Russia-Ukraine War: ಮುಗಿಯದ ಯುದ್ಧ; ರಷ್ಯಾ, ಉಕ್ರೇನ್ ನಡುವೆ ಮಾ. 2ಕ್ಕೆ ಎರಡನೇ ಸುತ್ತಿನ ಮಾತುಕತೆ

| Updated By: ಸುಷ್ಮಾ ಚಕ್ರೆ

Updated on: Mar 01, 2022 | 8:25 PM

ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬಳಿಕ ನಡೆದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದೆ. ರಷ್ಯಾ ಉಕ್ರೇನ್​ನಲ್ಲಿ ವಸತಿ ಪ್ರದೇಶಗಳನ್ನು ಗುರಿಯಾಗಿಸುವುದನ್ನು ಮುಂದುವರೆಸಿದೆ.

Russia-Ukraine War: ಮುಗಿಯದ ಯುದ್ಧ; ರಷ್ಯಾ, ಉಕ್ರೇನ್ ನಡುವೆ ಮಾ. 2ಕ್ಕೆ ಎರಡನೇ ಸುತ್ತಿನ ಮಾತುಕತೆ
ರಷ್ಯಾ ಮತ್ತು ಉಕ್ರೇನ್ ನಡುವಿನ ಎರಡನೇ ಸುತ್ತಿನ ಮಾತುಕತೆ
Follow us on

ಕೀವ್: ಉಕ್ರೇನ್​ನಲ್ಲಿ ರಷ್ಯನ್ನರ ದಾಳಿ ಹೆಚ್ಚಾದ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್ (Russia and Ukraine War) ನಡುವಿನ ಎರಡನೇ ಸುತ್ತಿನ ಮಾತುಕತೆಯನ್ನು ಮಾರ್ಚ್ 2ರಂದು ಆಯೋಜಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ. ಉಭಯ ರಾಷ್ಟ್ರಗಳ ನಡುವೆ ಸೋಮವಾರ ನಡೆದ ಮೊದಲ ಸುತ್ತಿನ ಮಾತುಕತೆಗಳು ಯಾವುದೇ ಸ್ಪಷ್ಟವಾದ ಫಲಿತಾಂಶಗಳನ್ನು ನೀಡದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಮತ್ತೊಮ್ಮೆ ಭೇಟಿಯಾಗಲು ನಿರ್ಧರಿಸಿವೆ. ಸೋಮವಾರ ಬೆಲಾರಸ್‌ನ ಗಡಿ ಪಟ್ಟಣವಾದ ಗೋಮೆಲ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆ ಸುಮಾರು ಐದು ಗಂಟೆಗಳ ಕಾಲ ನಡೆಯಿತು. ಆದರೆ, ಆ ಮಾತುಕತೆ ಫಲಪ್ರದವಾಗಲಿಲ್ಲ. ಹೀಗಾಗಿ, ನಾಳೆ (ಬುಧವಾರ) ನಡೆಯಲಿರುವ ಎರಡನೇ ಹಂತದ ಮಾತುಕತೆ ಕುತೂಹಲ ಮೂಡಿಸಿದೆ.

ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು “ಕೆಲವು ವಿಷಯಗಳ ಬಗ್ಗೆ ಒಪ್ಪಿಕೊಂಡಿದ್ದಾರೆ” ಎನ್ನಲಾಗುತ್ತಿದೆ. ಈಗ ಎರಡೂ ದೇಶಗಳ ಪ್ರತಿನಿಧಿಗಳು ಮತ್ತೊಂದು ಸುತ್ತಿನ ಚರ್ಚೆಗಾಗಿ ಎದುರು ಬದುರಾಗುವ ಮೊದಲು ತಮ್ಮ ಸರ್ಕಾರದ ಮುಖ್ಯಸ್ಥರನ್ನು ಸಂಪರ್ಕಿಸುತ್ತಾರೆ ಎಂದು ರಷ್ಯಾ ಟುಡೆ (ಆರ್‌ಟಿ) ವರದಿ ಮಾಡಿದೆ.

ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬಳಿಕ ನಡೆದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದೆ. ರಷ್ಯಾ ಉಕ್ರೇನ್​ನಲ್ಲಿ ವಸತಿ ಪ್ರದೇಶಗಳನ್ನು ಗುರಿಯಾಗಿಸುವುದನ್ನು ಮುಂದುವರೆಸಿದೆ. ಹಾಗೇ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿಮಾನಗಳು ಮತ್ತು ಹಡಗುಗಳ ಮೇಲೆ ಜಾಗತಿಕ ನಿಷೇಧಕ್ಕೆ ಕರೆ ನೀಡಿದ್ದಾರೆ.

ಉಕ್ರೇನ್ ಪ್ರಕಾರ, ರಷ್ಯಾದ ಆಕ್ರಮಣದಲ್ಲಿ 14 ಮಕ್ಕಳು ಸೇರಿದಂತೆ 350ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಈಗಾಗಲೇ ಅರ್ಧ ಮಿಲಿಯನ್ ಜನರು ದೇಶವನ್ನು ತೊರೆದಿದ್ದಾರೆ. ಇದರ ನಡುವೆ ಇಂದು ಬೆಳಿಗ್ಗೆ ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ರೈಲುಗಳು ಅಥವಾ ಲಭ್ಯವಿರುವ ಯಾವುದೇ ವಿಧಾನಗಳ ಮೂಲಕ ಉಕ್ರೇನ್ ರಾಜಧಾನಿ ಕೀವ್ ಅನ್ನು ತುರ್ತಾಗಿ ತೊರೆಯುವಂತೆ ಭಾರತವು ಈಗಾಗಲೇ ತನ್ನ ಪ್ರಜೆಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಉಕ್ರೇನ್​ನಲ್ಲಿ ರಷ್ಯನ್ನರ ದಾಳಿಗೆ ಬಲಿಯಾದ ಹಾವೇರಿ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ ಪ್ರಧಾನಿ ಮೋದಿ

ನವೀನ್​ ಸಾವಿನ ಬೆನ್ನಲ್ಲೇ ಕೇಂದ್ರ ಸರ್ಕಾರ ಫುಲ್ ಅಲರ್ಟ್​; ರಷ್ಯಾ, ಉಕ್ರೇನ್​ ರಾಯಭಾರಿಗಳನ್ನು ಕರೆಸಿ ಚರ್ಚೆ