ನನ್ನ ಪತ್ನಿಗೆ ವಿದಾಯ ಹೇಳುತ್ತಿರುವೆ: ದೇಶಕ್ಕಾಗಿ ಹೋರಾಡಲು ಮುಂದಾದ ಇಸ್ರೇಲ್ ಪತ್ರಕರ್ತ
Israel-Hamas Conflict: ಇಸ್ರೇಲ್ನ ಪತ್ರಕರ್ತರೊಬ್ಬರು ತನ್ನ ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಇದಕ್ಕಾಗಿ ತನ್ನ ಕುಟುಂಬವನ್ನು ತ್ಯಜಿಸಿ ಇಸ್ರೇಲ್ ಸೈನಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹನನ್ಯಾ ನಫ್ತಾಲಿ ಎಂಬ ಇಸ್ರೇಲ್ ಪತ್ರಕರ್ತ ಈ ಬಗ್ಗೆ X ನಲ್ಲಿ (ಹಿಂದಿನ ಟ್ವಿಟರ್)ಹಂಚಿಕೊಂಡಿದ್ದಾರೆ. ಹನನ್ಯಾ ನಫ್ತಾಲಿ ತನ್ನ ಪತ್ನಿಯನ್ನು ಅಪ್ಪಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ದೇಶದ ವಿಚಾರ ಎಂದು ಬಂದಾಗ ಎಲ್ಲರಲ್ಲೂ ಒಂದು ಅಭಿಮಾನ ಹುಟ್ಟಿಕೊಳ್ಳುವುದು ಸಹಜ, ಆದರೆ ಯುದ್ಧದ ಎಂದಾಗ ಒಂದು ಬಾರಿ ಅಂಜಿಕೆ ಉಂಟಾಗುತ್ತದೆ. ಆದರೆ ನಮ್ಮ ದೇಶಕ್ಕೆ ನಾವು ಹೋರಾಡುವುದು ಅನಿವಾರ್ಯ ಎಂದಾಗ ರಾಷ್ಟ್ರಕ್ಕಾಗಿ ಜೀವ ಬಿಡಲು ಸಿದ್ಧವಾಗಿರಬೇಕು. ಇದೀಗ ಸದ್ಯಕ್ಕೆ ಇಸ್ರೇಲ್ ಪರಿಸ್ಥಿತಿ ಕೂಡ ಇದೆ ರೀತಿಯಲ್ಲಿದೆ. ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ಮಾಡಿದ್ದು, ಇದಕ್ಕೆ ಉತ್ತರವಾಗಿ ಇಸ್ರೇಲ್ ಕೂಡ ಗಾಜಿ ಪಟ್ಟಿಯ ಮೇಲೆಯು ದಾಳಿ ನಡೆಸಿದೆ. ಆದರೆ ಈ ಯುದ್ಧ ನಿಂತಿಲ್ಲ. ಇಸ್ರೇಲ್ ಪ್ರತಿಯೊಬ್ಬ ಪ್ರಜೆಯು ಕೂಡ ಈ ಯುದ್ಧದಲ್ಲಿ ಹೋರಾಡಲು ಸಿದ್ಧನಾಗಿದ್ದಾನೆ. ಇಸ್ರೇಲ್ನ ಪತ್ರಕರ್ತರೊಬ್ಬರು ತನ್ನ ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಇದಕ್ಕಾಗಿ ತನ್ನ ಕುಟುಂಬವನ್ನು ತ್ಯಜಿಸಿ ಇಸ್ರೇಲ್ ಸೈನಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
ಹನನ್ಯಾ ನಫ್ತಾಲಿ ಎಂಬ ಇಸ್ರೇಲ್ ಪತ್ರಕರ್ತ ಈ ಬಗ್ಗೆ X ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದಾರೆ. ಹನನ್ಯಾ ನಫ್ತಾಲಿ ತನ್ನ ಪತ್ನಿಯನ್ನು ಅಪ್ಪಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಈ ಖಾತೆಯನ್ನು ತನ್ನ ಪತ್ನಿ ನಿರ್ವಹಿಸುತ್ತಾಳೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. “ನಾನು ನನ್ನ ದೇಶ ಇಸ್ರೇಲ್ನ್ನು ರಕ್ಷಣೆ ಮಾಡಲು ಮತ್ತು ಅದಕ್ಕಾಗಿ ಸೇವೆ ಸಲ್ಲಿಸಲು ಸಿದ್ಧನಾಗಿ ಎಂದು ಬರೆದುಕೊಂಡಿದ್ದಾರೆ. ದೇವರ ಆಶೀರ್ವಾದ ಮತ್ತು ರಕ್ಷಣೆ ಮಾಡುವ ಛಲ ನನ್ನಲ್ಲಿದೆ. ನಾನು ನನ್ನ ಪತಿ ಇಂಡಿಯಾ ನಫ್ತಾಲಿಗೆ ವಿದಾಯ ಹೇಳಿದ್ದೇನೆ. ಇನ್ನು ಮುಂದೆ ಎಲ್ಲ ಪೋಸ್ಟ್ಗಳನ್ನು ಆಕೆಯೇ ನಿರ್ವಹಿಸುತ್ತಾಳೆ ಎಂದು ಹೇಳಿದ್ದಾರೆ.
I am drafted as well to serve and defend my country Israel. 🇮🇱
I said goodbye to my wife India, who sent me with blessings and protection of God. From now on she will be managing and posting on my behalf so be nice to her. 😉🇮🇱😊 @indianaftali pic.twitter.com/K8O56kAQH7
— Hananya Naftali (@HananyaNaftali) October 9, 2023
ಇದನ್ನೂ ಓದಿ:ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷ; ಉದ್ಯೋಗಕ್ಕಾಗಿ ಇಸ್ರೇಲ್ನಲ್ಲಿ ಸಿಲುಕಿದ ಕರಾವಳಿಯ ಸಾವಿರಾರು ಜನ
ಇಸ್ರೇಲ್ ಪತ್ರಕರ್ತ ಹನನ್ಯಾ ನಫ್ತಾಲಿ ಅವರ ಪತ್ನಿ ಇಂಡಿಯಾ ನಫ್ತಾಲಿ ಅವರು ಕೂಡ ಒಂದು ಪೋಸ್ಟ್ನ್ನು ಮರುಹಂಚಿಕೊಂಡಿದ್ದಾರೆ. ತನ್ನ ಪತಿ ಯುದ್ಧದಲ್ಲಿ ಹೋರಾಡಲು ಹೊರಟಿದ್ದರಿಂದ ಅವರಿಗಾಗಿ ಪ್ರಾರ್ಥಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಯುದ್ಧಕ್ಕೆ ಹೋದ ನಂತರ ಹನನ್ಯಾ ನಫ್ತಾಲಿ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಾನು ಗಡಿ ಪ್ರದೇಶ ರಕ್ಷಣೆ ಮಾತ್ರ ಮಾಡುತ್ತಿಲ್ಲ, ಸಂಕಷ್ಟದಲ್ಲಿರುವ ಜನರನ್ನು ರಕ್ಷಣೆ ಮಾಡುವ ಹೊಣೆಯನ್ನು ಕೂಡ ಸೇನೆ ನೀಡಿದೆ ಎಂದು ಹೇಳಿದ್ದಾರೆ.
I rushed to the bomb shelter as rocket sirens sounded in Tel Aviv.
My heart breaks for my neighbors. I see some of their kids crying and the elderly not making it down the stairs in time. pic.twitter.com/G6C3xgAVzM
— India Naftali (@indianaftali) October 9, 2023
ಇನ್ನೊಂದು ಕಡೆಯಲ್ಲಿ ಇಸ್ರೇಲ್ ಸೇನೆಯು ತನ್ನ ಅಧಿಕೃತ ಎಕ್ಸ್ನಲ್ಲಿ, ತಂದೆಯೊಬ್ಬರು ತನ್ನ ಮಗನಿಗೆ ವಿದಾಯ ಹೇಳುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಯುದ್ಧದಲ್ಲಿ ಗೆದ್ದು, ಮತ್ತೆ ಬರುವೇ ಎಂಬ ಭರವಸೆಯನ್ನು ನೀಡುವುದನ್ನು ಈ ಪೋಸ್ಟ್ನಲ್ಲಿ ನೋಡಬಹುದು. ಇನ್ನು ಸೇನೆ ತಿಳಿಸಿರುವಂತೆ ಈ ಯುದ್ಧದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸುವಂತೆ ಮನವಿ ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 am, Tue, 10 October 23