Russia Ukraine War: ರಷ್ಯಾ & ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗಳು

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ (Vladimir Putin)​ ಇಂದು ಉಕ್ರೇನ್​ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ್ದಾರೆ. ಟಿವಿ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್​ ಮೇಲೆ ಆಕ್ರಮಣಕ್ಕೆ ಆದೇಶ ನೀಡಿದ್ದಾರೆ. ಬೆಳಿಗ್ಗೆಯಿಂದ ಉಕ್ರೇನ್ ನಲ್ಲಿ ನಡೆದ ಘಟನೆಗಲ ಬಗ್ಗೆ ಇಲ್ಲಿದೆ ಮಾಹಿತಿ.

Russia Ukraine War: ರಷ್ಯಾ & ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗಳು
ರಷ್ಯಾ & ಉಕ್ರೇನ್ ಯುದ್ಧದ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 24, 2022 | 6:19 PM

ನಮಗೆ ಉಕ್ರೇನ್​ ಮೇಲೆ ಯುದ್ಧ ಸಾರುವ ಇರಾದೆಯಿಲ್ಲ ಎಂದು ಹೇಳುತ್ತಲೇ ಬಂದಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ (Vladimir Putin)​ ಇಂದು ಉಕ್ರೇನ್​ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ್ದಾರೆ. ಟಿವಿ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್​ ಮೇಲೆ ಆಕ್ರಮಣಕ್ಕೆ ಆದೇಶ ನೀಡಿದ್ದಾರೆ. ಉಕ್ರೇನ್ (Ukraine)​ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಾಗುವುದು. ಹಾಗಂತ ಮಾಸ್ಕೋ ಉಕ್ರೇನ್​ನ್ನು ಅತಿಕ್ರಮಣ ಮಾಡಿಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಗಡಿಯಲ್ಲಿ ಉಕ್ರೇನ್​ ನಿಯೋಜಿಸಿರುವ ಸೈನ್ಯವನ್ನು ಹಿಂಪಡೆಯುವಂತೆ ಮಾಡಲು ಮತ್ತು ಉಕ್ರೇನ್​ನಿಂದ ನಮ್ಮ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ತಡೆಯುವುದಕ್ಕೋಸ್ಕರ ಈ ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾ & ಉಕ್ರೇನ್ ನಲ್ಲಿ ನಡೆದ ಯುದ್ಧದ ಮಹತ್ವ ಬೆಳವಣಿಗಳು

  1. ಉಕ್ರೇನ್ (Ukraine)​ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಾಗುವುದು. ಹಾಗಂತ ಮಾಸ್ಕೋ ಉಕ್ರೇನ್​ನ್ನು ಅತಿಕ್ರಮಣ ಮಾಡಿಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಗಡಿಯಲ್ಲಿ ಉಕ್ರೇನ್​ ನಿಯೋಜಿಸಿರುವ ಸೈನ್ಯವನ್ನು ಹಿಂಪಡೆಯುವಂತೆ ಮಾಡಲು ಮತ್ತು ಉಕ್ರೇನ್​ನಿಂದ ನಮ್ಮ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ತಡೆಯುವುದಕ್ಕೋಸ್ಕರ ಈ ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
  2. ಪರಿಸ್ಥಿತಿಯು ದೊಡ್ಡ ಬಿಕ್ಕಟ್ಟಿನತ್ತ ಸಾಗುವ ಅಪಾಯದಲ್ಲಿದೆ. ಬೆಳವಣಿಗೆಗಳ ಬಗ್ಗೆ ನಾವು ನಮ್ಮ ಆಳವಾದ ಕಳವಳವನ್ನು ವ್ಯಕ್ತಪಡಿಸುತ್ತೇವೆ, ಇದನ್ನು ಎಚ್ಚರಿಕೆಯಿಂದ ನಿರ್ವಹಿಸದಿದ್ದರೆ, ಪ್ರದೇಶದ ಶಾಂತಿ ಮತ್ತು ಭದ್ರತೆಯನ್ನು ದುರ್ಬಲಗೊಳಿಸಬಹುದು ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ. ಉಕ್ರೇನ್ ತನ್ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‌ನ ಮುಖ್ಯಸ್ಥರು ಪುಟಿನ್ ಅವರನ್ನು ಸಹಾಯಕ್ಕಾಗಿ ಕೇಳಿದ ನಂತರ ತುರ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಅಥವಾ ಯುಎನ್‌ಎಸ್‌ಸಿಯನ್ನು ಭೇಟಿ ಮಾಡಲು ವಿನಂತಿಸಿತು.
  3. ಉಕ್ರೇನ್ (Ukraine) ದೇಶದ ಪೂರ್ವದಲ್ಲಿ ರಷ್ಯಾದ 5 ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. ಲುಹಾನ್ಸ್ಕ್ (Luhansk) ಪ್ರದೇಶದಲ್ಲಿ ಐದು ರಷ್ಯಾದ (Russia) ವಿಮಾನಗಳು ಮತ್ತು ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿರುವುದಾಗಿ ಎಂದು ರಾಯಿಟರ್ಸ್ ವರದಿ ಮಾಡಿದೆ. ಏತನ್ಮಧ್ಯೆ, ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನ ವಾಯು ನೆಲೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ನಾಶಮಾಡಿರುವುದಾಗಿ ಐಎಫ್‌ಎಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
  4. ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿರುವುದರಿಂದ (Russia- Ukraine Crisis) ಜಾಗತಿಕ ತೈಲ ಮಾರುಕಟ್ಟೆಗೆ “ಬೆಂಕಿ” ಹಚ್ಚಿದೆ. ಎಂಟು ವರ್ಷಗಳ ನಂತರ ಬ್ರೆಂಟ್​ ಬ್ಯಾರಲ್​ಗೆ 100 ಯುಎಸ್​ಡಿ ಗಡಿಯನ್ನು ದಾಟಿದೆ. ಇಷ್ಟು ಸಮಯ ತೈಲ ಬೆಲೆ ಏರಿಕೆಯಿಂದ ಸ್ವಲ್ಪ ಮಟ್ಟಿಗಾದರೂ ನಿರಾಳರಾಗಿದ್ದ ಭಾರತದ ಗ್ರಾಹಕರು ಈಗ ಮತ್ತೆ ಹೆಚ್ಚಳದ ಹೊರೆಯನ್ನು ಅನುಭವಿಸಬೇಕಾಗುತ್ತದೆ. ಇನ್ನು ಪುಟಿನ್​ರ ನಡೆಯು ಮನೆಯ ಬಜೆಟ್​ ಅನ್ನು ಹೆಚ್ಚಿಸುವುದರಲ್ಲಿ ಅನುಮಾನ ಇಲ್ಲ.
  5. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin )ಅವರನ್ನು ತಡೆಯಲು ಮತ್ತು ಉಕ್ರೇನ್(Ukraine) ವಿರುದ್ಧದ ಅವರ ಯುದ್ಧವನ್ನು ಖಂಡಿಸಲು ಸಹಾಯ ಮಾಡಲು ಮಧ್ಯಪ್ರವೇಶಿಸುವಂತೆ  ಉಕ್ರೇನ್ ರಾಯಭಾರಿ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರಲ್ಲಿ ಒತ್ತಾಯಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವನಾತ್ಮಕವಾಗಿ ಮನವಿ ಮಾಡಿದ ಉಕ್ರೇನ್ ರಾಯಭಾರಿ ಡಾ ಇಗೊರ್ ಪೊಲಿಖಾ ಅವರು, “ಪುಟಿನ್ ಎಷ್ಟು ವಿಶ್ವ ನಾಯಕರನ್ನು ಕೇಳುತ್ತಾರೆ ಎಂದು ನನಗೆ ತಿಳಿದಿಲ್ಲ ಆದರೆ ಮೋದಿ ಜಿ ಅವರ ಸ್ಥಿತಿಯು ನನಗೆ ಭರವಸೆ ನೀಡುತ್ತದೆ.
  6. ರಷ್ಯಾ (Russia) ದಾಳಿ ನಂತರ ಪೂರ್ವ ಯುರೋಪಿಯನ್ ರಾಷ್ಟ್ರವು ತನ್ನ ವಾಯುಪ್ರದೇಶವನ್ನು ಮುಚ್ಚಿದ್ದು ಸಂಘರ್ಷ ಪೀಡಿತ ಉಕ್ರೇನ್‌ನಲ್ಲಿ ವಾಸಿಸುವ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಉಕ್ರೇನ್‌ಗೆ (Ukraine) ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಬೆಳಗ್ಗೆ ದೆಹಲಿಗೆ ವಾಪಸ್ಸಾಗಿದೆ. ಅಂತರ್ಜಾಲದಲ್ಲಿನ ಫ್ಲೈಟ್ ಟ್ರ್ಯಾಕರ್‌ಗಳು ಸದ್ಯಕ್ಕೆ ಉಕ್ರೇನಿಯನ್ ವಾಯುಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಿಮಾನವನ್ನು ತೋರಿಸುವುದಿಲ್ಲ.
  7. ನ್ಯಾಟೊ ಅಥವಾ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಅಲೈಯನ್ಸ್ ಮತ್ತು ಯುರೋಪಿಯನ್ ಯೂನಿಯನ್ ಇವೆರಡ ಮೂಲಕ ಉಕ್ರೇನ್ ಪಶ್ಚಿಮದ ಹತ್ತಿರ ಬರುತ್ತಿದೆ ಎಂದು ರಷ್ಯಾ ನಂಬುತ್ತದೆ.  ಉಕ್ರೇನ್ ನ್ಯಾಟೊ ಸದಸ್ಯರಾಗಿಲ್ಲ ಆದರೆ ಮೈತ್ರಿಯೊಂದಿಗೆ ಸಹಕರಿಸಿದೆ. ಅದೇ ವೇಳೆ ಸದಸ್ಯರಾಗುವಉದ್ದೇಶವನ್ನು ಆಗಾಗ್ಗೆ ವ್ಯಕ್ತಪಡಿಸಿದೆ. ಆದಾಗ್ಯೂ, ಪುಟಿನ್ ಉಕ್ರೇನ್ ನ್ಯಾಟೋಗೆ ಸೇರುವುದರಿಂದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಅನ್ನು ತನ್ನ ನಿಯಂತ್ರಣಕ್ಕೆ ತರುವಲ್ಲಿನ ತೊಂದರೆಯ ಹೆಚ್ಚಾಗಲಿದೆ ಎಂಬುದನ್ನು ಕಂಡುಕೊಂಡಿದ್ದಾರೆ.
  8. ರಷ್ಯಾದ ಸೇನಾಪಡೆಗಳು ಈಗಾಗಲೇ ಉಕ್ರೇನ್ (Russia Attack On Ukraine)​ ಮೇಲೆ ದಾಳಿ ಪ್ರಾರಂಭಿಸಿದ್ದು, ಉಕ್ರೇನ್​​ನ ಗಡಿ ದಾಟಿ ಚೆರ್ನಿಹಿವ್, ಖಾರ್ಕಿವ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಗೆ ಕಾಲಿಟ್ಟಿವೆ. ರಷ್ಯಾ ಸಶಸ್ತ್ರಪಡೆಗಳ ತೀವ್ರವಾದ ಶೆಲ್​ ದಾಳಿಯಿಂದಾಗಿ ಇದುವರೆಗೆ ಏಳು ಜನರು ಮೃತರಾಗಿದ್ದು, 9ಮಂದಿ ಗಾಯಗೊಂಡಿದ್ದಾಗಿ ಉಕ್ರೇನ್​​ ಆಡಳಿತ ತಿಳಿಸಿದ್ದಾಗಿ ರಾಯಿಟರ್ಸ್​ ಸುದ್ದಿ ಮಾಧ್ಯಮ ವರದಿ ಮಾಡಿದೆ. ಗುರುವಾರ ಪುತಿನ್ (Vladimir Putin)​ ಏಕಾಏಕಿ ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆಗೆ ಸೂಚನೆ ನೀಡಿದರು.
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್