ಪ್ರೀತಿ ಪಟೇಲ್ ನಂತರ ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್?
42 ವರ್ಷ ವಯಸ್ಸಿನ ಗೋವಾ ಮೂಲದ ಬ್ರೆವರ್‌ಮನ್ ಪ್ರಸ್ತುತ ಅಟಾರ್ನಿ ಜನರಲ್ ಹುದ್ದೆಯನ್ನು ಹೊಂದಿದ್ದಾರೆ. ಅವರು ಯುಕೆಯಲ್ಲಿ ಪ್ರಧಾನ ಮಂತ್ರಿ ರೇಸ್‌ನಲ್ಲಿದ್ದರು, ಆದರೆ ಜುಲೈನಲ್ಲಿ ಎರಡನೇ ಸುತ್ತಿನಲ್ಲಿ ಎಲಿಮಿನೇಟ್ ಆಗಿದ್ದರು.
ಯುನೈಟೆಡ್ ಕಿಂಗ್ಡಮ್ನ (United Kindgom) ಮುಂದಿನ ಪ್ರಧಾನ ಮಂತ್ರಿಯಾಗಿ ಲಿಜ್ ಟ್ರಸ್ ಆಯ್ಕೆಯಾದ ಕೆಲವೇ ಗಂಟೆಗಳ ನಂತರ ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಪ್ರೀತಿ ಪಟೇಲ್ (Priti Patel) ಸೋಮವಾರ ರಾಜೀನಾಮೆ ನೀಡಿದ್ದಾರೆ. ಪ್ರೀತಿ ಅವರ ಸ್ಥಾನಕ್ಕೆ ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ (Suella Braverman) ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಬರೆದ ಪತ್ರದಲ್ಲಿ, ಪಟೇಲ್ ಅವರು ಯುಕೆ ಗೃಹ ಕಾರ್ಯದರ್ಶಿ ಅಥವಾ ಆಂತರಿಕ ಸಚಿವ ಸ್ಥಾನವನ್ನು ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದು ಟ್ರಸ್‌ಗೆ “ಬೆಂಬಲ” ನೀಡುವುದಾಗಿ ಭರವಸೆ ನೀಡಿದರು. 50ರ ಹರೆಯದ ಬೋರಿಸ್ ಜಾನ್ಸನ್ ನಿಷ್ಠಾವಂತೆ ಮತ್ತು ಎಸೆಕ್ಸ್‌ನಲ್ಲಿ ವಿಥಮ್‌ಗೆ ಸಂಸದರಾಗಿರುವ ಪಟೇಲ್ ಅವರನ್ನು ಜುಲೈ 2019 ರಲ್ಲಿ ಯುಕೆ ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಅಂದಹಾಗೆ ಬ್ರೆವರ್‌ಮನ್ ಅವರು ಪಟೇಲ್ ಅವರ ಉತ್ತರಾಧಿಕಾರಿಯಾಗುವ ನಿರೀಕ್ಷೆಯಲ್ಲಿದ್ದಾರೆ. ಹೀಗಾದರೆ ಟ್ರಸ್ ಕ್ಯಾಬಿನೆಟ್‌ನಲ್ಲಿ ಭಾರತೀಯ ಮೂಲದ ಏಕೈಕ ಶಾಸಕರಾಗುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.
42 ವರ್ಷ ವಯಸ್ಸಿನ ಗೋವಾ ಮೂಲದ ಬ್ರೆವರ್‌ಮನ್ ಪ್ರಸ್ತುತ ಅಟಾರ್ನಿ ಜನರಲ್ ಹುದ್ದೆಯನ್ನು ಹೊಂದಿದ್ದಾರೆ. ಅವರು ಯುಕೆಯಲ್ಲಿ ಪ್ರಧಾನ ಮಂತ್ರಿ ರೇಸ್‌ನಲ್ಲಿದ್ದರು, ಆದರೆ ಜುಲೈನಲ್ಲಿ ಎರಡನೇ ಸುತ್ತಿನಲ್ಲಿ ಎಲಿಮಿನೇಟ್ ಆಗಿದ್ದರು.
ಲಿಜ್ ಈಗ ಪ್ರಧಾನಿಯಾಗಲು ಸಿದ್ಧರಾಗಿದ್ದಾರೆ. ಅವರು ಕೆಲಸವನ್ನು ಕಲಿಯಬೇಕಾಗಿಲ್ಲ. ಕೆಲಸ ಕಷ್ಟಕರವಾಗಿದೆ ಮತ್ತು ಸರಿಯಾಗಿ ಮಾಡಬೇಕಾಗಿದೆ. ಪಕ್ಷವು ಆರು ವರ್ಷಗಳಿಂದ ಕಷ್ಟದಲ್ಲಿದ್ದು, ಇದಕ್ಕೆ ಸ್ಥಿರತೆ ತುರ್ತಾಗಿ ಮತ್ತು ತ್ವರಿತವಾಗಿ ಅಗತ್ಯವಿದೆ ಎಂದು ಬ್ರೆವರ್‌ಮನ್ ಹೇಳಿದ್ದರು.
ಕನ್ಸರ್ವೇಟಿವ್ ಪಕ್ಷದ ಫೈನಲಿಸ್ಟ್‌ಗಳಾದ ಟ್ರಸ್ ಮತ್ತು ಭಾರತೀಯ ಮೂಲದ ಸಹೋದ್ಯೋಗಿ ರಿಷಿ ಸುನಕ್‌ಗೆ ಬೆಂಬಲ ನೀಡದಿರಲು ನಿರ್ಧರಿಸಿದ ದೇಶದ ಉನ್ನತ ಇಲಾಖೆಗಳನ್ನು ಹೊಂದಿರುವ ಕೆಲವೇ ಕೆಲವು ಮಂತ್ರಿಗಳಲ್ಲಿ ಪ್ರೀತಿ ಪಟೇಲ್ ಕೂಡಾ ಒಬ್ಬರು.
ಪಟೇಲ್ ತಮ್ಮ ರಾಜೀನಾಮೆ ಪತ್ರದಲ್ಲಿ, ಲಿಜ್ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ಹೊಸ ಗೃಹ ಕಾರ್ಯದರ್ಶಿ ನೇಮಕಗೊಂಡ ನಂತರ ದೇಶಕ್ಕೆ ಮತ್ತು ವಿಥಮ್ ಕ್ಷೇತ್ರಕ್ಕೆ ನನ್ನ ಸಾರ್ವಜನಿಕ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಪ್ರೀತಿ ಪಟೇಲ್ ಹೇಳಿದ್ದಾರೆ.
ಸಂಸತ್ತಿನಲ್ಲಿ ತಮ್ಮ ಮಾಜಿ ಮುಖ್ಯಸ್ಥ ಜಾನ್ಸನ್ ಅವರನ್ನು ಹೊಗಳಿದ ಪಟೇಲ್ ಈ ಸರ್ಕಾರದಲ್ಲಿ ಸೇವೆ ಸಲ್ಲಿಸಲು ಹೆಮ್ಮೆಪಡುತ್ತೇನೆ ಎಂದಿದ್ದಾರೆ. ಈ ವೇಳೆ ಪಟೇಲ್ ಮಾತಿಗೆ ಅಡ್ಡಿಪಡಿಸಿದ ವಿರೋಧ ಪಕ್ಷದ ಸಂಸದರಲ್ಲಿ ಅವರು ಶಟಪ್ ಎಂದುಎಂದು ಕೇಳಿದರು ಎಂದು ಪಿಟಿಐ ವರದಿ ಮಾಡಿದೆ. ಬ್ರೆವರ್‌ಮನ್ ಜೊತೆಗೆ, ಹೊಸ ಟ್ರಸ್ ನೇತೃತ್ವದ ಕ್ಯಾಬಿನೆಟ್‌ನಲ್ಲಿನ ಇತರ ಪ್ರಮುಖ ಹುದ್ದೆಗಳಾದ ವ್ಯಾಪಾರ ಕಾರ್ಯದರ್ಶಿ ಕ್ವಾಸಿ ಕ್ವಾರ್ಟೆಂಗ್ ಅವರು ಚಾನ್ಸೆಲರ್ ಸ್ಥಾನದ ಆಕಾಂಕ್ಷಿಆಗಿದ್ದಾರೆ. ಶಿಕ್ಷಣ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗುವುದು. ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಮತ್ತು ಸಂಸ್ಕೃತಿ ಕಾರ್ಯದರ್ಶಿ ನಡಿನ್ ಡೋರಿಸ್ ಅವರಂತಹ ಕೆಲವು ಉಸ್ತುವಾರಿ ಮಂತ್ರಿಗಳು ಹೊಸ ಆಡಳಿತದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.