ಪೆಟ್ರೋಲ್, ಗ್ಯಾಸ್ ಬಿಕ್ಕಟ್ಟಿಗೆ ನಲುಗಿದ ಪಾಕ್; ಪಾಕಿಸ್ತಾನದ ಗಣರಾಜ್ಯೋತ್ಸವ ಆಚರಣೆಯೇ ರದ್ದು

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟಿನ ಬಿಸಿ ಪಾಕಿಸ್ತಾನಕ್ಕೆ ಜೋರಾಗಿಯೇ ತಟ್ಟಿದೆ. ಮಾರ್ಚ್ 23ರಂದು ಪಾಕಿಸ್ತಾನದ ಇಸ್ಲಾಮಿಕ್ ಗಣರಾಜ್ಯೋತ್ಸವದಂದು ನಿಗದಿಯಾಗಿದ್ದ ಮಿಲಿಟರಿ ಮೆರವಣಿಗೆ ಮತ್ತು ವಿಧ್ಯುಕ್ತ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿ ಇಂದು ಪ್ರಕಟಿಸಿದೆ. ಇದೀಗ ನಡೆಯುತ್ತಿರುವ ಗಲ್ಫ್ ರಾಷ್ಟ್ರಗಳ ತೈಲ ಬಿಕ್ಕಟ್ಟು ಮತ್ತು ಸರ್ಕಾರ ಘೋಷಿಸಿದ ಕಠಿಣ ಕ್ರಮಗಳ ಹಿನ್ನೆಲೆಯಲ್ಲಿ ಮಾರ್ಚ್ 23 ರಂದು ನಿಗದಿಯಾಗಿದ್ದ ಪಾಕಿಸ್ತಾನ ದಿನಾಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ.

ಪೆಟ್ರೋಲ್, ಗ್ಯಾಸ್ ಬಿಕ್ಕಟ್ಟಿಗೆ ನಲುಗಿದ ಪಾಕ್; ಪಾಕಿಸ್ತಾನದ ಗಣರಾಜ್ಯೋತ್ಸವ ಆಚರಣೆಯೇ ರದ್ದು
Shehbaz Sharif

Updated on: Mar 18, 2026 | 7:40 PM

ಇಸ್ಲಮಾಬಾದ್, ಮಾರ್ಚ್ 18: ವಿಶ್ವಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದಾಗಿ ನೆರೆಯ ದೇಶ ಪಾಕಿಸ್ತಾನವೂ ಕಂಗೆಟ್ಟಿದೆ. ಇದೇ ಕಾರಣದಿಂದ ಈ ವರ್ಷ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ದಿನಾಚರಣೆ'(ಪಾಕಿಸ್ತಾನದ ರಿಪಬ್ಲಿಕ್ ಡೇ) ಆಚರಿಸದಿರಲು ನಿರ್ಧರಿಸಲಾಗಿದೆ. ಮಾರ್ಚ್ 23ರಂದು ಪಾಕಿಸ್ತಾನದ (Pakistan)  ಗಣರಾಜ್ಯೋತ್ಸವ ಆಚರಿಸಬೇಕಾಗಿತ್ತು. ಆದರೆ, ಹಣ ಹಾಗೂ ಇಂಧನದ ಬಿಕ್ಕಟ್ಟಿನಿಂದ ಈ ಸಂಭ್ರಮಾಚರಣೆಯನ್ನು ರದ್ದುಗೊಳಿಸಲಾಗಿದೆ.

“ಸಹೋದರರೇ, ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಸಂಭ್ರಮಾಚರಿಸಬೇಡಿ. ಕೇಕ್ ಕತ್ತರಿಸಿ ಮನೆಗೆ ಹೋಗಿ!” ಎಂದು ಸರ್ಕಾರದಿಂದ ಪಾಕಿಸ್ತಾನದ ಜನರಿಗೆ ಸೂಚನೆ ನೀಡಲಾಗಿದೆ.

ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧವು ಪಾಕಿಸ್ತಾನವನ್ನು ಎಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ಪಾಕಿಸ್ತಾನ ದಿನಾಚರಣೆಯ ಮೆರವಣಿಗೆಯನ್ನು ಕೂಡ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಿಟ್ಟ ಘೋಷಣೆ ಮಾಡಿದೆ. ಈ ವರ್ಷ ಯಾವುದೇ ಮಿಲಿಟರಿ ಮೆರವಣಿಗೆ ಇರುವುದಿಲ್ಲ, ಯಾವುದೇ ಅಲಂಕಾರಿಕ ಸಮಾರಂಭಗಳಿರುವುದಿಲ್ಲ ಮತ್ತು ಟ್ಯಾಂಕ್-ಕ್ಷಿಪಣಿ ಪ್ರದರ್ಶನಗಳಿರುವುದಿಲ್ಲ. ಗಲ್ಫ್ ರಾಷ್ಟ್ರಗಳ ತೈಲ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ದಿವಾಳಿಯಾಗಿದೆ.

ಇದನ್ನೂ ಓದಿ: ಬಹ್ರೇನ್ ಮೇಲಿನ ಇರಾನ್ ದಾಳಿಯ ವಿಡಿಯೋ ಶೇರ್ ಮಾಡಿದ್ದಕ್ಕೆ 5 ಪಾಕಿಸ್ತಾನಿ ಪ್ರಜೆಗಳ ಬಂಧನ

ಪಾಕಿಸ್ತಾನ ಈಗಾಗಲೇ IMFನಿಂದ ಸಾಲ ಪಡೆದಿದೆ. ಆ ಸಾಲದ ಭಾರದ ಜೊತೆಗೆ ಇದೀಗ ತೈಲ ಬಿಕ್ಕಟ್ಟು ಕೂಡ ಉಂಟಾಗಿದೆ. ಹೀಗಾಗಿ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಜೆಟ್‌ಗಳನ್ನು ಹಾರಿಸಲು ಹಣ ಮತ್ತು ಇಂಧನವೆರಡೂ ಇಲ್ಲದೆ ಪಾಕ್ ಈ ನಿರ್ಧಾರ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಪಾಕಿಸ್ತಾನ ದಿನದಂದು ಮೆರವಣಿಗೆ ಇರುವುದಿಲ್ಲ ಎಂದು ಘೋಷಿಸಿದೆ.

ಇದನ್ನೂ ಓದಿ: ಪಾಕಿಸ್ತಾನದ ಮೇಲಿನ ದ್ವೇಷದಿಂದ ಭಾರತ, ಇರಾನ್, ಅಫ್ಘಾನ್ ಒಂದಾಗಿ ಸಂಚು; ಖವಾಜಾ ಆಸಿಫ್ ಆರೋಪ

ಮಾರ್ಚ್ 23ರಂದು ಪ್ರಧಾನಿಯವರು ಸರಳ ಧ್ವಜಾರೋಹಣ ಸಮಾರಂಭವನ್ನು ಘೋಷಿಸಿದ್ದಾರೆ. ಸಚಿವಾಲಯಗಳು ಮತ್ತು ಇಲಾಖೆಗಳು ಸರಳ ಧ್ವಜಾರೋಹಣ ಮಾಡುವಂತೆ ಸೂಚಿಸಲಾಗಿದೆ. ಆ ದಿನ ಪ್ರಧಾನಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಯಾವುದೇ ಭಾಷಣ, ಮೆರವಣಿಗೆ, ಸಮಾರಂಭಗಳು ಇರುವುದಿಲ್ಲ. ಪಾಕಿಸ್ತಾನದಲ್ಲಿ ಈಗಾಗಲೇ ಸರ್ಕಾರಿ ವಾಹನಗಳಿಗೆ ಶೇ. 50ರಷ್ಟು ಕಡಿಮೆ ಇಂಧನ, ವಾರಕ್ಕೆ 4 ದಿನಗಳ ಕಚೇರಿ ಸಮಯ, ಅರ್ಧದಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡುವುದು ಮತ್ತು SOE ಉದ್ಯೋಗಿಗಳಿಗೆ ಶೇ. 5ರಿಂದ ಶೇ. 30ರವರೆಗೆ ವೇತನ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ 

Follow Us