Balochistan Blast: ಬಲೂಚಿಸ್ತಾನದಲ್ಲಿ ಭಾರೀ ಸ್ಫೋಟ; ಪಾಕ್ ಪೊಲೀಸ್ ಸಾವು, 17 ಜನರಿಗೆ ಗಾಯ

Pakistan Blast: ಪಾಕಿಸ್ತಾನದ ಕ್ವೆಟ್ಟಾ ಸರ್ಯಾಬ್ ರಸ್ತೆಯಲ್ಲಿರುವ ಬಲೂಚಿಸ್ತಾನ ವಿಶ್ವವಿದ್ಯಾಲಯದ ಬಳಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 13 ಪೊಲೀಸರು ಸೇರಿ 17 ಜನರು ಗಾಯಗೊಂಡಿದ್ದಾರೆ.

Balochistan Blast: ಬಲೂಚಿಸ್ತಾನದಲ್ಲಿ ಭಾರೀ ಸ್ಫೋಟ; ಪಾಕ್ ಪೊಲೀಸ್ ಸಾವು, 17 ಜನರಿಗೆ ಗಾಯ
ಸ್ಫೋಟದಿಂದ ಛಿದ್ರವಾದ ಪೊಲೀಸ್ ವಾಹನ

ಬಲೂಚಿಸ್ತಾನ:‌ ಪಾಕಿಸ್ತಾನದ ಬಲೂಚಿಸ್ತಾನದ ಬಳಿ ಮತ್ತೊಮ್ಮೆ ಭಾರೀ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನದ ಓರ್ವ ಪೊಲೀಸ್ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 13 ಪೊಲೀಸರು ಸೇರಿ 17 ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಕ್ವೆಟ್ಟಾ ಸರ್ಯಾಬ್ ರಸ್ತೆಯಲ್ಲಿರುವ ಬಲೂಚಿಸ್ತಾನ ವಿಶ್ವವಿದ್ಯಾಲಯದ ಬಳಿ ಸ್ಫೋಟ ಸಂಭವಿಸಿದೆ.

ಪೊಲೀಸ್ ಮೂಲಗಳ ಪ್ರಕಾರ, ಸರ್ಯಾಬ್ ರಸ್ತೆಯಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಬಳಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 17ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೆ ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಬಗ್ಗೆ ಬಲೂಚಿಸ್ತಾನ ಸರ್ಕಾರದ ವಕ್ತಾರ ಲಿಯಾಕತ್ ಶಹ್ವಾನಿ ಮಾಹಿತಿ ನೀಡಿದ್ದು, ಗೇಟ್ ಹೊರಭಾಗದಲ್ಲಿ ನಿಂತಿದ್ದ ಪೊಲೀಸ್ ಟ್ರಕ್ ಅನ್ನು ಗುರಿಯಾಗಿಸಿಕೊಂಡು ಸ್ಫೋಟ ಮಾಡಲಾಗಿದೆ. ಬೈಕ್​ನಲ್ಲಿ ಡಿವೈಸ್ ಅನ್ನು ಇರಿಸಲಾಗಿತ್ತು. ಆ ಡಿವೈಸ್ ಸ್ಫೋಟವಾಗಿದ್ದರಿಂದ ಪೊಲೀಸ್ ಸಾವನ್ನಪ್ಪಿದ್ದಾರೆ. ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಈ ದಾಳಿಗೆ ಯಾರು ಕಾರಣರೋ ಅವರನ್ನು ಆದಷ್ಟು ಬೇಗ ಬಂಧಿಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದಿದ್ದಾರೆ.

ಗಾಯಗೊಂಡ ಜನರನ್ನು ಸಿವಿಲ್ ಆಸ್ಪತ್ರೆ ಕ್ವೆಟ್ಟಾ ಮತ್ತು ಬೋಲಾನ್ ಮೆಡಿಕಲ್ ಕಾಂಪ್ಲೆಕ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಫೋಟದ ಹಿಂದಿನ ಆರೋಪಿಗಳು ಮತ್ತು ಸಂಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಗೊಂಡ 17ರಲ್ಲಿ 13 ಮಂದಿ ಪೋಲಿಸರಾಗಿದ್ದು, ಉಳಿದವರು ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಾಗಿದ್ದಾರೆ.

ಇದನ್ನೂ ಓದಿ: Chhattisgarh Blast: ರಾಯ್ಪುರ ರೈಲ್ವೆ ಸ್ಟೇಶನ್​​ನಲ್ಲಿ ಸ್ಫೋಟ; ಸಿಆರ್​ಪಿಎಫ್​​ನ ಆರು ಯೋಧರಿಗೆ ತೀವ್ರ ಗಾಯ

ಯುಎಸ್​​ನ ಈ ವಿಶ್ವವಿದ್ಯಾಲಯದಲ್ಲಿ ಒಂದೇ ವಾರದಲ್ಲಿ 2ನೇ ಬಾರಿ ಗುಂಡಿನ ದಾಳಿ; ಒಬ್ಬ ಸಾವು, ಏಳುಮಂದಿಗೆ ಗಾಯ

Click on your DTH Provider to Add TV9 Kannada