ ಪುನರ್‌ರಚನೆ ಚರ್ಚೆ

ಈ ದುರಂತಕ್ಕೆ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.


ಜೂನ್ ತಿಂಗಳಲ್ಲಿ ಮುಜಫರಾಬಾದ್ ಬಳಿ ಪಾಕಿಸ್ತಾನ ಸೇನೆಯ Mi-17 ಹೆಲಿಕಾಪ್ಟರ್ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷದಿಂದ ಪತನಗೊಂಡು ಸಿಬ್ಬಂದಿ ಮೃತಪಟ್ಟಿದ್ದರು. ಜೂನ್ ತಿಂಗಳಲ್ಲಿ ಮರ್ದಾನ್‌ನಲ್ಲಿ ತರಬೇತಿ ನಿರತ ವಾಯುಪಡೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಿಯಾಮೆರ್ ಜಿಲ್ಲೆಯ ಚಿಲಾಸ್ ಪಟ್ಟಣದಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡು ಐವರು ಸಿಬ್ಬಂದಿ ಮೃತಪಟ್ಟಿದ್ದರು.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us