ಪಹಲ್ಗಾಮ್ ದಾಳಿಗೂ ಪಾಕ್ಗೂ ಇರುವ ನಂಟು ಖಾತ್ರಿಯಾಯ್ತು, ಪಿಒಕೆಯಲ್ಲಿ ನಡೆದಿದೆ ದಾಳಿಕೋರನ ಅಂತ್ಯಕ್ರಿಯೆ
ಭಾರತದ ಜನ ಪ್ರತಿನಿಧಿಗಳೇ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ(Pakistan)ದ ಪಾತ್ರದ ಕುರಿತು ಪುರಾವೆ ಕೇಳುತ್ತಿರುವ ಹೊತ್ತಲ್ಲೇ ಮತ್ತೊಂದು ಮಹತ್ವದ ವಿಚಾರ ಕಿವಿಗೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಆಪರೇಷನ್ ಸಿಂಧೂರ್ ವೇಳೆ ಮೃತಪಟ್ಟ ಪಹಲ್ಗಾಮ್ ದಾಳಿಕೋರ ತಹೀರ್ ಹಬೀಬ್ ಅಂತ್ಯಕ್ರಿಯೆಯನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವದನ್ನು ನಿರೂಪಿಸುತ್ತದೆ.

ಇಸ್ಲಾಮಾಬಾದ್, ಆಗಸ್ಟ್ 03: ಭಾರತದ ಜನ ಪ್ರತಿನಿಧಿಗಳೇ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ(Pakistan)ದ ಪಾತ್ರದ ಕುರಿತು ಪುರಾವೆ ಕೇಳುತ್ತಿರುವ ಹೊತ್ತಲ್ಲೇ ಮತ್ತೊಂದು ಮಹತ್ವದ ವಿಚಾರ ಕಿವಿಗೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಆಪರೇಷನ್ ಸಿಂಧೂರ್ ವೇಳೆ ಮೃತಪಟ್ಟ ಪಹಲ್ಗಾಮ್ ದಾಳಿಕೋರ ತಹೀರ್ ಹಬೀಬ್ ಅಂತ್ಯಕ್ರಿಯೆಯನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವದನ್ನು ನಿರೂಪಿಸುತ್ತದೆ.
ಆತನ ಅಂತ್ಯಕ್ರಿಯೆ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಖೈ ಗಾಲಾ ಎಂಬ ಆತನ ಹುಟ್ಟೂರಿನಲ್ಲಿ ನಡೆಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ಈ ಘಟನೆಯು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.
ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ದೃಶ್ಯಗಳಲ್ಲಿ, ಪಾಕಿಸ್ತಾನದ ಮಾಜಿ ಸೈನಿಕ ಮತ್ತು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಾರ್ಯಕರ್ತ ಹಬೀಬ್ ಅವರ ಅಂತ್ಯಕ್ರಿಯೆಯಲ್ಲಿ ಸ್ಥಳೀಯರು ಸೇರಿದಂತೆ ಗ್ರಾಮಸ್ಥರು ಒಟ್ಟುಗೂಡುತ್ತಿರುವುದನ್ನು ತೋರಿಸಲಾಗಿದೆ.
ಮತ್ತಷ್ಟು ಓದಿ: ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ, ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ಮಣಿಶಂಕರ್ ಅಯ್ಯರ್
ಎ ವರ್ಗದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ತಾಹಿರ್, ಗಡಿಯಾಚೆಗಿನ ಭಯೋತ್ಪಾದನೆಯಿಂದ ಭಾರತೀಯ ಭದ್ರತಾ ಸಂಸ್ಥೆಗಳಿಗೆ ಪ್ರಮುಖ ಗುರಿಯಾಗಿದ್ದ. ಕಳೆದ ವಾರ ಶ್ರೀನಗರದಲ್ಲಿ ಆಪರೇಷನ್ ಮಹಾದೇವ್‌ನಲ್ಲಿ ಇತರೆ ಇಬ್ಬರೊಂದಿಗೆ ಆತನನ್ನು ಹೊಡೆದುರುಳಿಸಿದೆ.
ಆಪರೇಷನ್ ಮಹಾದೇವ್ ಅಡಿಯಲ್ಲಿ, ಭಾರತೀಯ ಪಡೆಗಳು ಜುಲೈ 28 ರಂದು ಶ್ರೀನಗರದ ಹೊರವಲಯದಲ್ಲಿರುವ ಹರ್ವಾನ್ ಬಳಿಯ ಲಿಡ್ವಾಸ್ ಅರಣ್ಯದಲ್ಲಿ ಮೂವರು ಪಾಕಿಸ್ತಾನಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದವು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಕಾರ, ಏಪ್ರಿಲ್ 22 ರಂದು 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಈ ಮೂವರ ಕೈವಾಡವಿದೆ. ಅವರ ಬಳಿ ಪಾಕಿಸ್ತಾನದ ಗುರುತಿನ ಚೀಟಿ ಹಾಗೂ ಚಾಕೊಲೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




