ಅಣ್ಣಂದಿರ ಜತೆ ಸೇರಿ ಗಂಡನ ಜೀವಂತ ಸಮಾಧಿ ಮಾಡಲು ಪತ್ನಿಯ ಯತ್ನ,ಬದುಕಿದ್ಹೇಗೆ?
ಅಣ್ಣಂದಿರ ಜತೆ ಸೇರಿ ಮಹಿಳೆಯೊಬ್ಬಳು ಗಂಡ(Husband)ನನ್ನು ಜೀವಂತ ಸಮಾಧಿ ಮಾಡಲು ಹೋಗಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮನೆಗೆ ನುಗ್ಗಿದ ಮಹಿಳೆಯ ಸಹೋದರರು ಆತನನ್ನು ಕಾಡಿಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು.ಬಳಿಕ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದರು. ಜುಲೈ 21 ರ ರಾತ್ರಿ ಇಜ್ಜತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಅವರು ಬದುಕುಳಿದಿದ್ದಾರೆ.

ಲಕ್ನೋ, ಆಗಸ್ಟ್ 03: ಅಣ್ಣಂದಿರ ಜತೆ ಸೇರಿ ಮಹಿಳೆಯೊಬ್ಬಳು ಗಂಡ(Husband)ನನ್ನು ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮನೆಗೆ ನುಗ್ಗಿದ ಮಹಿಳೆಯ ಸಹೋದರರು ಆತನನ್ನು ಕಾಡಿಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು.ಬಳಿಕ ಜೀವಂತ ಸಮಾಧಿ ಮಾಡಲು ಯತ್ನಿಸಿದ್ದರು. ಜುಲೈ 21 ರ ರಾತ್ರಿ ಇಜ್ಜತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ಅವರು ಬದುಕುಳಿದಿದ್ದಾರೆ.
ರಾಜೀವ್ ಎಂಬುವವರ ಮೇಲೆ ಅವರ ಮನೆಯಲ್ಲಿ ಅವರ ಪತ್ನಿ ಸಾಧನಾ ಮತ್ತು ಅವರ ಐವರು ಸಹೋದರರು ಸೇರಿದಂತೆ 11 ಜನರ ಗುಂಪು ದಾಳಿ ನಡೆಸಿತ್ತು. ಹಲ್ಲೆ ನಡೆಸಿದವರನ್ನು ಭಗವಾನ್ ದಾಸ್, ಪ್ರೇಮ್‌ರಾಜ್, ಹರೀಶ್, ಲಕ್ಷ್ಮಣ್ ಎಂದು ಗುರುತಿಸಲಾಗಿದೆ.
ರಾತ್ರಿ ವೇಳೆ ತನ್ನ ಮನೆಗೆ ನುಗ್ಗಿದ ಗುಂಪು, ಕಬ್ಬಿಣದ ಸರಳುಗಳು ಮತ್ತು ಕೋಲುಗಳಿಂದ ತೀವ್ರವಾಗಿ ಹೊಡೆದು, ತನ್ನ ಎರಡೂ ಕಾಲುಗಳು ಮತ್ತು ಒಂದು ತೋಳನ್ನು ಮುರಿದಿದ್ದಾರೆ ಎಂದು ರಾಜೀವ್ ಪೊಲೀಸರಿಗೆ ತಿಳಿಸಿದ್ದಾರೆ.
ದೂರಿನ ಪ್ರಕಾರ, ದಾಳಿಕೋರರು ಆತನನ್ನು ಸಿಬಿ ಗಂಜ್ ಪ್ರದೇಶದ ಕಾಡಿಗೆ ಕರೆದೊಯ್ದು ಹೂಳಲು ಗುಂಡಿ ತೋಡಿದ್ದರು. ಆತನನ್ನು ಜೀವಂತವಾಗಿ ಹೂಳುವ ಮೊದಲು, ಅಪರಿಚಿತ ವ್ಯಕ್ತಿ ದೇವರಂತೆ ಆ ದಾರಿಯಲ್ಲಿ ಬಂದಿದ್ದ, ಕೂಡಲೇ ಅವರು ರಾಜೀವ್ನನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದರು.
ಮತ್ತಷ್ಟು ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಂದ ಪತ್ನಿ
ನಂತರ ಪಕ್ಕದಲ್ಲಿದ್ದ ವ್ಯಕ್ತಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ರಾಜೀವ್ ಅವರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲು ಸಹಾಯ ಮಾಡಿದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ಮೇಲೆ ನಡೆದ ಕೊಲೆ ಯತ್ನ ಇದು ಮೊದಲಲ್ಲ ಎಂದು ರಾಜೀವ್ ಹೇಳಿಕೊಂಡಿದ್ದಾರೆ. ತನ್ನ ಪತ್ನಿ ಈ ಹಿಂದೆ ತನಗೆ ವಿಷ ಕೊಟ್ಟು ಕೊಲೆ ಮಾಡಲು ಪ್ರಯತ್ನಿಸಿದ್ದಳು ಮತ್ತು ಒಮ್ಮೆ ತನ್ನ ಆಹಾರದಲ್ಲಿ ಗಾಜಿನ ಚೂರುಗಳನ್ನು ಬೆರೆಸಿದ್ದಳು ಎಂದು ಅವರು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ ತಿಳಿಸಿದ್ದೆ, ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದರು.
ಈ ದಂಪತಿ 2009 ರಿಂದ ವಿವಾಹವಾಗಿದ್ದಾರೆ ಮತ್ತು 14 ಮತ್ತು 8 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ದಂಪತಿಯ 14 ವರ್ಷದ ಮಗ ಕೂಡ ಈ ಹೇಳಿಕೆಗಳನ್ನು ದೃಢಪಡಿಸಿದ್ದು, ತನ್ನ ತಾಯಿ ಆಗಾಗ ತನ್ನ ತಂದೆಯೊಂದಿಗೆ ಜಗಳವಾಡುತ್ತಿದ್ದಳು ಮತ್ತು ಈ ಹಿಂದೆ ಅವನಿಗೆ ವಿಷ ಕೊಡಲು ಪ್ರಯತ್ನಿಸಿದ್ದಳು ಎಂದು ಹೇಳಿದ್ದಾನೆ.
ರಾಜೀವ್ ಬರೇಲಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ತಮ್ಮ ಹಳ್ಳಿಯಲ್ಲಿ ಉಳಿಯಲು ಇಷ್ಟಪಡದ ಕಾರಣ ನಗರದಲ್ಲಿ ಬಾಡಿಗೆ ಮನೆಗೆ ತೆರಳಿರುವುದಾಗಿ ಅವರು ಹೇಳಿದರು.
ಘಟನೆಯ ನಂತರ, ರಾಜೀವ್ ಅವರ ತಂದೆ ನೇತ್ರಮ್ ದೂರು ದಾಖಲಿಸಿದ್ದಾರೆ. ರಾಜೀವ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಸಾಧನಾ ಮತ್ತು ಅವರ ಸಹೋದರರ ವಿರುದ್ಧ ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




