AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ, ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ಮಣಿಶಂಕರ್ ಅಯ್ಯರ್

ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ನಿಯೋಗ ರಚಿಸಿ ಎಲ್ಲಾ ದೇಶಗಳಿಗೂ ಪಾಕ್ ಬಗ್ಗೆ ಏನೇ ಹೇಳಿಬಂದರೂ ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಅಂದು ಪ್ರಧಾನಿ ಮೋದಿ ಹೇಳಿದಂತೆ ಕಾಂಗ್ರೆಸ್​​ನ ರಿಮೋಟ್ ಪಾಕಿಸ್ತಾನದಲ್ಲಿದ್ದಂತೆ ಗೋಚರಿಸುತ್ತಿರುವುದಂತೂ ಹೌದು

ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ, ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್-ಶಶಿ ತರೂರ್
ನಯನಾ ರಾಜೀವ್
|

Updated on: Aug 03, 2025 | 10:36 AM

Share

ನವದೆಹಲಿ, ಆಗಸ್ಟ್​ 03: ಕಾಂಗ್ರೆಸ್​​(Congress)ನವರದ್ದು ಅದೇ ಸ್ವರ, ಮತ್ತದೇ ಹಾಡು. ಆಪರೇಷನ್ ಸಿಂಧೂರ್ ಬಳಿಕ ಸೇನೆಯನ್ನು ಪ್ರಶಂಸಿಸುವ ಬದಲು ಪುರಾವೆ ಕೇಳುತ್ತಾ ಬೇರೆ ದೇಶಗಳ ಕಣ್ಣಲ್ಲಿ ಭಾರತವನ್ನು ಕೀಳಾಗಿಸುವ ತಂತ್ರ ಹೂಡಿದಂತಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ನಿಯೋಗ ರಚಿಸಿ ಎಲ್ಲಾ ದೇಶಗಳಿಗೂ ಪಾಕ್ ಬಗ್ಗೆ ಏನೇ ಹೇಳಿಬಂದರೂ ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಿಲ್ಲ ಎಂದು  ಅಯ್ಯರ್ ಹೇಳಿದ್ದಾರೆ.

ಅಂದು ಪ್ರಧಾನಿ ಮೋದಿ ಹೇಳಿದಂತೆ ಕಾಂಗ್ರೆಸ್​​ನ ರಿಮೋಟ್ ಪಾಕಿಸ್ತಾನದಲ್ಲಿದ್ದಂತೆ ಗೋಚರಿಸುತ್ತಿರುವುದಂತೂ ಹೌದು. ಅಂದು ಪಿ ಚಿದಂಬರಂ ಆಯ್ತು ಇದೀಗ ಇನ್ನೊಬ್ಬ ಕಾಂಗ್ರೆಸ್ ನಾಯಕರ ಆಪರೇಷನ್ ಸಿಂಧೂರ್ ಬಗ್ಗೆ ಪುರಾವೆ ಕೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಲು 33 ದೇಶಗಳಿಗೆ ಭೇಟಿ ನೀಡಿದ ಭಾರತೀಯ ನಿಯೋಗದಲ್ಲಿ ಕೇಂದ್ರ ಸರ್ಕಾರ ತರೂರ್ ಅವರನ್ನು ಸೇರಿಸಿಕೊಂಡಿದೆ. ಈ ಭೇಟಿ ನಂತರ, ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ತರೂರ್ ಮತ್ತು ಇತರ ಸಂಸದರು ಭೇಟಿ ನೀಡಿದ 33 ದೇಶಗಳಲ್ಲಿ, ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಯಾರೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಅತ್ತ ಉಗ್ರರ ಪುರಾವೆ ಕೇಳುತ್ತಿರುವ ಕಾಂಗ್ರೆಸ್ ನಾಯಕ, ಇತ್ತ ಪಾಕ್​​ನಿಂದಲೇ ಉಗ್ರರು ಬಂದಿದ್ದಾರೆ ಎನ್ನುತ್ತಿರುವ ರಾಹುಲ್

ತರೂರ್ ಆಯ್ಕೆಯ ಬಗ್ಗೆ ಅಯ್ಯರ್ ಪ್ರಶ್ನೆ ಪಹಲ್ಗಾಮ್ ದಾಳಿ ಹಿಂದೆ ಪಾಕಿಸ್ತಾನವಿದೆ ಎಂದು ನಾವು ಮಾತ್ರ ಹೇಳುತ್ತಿದ್ದೇವೆ, ಆದರೆ ಯಾರೂ ನಮ್ಮನ್ನು ನಂಬಲಿಲ್ಲ. ಜಗತ್ತನ್ನು ಮನವೊಲಿಸುವ ಯಾವುದೇ ಪುರಾವೆಗಳನ್ನು ನಾವು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. ಶಶಿ ತರೂರ್ ವಿಶ್ವಸಂಸ್ಥೆಯಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು ನಂತರ ಭಾರತೀಯ ರಾಜಕೀಯಕ್ಕೆ ಸೇರಿದ್ದಾರೆ. ಆದರೆ ಕಾಂಗ್ರೆಸ್ ಶಿಫಾರಸು ಇಲ್ಲದೆ ಕೇಂದ್ರವು ಅವರನ್ನು ಏಕೆ ಆಯ್ಕೆ ಮಾಡಿದೆ ಎಂದು ಅಯ್ಯರ್ ಪ್ರಶ್ನಿಸಿದರು.

ಇಸ್ರೇಲ್ ಮಾತ್ರ ಒಪ್ಪಿಕೊಂಡಿತ್ತು ಜಗತ್ತಿನ ಎಲ್ಲಾ ದೇಶಗಳು ಭಯೋತ್ಪಾದನೆಯನ್ನು ಖಂಡಿಸುತ್ತವೆ, ಆದರೆ ಪಾಕಿಸ್ತಾನದ ಹೆಸರನ್ನು ಹೇಳಿಲ್ಲ. ತರೂರ್ ಮತ್ತು ಅವರ ಸಹಚರರು ಎಷ್ಟೇ ಸುತ್ತಾಡಿದರೂ, ಇಸ್ರೇಲ್ ಹೊರತುಪಡಿಸಿ ಯಾರೂ ಪಾಕಿಸ್ತಾನವನ್ನು ದೂಷಿಸಲಿಲ್ಲ ಎಂದು ಅಯ್ಯರ್ ಹೇಳಿದರು.

ಅಮೆರಿಕದಂತಹ ದೇಶಗಳು ನೀಡುವ ಸುಳ್ಳು ಹೇಳಿಕೆಗಳ ಬಗ್ಗೆಯೂ ಭಾರತ ಸರ್ಕಾರ ಮೌನವಾಗಿದೆ ಎಂದು ಅವರು ಆರೋಪಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕ ಕದನ ವಿರಾಮ ತಂದಿದೆ ಎಂದು ಟ್ರಂಪ್ ಹಲವು ಬಾರಿ ಹೇಳಿದ್ದಾರೆ, ಆದರೆ ನಮ್ಮ ಸರ್ಕಾರಕ್ಕೆ ಸತ್ಯ ಹೇಳುವ ಧೈರ್ಯವಿಲ್ಲ ಎಂದು ಅಯ್ಯರ್ ಹೇಳಿದರು.

ಅಯ್ಯರ್ ವಿರುದ್ಧ ಬಿಜೆಪಿ ತಿರುಗೇಟು ಮಣಿಶಂಕರ್ ಅಯ್ಯರ್ ಹೇಳಿಕೆಯಿಂದ ರಾಜಕೀಯ ಬಿಸಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರತಿಪಕ್ಷಗಳು ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಬದಲು ಸೇನೆಯ ಶೌರ್ಯಕ್ಕೆ ನಮಸ್ಕರಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅದು ಭಯೋತ್ಪಾದನೆಯ ಬಗ್ಗೆ ಮೃದುವಾಗಿತ್ತು ಮತ್ತು ಮತ ಬ್ಯಾಂಕ್‌ಗಾಗಿ ಕೇಸರಿ ಭಯೋತ್ಪಾದನೆಯಂತಹ ಕಥೆಗಳನ್ನು ಸೃಷ್ಟಿಸಿತು ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತಿನಲ್ಲಿ 16 ಗಂಟೆಗಳ ಕಾಲ ಚರ್ಚಿಸಲಾಯಿತು ಮತ್ತು ಕಾಂಗ್ರೆಸ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ಪಾಕಿಸ್ತಾನಿಯರು ಭಾರತದ ಅತಿ ದೊಡ್ಡ ಆಸ್ತಿ ಎಂದಿದ್ದ ಅಯ್ಯರ್ ಪಾಕಿಸ್ತಾನದ ನೆಲದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಹಿಂದುತ್ವವನ್ನು ಟೀಕಿಸುವ ಮೂಲಕ ಮತ್ತೆ ವಿವಾದ ಹುಟ್ಟುಹಾಕಿದ್ದರು. ನಿಮ್ಮ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಧೈರ್ಯ ಇದೆ. ಆದರೆ ಎದುರು ಬದಿರು ಕುಳಿತು ಮಾತನಾಡುವ ಧೈರ್ಯ ಇಲ್ಲ ಎಂದು ಅವರು ಪಾಕಿಸ್ತಾನದ ಬಳಿ ಹೇಳಿದ್ದರು. ಪಾಕಿಸ್ತಾನವು ಭಾರತದ ಅತಿ ದೊಡ್ಡ ಆಸ್ತಿ ಎಂದು ಹೇಳಿರುವುದಾಗಿ ಪಾಕಿಸ್ತಾನದ ಡಾನ್ ವರದಿ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?