China Floods: ಶತಮಾನದ ಪ್ರವಾಹಕ್ಕೆ ಹೆನಾನ್​ ತತ್ತರ; ಸುರಂಗ ಮಾರ್ಗದ ರೈಲು, ಶಾಪಿಂಗ್ ಮಾಲ್​​ಗಳಲ್ಲಿ ಸಿಕ್ಕಿಬಿದ್ದಿರುವ ಜನರು

Zhengzhou: ಚೀನಾದ ಮಾಧ್ಯಮಗಳು, ಬೇರೆ ನಗರಗಳ ಜನರು ಹೆನಾನ್​​ ಪ್ರಾಕೃತಿಕ ವಿಪತ್ತಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಭೀಕರ ಪ್ರವಾಹಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ.

China Floods: ಶತಮಾನದ ಪ್ರವಾಹಕ್ಕೆ ಹೆನಾನ್​ ತತ್ತರ; ಸುರಂಗ ಮಾರ್ಗದ ರೈಲು, ಶಾಪಿಂಗ್ ಮಾಲ್​​ಗಳಲ್ಲಿ ಸಿಕ್ಕಿಬಿದ್ದಿರುವ ಜನರು
ಝೆಂಗ್​ಝು ನಗರದ ಚಿತ್ರಣ

ಚೀನಾದ ಮಧ್ಯಪ್ರಾಂತ್ಯ ಹೆನಾನ್ (Henan)​ನಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಭೀಕರ ಪ್ರವಾಹ (China Floods) ಪರಿಸ್ಥಿತಿ ಉಂಟಾಗಿದೆ. 100 ವರ್ಷಗಳಲ್ಲಿ ಚೀನಾ(China) ಈ ಮಟ್ಟದ ಮಳೆ, ಪ್ರವಾಹವನ್ನು ಕಂಡಿರಲಿಲ್ಲ. ಹೆನಾನ್ ಬಹುತೇಕ ನಗರಗಳಲ್ಲಿ ಎಲ್ಲೇ ನೋಡಿದರೂ ನೀರು..ನೀರು. ರಸ್ತೆ, ಮನೆಗಳೆಲ್ಲ ಮುಳುಗಿನಿಂತಿವೆ. ಅದರಲ್ಲೂ ಐಫೋನ್​ ಸಿಟಿ (iPhone City)ಯೆಂದೇ ಖ್ಯಾತಿಯಾಗಿರುವ ಝೆಂಗ್​ಝು(Zhengzhou) ನಗರದಲ್ಲಿ ಜು.20ರಂದು ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ಅಂದರೆ ಒಂದೇ ತಾಸಿನಲ್ಲಿ ಬರೋಬ್ಬರಿ 20 ಸೆಂಟಿಮೀಟರ್​ ಮಳೆಯಾಗಿದೆ. ಸುಮಾರು 1.2 ಕೋಟಿ ಜನಸಂಖ್ಯೆ ಹೊಂದಿರುವ ಈ ನಗರದಲ್ಲೀಗ ನಾಗರಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಅತಿಯಾದ ಪ್ರವಾಹದಿಂದ ಜನರಿಗೆ ಒಂದಿನಿತೂ ಕದಲಲು ಸಾಧ್ಯವಾಗುತ್ತಿಲ್ಲ. ಜಲಾವೃತಗೊಂಡ ರಸ್ತೆಯಲ್ಲಿ, ಶಾಪಿಂಗ್​ ಮಾಲ್​ನಲ್ಲಿ, ಕಚೇರಿಗಳಲ್ಲಿ, ಸುರಂಗ ಮಾರ್ಗದಲ್ಲಿ ರೈಲುಗಳಲ್ಲಿ ಸಿಲುಕಿಕೊಂಡವರು ಅನೇಕ ಮಂದಿ. ಎಲ್ಲೆಲ್ಲೂ ನೀರೇ ಇರುವ ಕಾರಣಕ್ಕೆ ಅಲ್ಲಿಂದ ಹೊರಹೋಗಲೂ ಸಾಧ್ಯವಾಗುತ್ತಿಲ್ಲ.

ಚೀನಾದ ಮಾಧ್ಯಮಗಳು, ಬೇರೆ ನಗರಗಳ ಜನರು ಹೆನಾನ್​​ ಪ್ರಾಕೃತಿಕ ವಿಪತ್ತಿನ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ಭೀಕರ ಪ್ರವಾಹಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಸುರಂಗ ಮಾರ್ಗದಲ್ಲಿ ಸಿಲುಕಿರುವ ಪ್ರಯಾಣಿಕರೇ ಉಸಿರು ಚೆಲ್ಲುತ್ತಿದ್ದಾರೆ. ಇನ್ನೂ ಮೂರುದಿನಗಳ ಕಾಲ ತುಂಬ ಮಳೆಯಾಗುವ ಸಾಧ್ಯತೆ ಇದೆ ಎಂದು ಅಲ್ಲಿನ ಹವಾಮಾನ ತಜ್ಞರು ಅಂದಾಜಿಸಿರುವ ಬೆನ್ನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಹೆಚ್ಚಿನ ಗಮನ ಹರಿಸಿದ್ದಾರೆ. ಸುಮಾರು 5700 ಯೋಧರು ಹೆನಾನ್​ನತ್ತ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ, ನಾಪತ್ತೆಯಾದವರ ಹುಡುಕುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇಷ್ಟು ಪ್ರವಾಹಕ್ಕೆ ಕಾರಣವೇನು?
ಚೀನಾದ ಮಧ್ಯಪ್ರಾಂತ್ಯದಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗುತ್ತಿರಲು ಕಾರಣ ಇನ್​ ಫಾ ಚಂಡಮಾರುತ ಎಂದು ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್ ವರದಿ ಮಾಡಿದೆ. ಅದರಲ್ಲೂ ಝೆಂಗ್​ಝು ನಗರ ತೈಹಾಂಗ್ ಮತ್ತು ಫ್ಯೂನಿಯು ಪರ್ವತಗಳಿಂದ ಆವೃತವಾಗಿರುವುದರಿಂದ ಮತ್ತಷ್ಟು ಬಾಧಿಸುತ್ತಿದೆ ಎಂದು ಹೇಳಿದೆ. ಇಲ್ಲಿವೆ ನೋಡಿ ಚೀನಾ ಮಧ್ಯಪ್ರಾಂತ್ಯದ ಭೀಕರ ಫೋಟೋ, ವಿಡಿಯೋಗಳು..

blockquote class=”twitter-tweet”>

Subway passengers trapped in the water. pic.twitter.com/IyqmKN7WEr

— Manya Koetse (@manyapan) July 20, 2021

ಇದನ್ನೂ ಓದಿ: ವಿಚಾರಣೆ ವಿಳಂಬವಾಗಿದ್ದಕ್ಕೆ ‘ತಾರೀಖ್ ಪೆ ತಾರೀಖ್’ ಡೈಲಾಗ್ ಕಿರುಚಿ ನ್ಯಾಯಾಲಯದ ಕುರ್ಚಿ,ಕಂಪ್ಯೂಟರ್ ಕಿತ್ತೆಸೆದ ಭೂಪ

People Stuck Inside Trains Malls due to Floods In Henan province Of China