AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ, ಭಾರತಕ್ಕೆ ಸಿಗಲಿದೆಯೇ ಜಾಗತಿಕ ಇಂಧನ ಬಲ ತರುವ ‘ಯುರೇನಿಯಂ’?

ಪ್ರಧಾನಿ ಮೋದಿ ಆಸ್ಟ್ರೇಲಿಯಾ ಭೇಟಿಯಲ್ಲಿ ಇಂಧನ ಭದ್ರತೆ ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಒತ್ತು ನೀಡಲಾಗಿದೆ. ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಜೊತೆಗಿನ ಮಾತುಕತೆಯಲ್ಲಿ ಯುರೇನಿಯಂ ಒಪ್ಪಂದವು ಭಾರತದ ಪರಮಾಣು ಇಂಧನ ಅಗತ್ಯಗಳನ್ನು ಪೂರೈಸುವ ನಿರೀಕ್ಷೆಯಿದೆ. ಆರ್ಥಿಕ ಸಹಕಾರ ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸಲಾಗಿದ್ದು, ಅನಿವಾಸಿ ಭಾರತೀಯರ ಸಮಾವೇಶವು ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ, ಭಾರತಕ್ಕೆ ಸಿಗಲಿದೆಯೇ ಜಾಗತಿಕ ಇಂಧನ ಬಲ ತರುವ 'ಯುರೇನಿಯಂ'?
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Jul 09, 2026 | 10:12 AM

Share

ಮೆಲ್ಬೋರ್ನ್, ಜುಲೈ 09: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮೂರು ರಾಷ್ಟ್ರಗಳ ಅಧಿಕೃತ ಪ್ರವಾಸದ ಎರಡನೇ ಹಂತವಾಗಿ ಗುರುವಾರ ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಾಗತಿಕ ಪೂರೈಕೆ ಸರಪಳಿ ಅಡಚಣೆ ಮತ್ತು ಇಂಧನ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನೈಸರ್ಗಿಕ ಹಾಗೂ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಗಿ ಮುಂದುವರೆಯಲಿದೆ ಎಂದು ಎರಡೂ ದೇಶಗಳ ನಾಯಕರು ಘೋಷಿಸಿದ್ದಾರೆ.

‘ಮಾ ತುಜೆ ಸಲಾಮ್’ ಗೀತೆಗೆ ಮನಸೋತ ಮೋದಿ!

ಆಸ್ಟ್ರೇಲಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅಲ್ಲಿನ ಅನಿವಾಸಿ ಭಾರತೀಯರು ಅಭೂತಪೂರ್ವ ಸ್ವಾಗತ ನೀಡಿದರು. ಸ್ವಾಗತ ಸಮಾರಂಭದಲ್ಲಿ ಆಸ್ಟ್ರೇಲಿಯನ್-ಭಾರತ ಆರ್ಕೆಸ್ಟ್ರಾ ತಂಡವು ಪ್ರಸ್ತುತಪಡಿಸಿದ ‘ಮಾ ತುಜೆ ಸಲಾಮ್’  ಸಂಗೀತಕ್ಕೆ ಪ್ರಧಾನಿ ಮನಸೋತರು. ನಾವು ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಆಸ್ಟ್ರೇಲಿಯಾದ ಮಣ್ಣಿನಲ್ಲಿ ಮೂಡಿಬಂದ ಈ ಸಂಗೀತ ಅದರ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ, ಎಂದು ಮೋದಿ ಶ್ಲಾಘಿಸಿದರು.

ಇಂಧನ ಕ್ರಾಂತಿಗೆ ‘ಯುರೇನಿಯಂ’ ಒಪ್ಪಂದದ ಆಸೆ

ಆಸ್ಟ್ರೇಲಿಯನ್ ಮೀಡಿಯಾಗಳ ವರದಿ ಪ್ರಕಾರ, ಭಾರತದ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಅಗತ್ಯವಿರುವ ಯುರೇನಿಯಂ ರಫ್ತು ಒಪ್ಪಂದವು ಈ ಪ್ರವಾಸದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. 2014ರಲ್ಲೇ ಉಭಯ ದೇಶಗಳ ನಡುವೆ ಪರಮಾಣು ಒಪ್ಪಂದವಾಗಿದ್ದರೂ, ಕಟ್ಟುನಿಟ್ಟಿನ ನಿಯಮಗಳಿಂದಾಗಿ ರಫ್ತು ಸೀಮಿತವಾಗಿತ್ತು. ಈಗ ಇಂಧನ ಉತ್ಪಾದನೆಯಂತಹ ಶಾಂತಿಯುತ ಉದ್ದೇಶಗಳಿಗಾಗಿ ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ನೀಡಲು ಒಲವು ತೋರಿದೆ.

ರಫ್ತು ದ್ವಿಗುಣಗೊಳಿಸಿದ ಇಸಿಟಿಎ ಒಪ್ಪಂದ

2022 ರಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ಸಹಿ ಹಾಕಲಾದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ನಂತರ ಭಾರತದಿಂದ ಆಸ್ಟ್ರೇಲಿಯಾಕ್ಕೆ ಆಗುವ ರಫ್ತು ಪ್ರಮಾಣ ದುಪ್ಪಟ್ಟಾಗಿದೆ. ಪ್ರಸ್ತುತ ಚೀನಾ, ಜಪಾನ್, ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಂತರ ಭಾರತವು ಆಸ್ಟ್ರೇಲಿಯಾದ 5ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.

ಮತ್ತಷ್ಟು ಓದಿ: ಇಂಡೋನೇಷ್ಯಾದಲ್ಲಿ ಪ್ರಧಾನಿ ಮೋದಿ ಭಾಷಣ; ‘ಕುಚ್ ಕುಚ್ ಹೋತಾ ಹೈ’ ಡೈಲಾಗ್ ಬಳಕೆಗೆ ಕರಣ್ ಸಂತಸ

ಭಯೋತ್ಪಾದನೆ ನಿಗ್ರಹಕ್ಕೆ ಒತ್ತು: ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಉಗ್ರವಾದವನ್ನು ಮಟ್ಟಹಾಕಲು ಜಂಟಿ ಕಾರ್ಯಾಚರಣೆಗೆ ಕಠಿಣ ಒತ್ತು ನೀಡಲಾಗಿದೆ.

ಹಿಂದೂ-ಮಹಾಸಾಗರದಲ್ಲಿ ನಿಗಾ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಹೆಚ್ಚಿಸಲು ಮತ್ತು ಕರಾವಳಿ ಕಣ್ಗಾವಲು ಬಲಪಡಿಸಲು ವಿಶೇಷ ಕಡಲ ಭದ್ರತಾ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.

ಖನಿಜ ಕಾರಿಡಾರ್ ಸ್ಥಾಪನೆ: ಭವಿಷ್ಯದ ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅತ್ಯಂತ ಅಗತ್ಯವಿರುವ ಲಿತಿಯಂ ಹಾಗೂ ಕೋಬಾಲ್ಟ್‌ನಂತಹ ನಿರ್ಣಾಯಕ ಖನಿಜಗಳ ಪೂರೈಕೆಗಾಗಿ ಉಭಯ ದೇಶಗಳು ಜಂಟಿ ‘ಖನಿಜ ಕಾರಿಡಾರ್’ ರಚಿಸಲಿವೆ.

ಸೈಬರ್ ಮತ್ತು ತಂತ್ರಜ್ಞಾನ ಭದ್ರತೆ: ಜಾಗತಿಕ ಪೂರೈಕೆ ಸರಪಳಿಯನ್ನು ಚೀನಾದ ಹಿಡಿತದಿಂದ ಮುಕ್ತಗೊಳಿಸಲು ಮತ್ತು ಸೈಬರ್ ಸುರಕ್ಷತೆಯನ್ನು ಹೆಚ್ಚಿಸಲು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಹತ್ವದ ‘PACTS’ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಮೋದಿ ಮೋದಿ ಕೂಗು

ಗುರುವಾರ ಸಂಜೆ ಮೆಲ್ಬೋರ್ನ್‌ನ ಐತಿಹಾಸಿಕ ಕ್ರೀಡಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಸಹಸ್ರಾರು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸದ್ಯ ಸುಮಾರು 10 ಲಕ್ಷಕ್ಕೂ ಹೆಚ್ಚು ಭಾರತೀಯ ಮೂಲದ ಜನರಿದ್ದಾರೆ. ಕೆಲವು ಪ್ರತಿಭಟನೆಗಳ ಸುಳಿವು ಸಿಕ್ಕಿರುವುದರಿಂದ ಕ್ರೀಡಾಂಗಣದ ಸುತ್ತಲೂ ರಕ್ಷಣಾ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಕ್ಕೆ ನೇರ ಪಯಣ

ಇದಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ ಯಶಸ್ವಿ ಪ್ರವಾಸ ಮುಗಿಸಿದ್ದ ಮೋದಿ, ಅಲ್ಲಿನ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ರಕ್ಷಣೆ, ಡಿಜಟಲ್ ತಂತ್ರಜ್ಞಾನ ಹಾಗೂ ಕಡಲ ಭದ್ರತೆ ಸೇರಿದಂತೆ 14 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಅಲ್ಲದೆ ಪ್ರಸಿದ್ಧ ಪ್ರಂಬನನ್ ಶಿವ ದೇವಾಲಯದ ಜಂಟಿ ಸಂರಕ್ಷಣಾ ಯೋಜನೆಗೂ ಚಾಲನೆ ನೀಡಿದ್ದರು. ಆಸ್ಟ್ರೇಲಿಯಾದಲ್ಲಿ ತಮ್ಮ ರಾಜತಾಂತ್ರಿಕ ಕಾರ್ಯಕ್ರಮಗಳನ್ನು ಮುಗಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:31 am, Thu, 9 July 26

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ