AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರ್ವೇಜ್ ಮುಷರಫ್ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದರು; ಮಾಜಿ ಸಿಐಎ ಅಧಿಕಾರಿ ಸ್ಫೋಟಕ ಮಾಹಿತಿ

ಪಾಕಿಸ್ತಾನದಲ್ಲಿ ಪರ್ವೇಜ್ ಮುಷರಫ್ ಆಳ್ವಿಕೆಯಲ್ಲಿ ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿತ್ತು ಎಂದು ಮಾಜಿ ಸಿಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಪಾಕ್ ದೇಶದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದರು ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿದ್ದಾರೆ. ಇದು ಸಂಚಲನ ಮೂಡಿಸಿದೆ.

ಪರ್ವೇಜ್ ಮುಷರಫ್ ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದರು; ಮಾಜಿ ಸಿಐಎ ಅಧಿಕಾರಿ ಸ್ಫೋಟಕ ಮಾಹಿತಿ
Pervez Musharraf
ಸುಷ್ಮಾ ಚಕ್ರೆ
|

Updated on: Oct 25, 2025 | 4:19 PM

Share

ಇಸ್ಲಮಾಬಾದ್, ಅಕ್ಟೋಬರ್ 25: ಪಾಕಿಸ್ತಾನದ (Pakistan) ಸರ್ವಾಧಿಕಾರಿ ಪರ್ವೇಜ್ ಮುಷರಫ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕದ ಪೆಂಟಗನ್‌ಗೆ ಹಸ್ತಾಂತರಿಸಿದರು ಮತ್ತು ವಾಷಿಂಗ್ಟನ್ ಒಂದು ರೀತಿಯಲ್ಲಿ ಅವರನ್ನು ಖರೀದಿಸಿತ್ತು ಎಂದು ಮಾಜಿ ಸಿಐಎ ಅಧಿಕಾರಿ ಜಾನ್ ಕಿರಿಯಾಕೌ ಹೇಳಿದ್ದಾರೆ.

“ನಾನು 2002ರಲ್ಲಿ ಪಾಕಿಸ್ತಾನದಲ್ಲಿದ್ದಾಗ ಪೆಂಟಗನ್ ಪಾಕಿಸ್ತಾನಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುತ್ತಿದೆ ಎಂದು ನನಗೆ ಅನಧಿಕೃತವಾಗಿ ತಿಳಿಸಲಾಯಿತು. ಪರ್ವೇಜ್ ಮುಷರಫ್ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ” ಎಂದು ಕಿರಿಯಾಕೌ ಹೇಳಿದ್ದಾರೆ.

ಇದನ್ನೂ ಓದಿ: ಐಎನ್ಎಸ್​​ ವಿಕ್ರಾಂತ್​​ನಿಂದ ಪಾಕಿಸ್ತಾನದ ನಿದ್ರೆ ಹಾರಿಹೋಯಿತು; ನೌಕಾಪಡೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಸೆಪ್ಟೆಂಬರ್ 11, 2001ರ ದಾಳಿಯ ನಂತರ ಪರ್ವೇಜ್ ಮುಷರಫ್ ನೇತೃತ್ವದ ಪಾಕಿಸ್ತಾನವು ಅಮೆರಿಕ ನೇತೃತ್ವದ “ಭಯೋತ್ಪಾದನೆಯ ವಿರುದ್ಧದ ಯುದ್ಧ”ದಲ್ಲಿ ಮುಂಚೂಣಿಯ ಮಿತ್ರ ರಾಷ್ಟ್ರವಾಯಿತು.

“ಪಾಕಿಸ್ತಾನ ಸರ್ಕಾರದೊಂದಿಗಿನ ನಮ್ಮ ಸಂಬಂಧಗಳು ತುಂಬಾ ಚೆನ್ನಾಗಿತ್ತು. ಆ ಸಮಯದಲ್ಲಿ ಜನರಲ್ ಪರ್ವೇಜ್ ಮುಷರಫ್ ಅಧಿಕಾರದಲ್ಲಿದ್ದರು. ಯುನೈಟೆಡ್ ಸ್ಟೇಟ್ಸ್ ಸರ್ವಾಧಿಕಾರಿಗಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತದೆ. ಏಕೆಂದರೆ, ಆಗ ನೀವು ಸಾರ್ವಜನಿಕ ಅಭಿಪ್ರಾಯದ ಬಗ್ಗೆ ಚಿಂತಿಸಬೇಕಾಗಿಲ್ಲ. ನೀವು ಇನ್ನು ಮುಂದೆ ಮಾಧ್ಯಮದ ಬಗ್ಗೆ ಚಿಂತಿಸಬೇಕಾಗಿಲ್ಲ. ಆದ್ದರಿಂದ ನಾವು ಮೂಲಭೂತವಾಗಿ ಪರ್ವೇಜ್ ಮುಷರಫ್ ಅವರನ್ನು ಖರೀದಿಸಿದ್ದೆವು” ಎಂದು ಅವರು ಸುದ್ದಿ ಸಂಸ್ಥೆ ANI ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕಾಬೂಲ್ ಭಾರತದ ಕೈಗೊಂಬೆಯಾಗುತ್ತಿದೆ; ಎಲ್ಲ ಅಫ್ಘಾನಿಗಳಿಗೆ ವಾಪಾಸ್ ತೆರಳಲು ಪಾಕಿಸ್ತಾನ ಸಚಿವ ಖವಾಜಾ ಆಸಿಫ್ ಸೂಚನೆ

ಪರ್ವೇಜ್ ಮುಷರಫ್ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ನಿಯಂತ್ರಣವನ್ನು ಅಮೆರಿಕಕ್ಕೆ ಹಸ್ತಾಂತರಿಸಿದರು ಎಂದು ಕಿರಿಯಾಕೌ ANIಗೆ ತಿಳಿಸಿದ್ದಾರೆ. ಮುಷರಫ್ ಎರಡು ಆಟವಾಡಿದ್ದಾರೆ. ಅವರು ಸಾರ್ವಜನಿಕವಾಗಿ ಅಮೆರಿಕದ ಪರವಾಗಿ ನಿಂತು, ಪಾಕಿಸ್ತಾನದ ಮಿಲಿಟರಿ ಮತ್ತು ಉಗ್ರಗಾಮಿಗಳು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರಿಸಲು ರಹಸ್ಯವಾಗಿ ಅವಕಾಶ ನೀಡಿದರು ಎಂದು ಮಾಜಿ ಸಿಐಎ ಅಧಿಕಾರಿ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ