Russia- Ukraine War: ಉಕ್ರೇನ್ ಗುಂಡಿನ ದಾಳಿಗೆ ನೆಲಕ್ಕುರುಳಿದ ರಷ್ಯಾದ ಯುದ್ಧವಿಮಾನ; ವಿಡಿಯೋ ವೈರಲ್
ಉಕ್ರೇನ್ ಸೇನೆಯ ಗುಂಡಿನ ದಾಳಿಯ ನಂತರ ರಷ್ಯಾದ ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸುವ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉಕ್ರೇನ್: ಉಕ್ರೇನ್ ದೇಶದ ದಕ್ಷಿಣ ಭಾಗದಲ್ಲಿ ನಡೆದ ಭಾರೀ ಘರ್ಷಣೆಯಲ್ಲಿ ಉಕ್ರೇನ್ (Ukraine) ಪಡೆಗಳು ರಷ್ಯಾದ ಫೈಟರ್ ಜೆಟ್ (Russian Fighter Jet) ಎಸ್ಯು-35 ಅನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ. ರಷ್ಯಾದ ಯುದ್ಧವಿಮಾನ ನೋವಾ ಕಾಖೋವ್ಕಾ ನಗರದ ಬಳಿ ಪತನವಾಗಿದೆ. ಉಕ್ರೇನ್ ಸೇನೆಯ ಗುಂಡಿನ ದಾಳಿಯ ನಂತರ ಫೈಟರ್ ಜೆಟ್ ನೆಲಕ್ಕೆ ಅಪ್ಪಳಿಸುವ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ ರಷ್ಯಾದ ಯುದ್ಧ ವಿಮಾನವು ಆಕಾಶದಿಂದ ಕೆಳಗೆ ಅಪ್ಪಳಿಸುವುದನ್ನು ನೋಡಬಹುದು. ಅದರ ಹಿಂದೆ ಹೊಗೆ ಏಳುವುದನ್ನು ನೋಡಬಹುದು. ಈ ಬಗ್ಗೆ ರೆಡ್ಡಿಟ್ ನೀಡಿರುವ ವಿವರಣೆಯ ಪ್ರಕಾರ, ಎಸ್ಯು -35 ಉಕ್ರೇನಿಯನ್ ವಾಯುಪಡೆಯ ವಿಮಾನದ ಮೇಲೆ ದಾಳಿ ಮಾಡಲಾಯಿತು. ವಿಮಾನವು ನೆಲಕ್ಕೆ ಅಪ್ಪಳಿಸುವ ಮೊದಲು ಪೈಲಟ್ ಕೆಳಗೆ ಹಾರಿದ್ದಾನೆ.
ಈ ಮೂಲಕ 2ನೇ ಬಾರಿ ಎಸ್ಯು -35 ಯುದ್ಧವಿಮಾನವನ್ನು ಉಕ್ರೇನಿಯನ್ ಪಡೆ ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಉಕ್ರೇನಿಯನ್ ವಾಯುಪಡೆ ದಕ್ಷಿಣ ಉಕ್ರೇನ್‌ನ ನೋವಾ ಕಾಖೋವ್ಕಾ ಬಳಿ ರಷ್ಯಾದ ಫೈಟರ್ ಜೆಟ್ ಸು -35 ಅನ್ನು ಹೊಡೆದುರುಳಿಸಿತು” ಎಂದು ರಕ್ಷಣಾ ಸಚಿವಾಲಯ ಟ್ವಿಟರ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: Rocket Attack: ಉಕ್ರೇನ್ ಅಪಾರ್ಟ್ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಮಂದಿ ಸಾವು
ಉಕ್ರೇನ್ ಸಶಸ್ತ್ರ ಪಡೆಗಳ ವಾಯುಪಡೆಯ ಕಮಾಂಡ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಂಗಳವಾರ ವಾಯುಪಡೆಯ ವಿಮಾನ ವಿರೋಧಿ ಕ್ಷಿಪಣಿ ಘಟಕಗಳಿಂದ ಫೈಟರ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವಾರ, ಉಕ್ರೇನಿಯನ್ ಅಧಿಕಾರಿಗಳು ತಮ್ಮ ಪಡೆಗಳು ಉಕ್ರೇನ್‌ನ ದಕ್ಷಿಣ ಖೆರ್ಸನ್ ಪ್ರದೇಶದಲ್ಲಿ ರಷ್ಯಾದ ಹಿಡಿತದಲ್ಲಿರುವ ಪಟ್ಟಣದಲ್ಲಿ ಯುದ್ಧಸಾಮಗ್ರಿ ಡಿಪೋವನ್ನು ನಾಶಪಡಿಸಿವೆ ಎಂದು ಹೇಳಿದ್ದರು.
Published On - 3:03 pm, Wed, 20 July 22