AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವರ್​​ ಜತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆಸೆದಿದ್ದ ಮಹಿಳೆ, ವರ್ಷದ ಬಳಿಕ ಬಂಧನ

ಲವರ್(Lover)​ ಜತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆಸೆದಿದ್ದ ಪ್ರಕರಣದಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಒಂದು ವರ್ಷದ ಬಳಿಕ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ದೆಹಲಿಯ ಅಲಿಪುರ ನಿವಾಸಿ 34 ವರ್ಷದ ಸೋನಿಯಾ ಮತ್ತು ಸೋನಿಪತ್ ನಿವಾಸಿ 28 ವರ್ಷದ ಆಕೆಯ ಪ್ರಿಯಕರ ರೋಹಿತ್ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲವರ್​​ ಜತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆಸೆದಿದ್ದ ಮಹಿಳೆ, ವರ್ಷದ ಬಳಿಕ ಬಂಧನ
ಆರೋಪಿಗಳು
ನಯನಾ ರಾಜೀವ್
|

Updated on: Aug 03, 2025 | 11:41 AM

Share

ನವದೆಹಲಿ, ಆಗಸ್ಟ್ 03: ಲವರ್(Lover)​ ಜತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆಸೆದಿದ್ದ ಪ್ರಕರಣದಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಒಂದು ವರ್ಷದ ಬಳಿಕ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ದೆಹಲಿಯ ಅಲಿಪುರ ನಿವಾಸಿ 34 ವರ್ಷದ ಸೋನಿಯಾ ಮತ್ತು ಸೋನಿಪತ್ ನಿವಾಸಿ 28 ವರ್ಷದ ಆಕೆಯ ಪ್ರಿಯಕರ ರೋಹಿತ್ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಿಜಯ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಬ್ರಾಂಚ್ ಡಿಸಿಪಿ ಹರ್ಷ್ ಇಂದೋರಾ ಮಾತನಾಡಿ, 42 ವರ್ಷದ ಮೃತ ಪ್ರೀತಮ್ ಗ್ಯಾಂಗ್​ಸ್ಟರ್ ಆಗಿದ್ದ. ಆತನ ವಿರುದ್ಧ 10 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. 2024ರ ಜುಲೈ 5ರಂದು ಪ್ರೀತಮ್ ತನ್ನ ಪತ್ನಿ ಸೋನಿಯಾಳನ್ನು ಸೋನಿಪತ್​ನ ಗನೌರ್​​ನಲ್ಲಿರುವ ಆಕೆಯ ಸಹೋದರಿಯ ಮನೆಯಿಂದ ಕರೆದುಕೊಂಡು ಹೋಗಲು ಬಂದಿದ್ದ, ಆದರೆ ತೀವ್ರ ವಾಗ್ವಾದ ನಡೆದ ಬಳಿಕ ಆತ ಅಲ್ಲಿಂದ ಹೋಗಿದ್ದ.

ಆ ದಿನ ಸೋನಿಯಾ ತನ್ನ ಸಹೋದರಿಯ ಸಂಬಂಧಿ ವಿಜಯ್‌ಗೆ 50 ಸಾವಿರ ರೂ.ಗಳನ್ನು ನೀಡಿ ತನ್ನ ಗಂಡನನ್ನು ಕೊಲ್ಲುವಂತೆ ಕೇಳಿಕೊಂಡಳು. ನಂತರ ಪ್ರೀತಮ್ ಹಿಂತಿರುಗಿದಾಗ, ಸೋನಿಯಾ ಅವನಿಗೆ ಮನೆಯಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟಳು. ರಾತ್ರಿ ಪ್ರೀತಮ್ ಮಲಗಿದ್ದಾಗ, ವಿಜಯ್ ಅವನನ್ನು ಕೊಂದು ಅಗ್ವಾನ್‌ಪುರ ಬಳಿಯ ಚರಂಡಿಯಲ್ಲಿ ಶವವನ್ನು ಎಸೆದಿದ್ದರು.

ಮತ್ತಷ್ಟು ಓದಿ: ಬಿಹಾರ: ಲವರ್​ ಜತೆ ಸೇರಿ ಗಂಡನನ್ನು ಕೊಂದ ಪತ್ನಿ, ರಾಜಾ ರಘುವಂಶಿ ಹತ್ಯೆ ನೆನಪಿಸುವ ಮತ್ತೊಂದು ಘಟನೆ

ಜುಲೈ 20 ರಂದು ಅಲಿಪುರ ಪೊಲೀಸ್ ಠಾಣೆಯಲ್ಲಿ ಸೋನಿಯಾ ಪ್ರೀತಮ್ ನಾಪತ್ತೆ ದೂರು ದಾಖಲಿಸಿದರು. ತನ್ನ ಪತಿ ಹೊರಗೆ ಹೋಗಿದ್ದು, ಹಿಂತಿರುಗಿಲ್ಲ ಎಂದು ಆಕೆ ಸುಳ್ಳು ಹೇಳಿದ್ದಳು. ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಸಾಮಾನ್ಯ ಪ್ರಕರಣದಂತೆ ಕಂಡಿದ್ದರು. ತನಿಖೆಯ ಸಮಯದಲ್ಲಿ, ಪೊಲೀಸ್ ತಂಡವು ಪ್ರೀತಮ್‌ಗೆ ಸಂಬಂಧಿಸಿದ ಮೊಬೈಲ್ ಕೊನೆಯದಾಗಿ ಸೋನಿಪತ್​​ನಲ್ಲಿ ಬಳಸಲಾಗಿದೆ ಎಂದು ತಿಳಿದುಬಂದಿತ್ತು. ಇದು ತಂಡವನ್ನು ರೋಹಿತ್‌ ವರೆಗೆ ಕರೆದೊಯ್ಯಿತು. ವಿಚಾರಣೆ ನಡೆಸಿದಾಗ ರೋಹಿತ್ ಆರಂಭದಲ್ಲಿ ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ನಂತರ ಅಪರಾಧ ಒಪ್ಪಿಕೊಂಡಿದ್ದ.

ಸೋನಿಯಾ ಜೊತೆ ತನಗೆ ಸಂಬಂಧವಿದೆ ಎಂದು ರೋಹಿತ್ ಪೊಲೀಸರಿಗೆ ತಿಳಿಸಿದ್ದಾನೆ. ಪ್ರೀತಮ್ ಅವರನ್ನು ಕೊಲ್ಲಲು ಇಬ್ಬರೂ ಸಂಚು ರೂಪಿಸಿದ್ದರು. ಸೋನಿಯಾ ತನ್ನ ಪತಿಯನ್ನು ಕೊಲ್ಲಲು ವಿಜಯ್‌ಗೆ ಹಣ ನೀಡಿದ್ದಾಳೆ ಎಂದು ಅವರು ಒಪ್ಪಿಕೊಂಡಿದ್ದಾರೆ.ಸೋನಿಯಾ ಸುಮಾರು 15 ವರ್ಷ ವಯಸ್ಸಿನವಳಾಗಿದ್ದಾಗ ಪ್ರೀತಮ್‌ನನ್ನು ಪ್ರೀತಿಸಿ, ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಅವನನ್ನು ಮದುವೆಯಾದಳು.

ಈ ಮದುವೆಯಿಂದ ಅವರಿಗೆ 16 ವರ್ಷದ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ರೋಹಿತ್ ಈ ಹಿಂದೆ ಕೊಲೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕೆ ಸಂಬಂಧಿಸಿದ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ