Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇಖ್ ಹಸೀನಾರ ಸಾಕು ಬೆಕ್ಕಿನ ಕಥೆ, ಪ್ರತಿಭಟನೆ ವೇಳೆ ಮಾರಾಟವಾಗಿ ಮತ್ತೆ ಮನೆ ತಲುಪಿದ ಬೆಕ್ಕು

ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದ ಬಳಿಕ ಅವರ ಅಧಿಕೃತ ನಿವಾಸಕ್ಕೆ ಹಲವರು ನುಗ್ಗಿ ಎಲ್ಲಾ ವಸ್ತಗಳನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಯಲ್ಲಿದ್ದ ಸಾಕು ಪ್ರಾಣಿಗಳನ್ನು ಅಪಹರಿಸಿ ಮಾರಾಟ ಮಾಡಿದ್ದಾರೆ.

ಶೇಖ್ ಹಸೀನಾರ ಸಾಕು ಬೆಕ್ಕಿನ ಕಥೆ, ಪ್ರತಿಭಟನೆ ವೇಳೆ ಮಾರಾಟವಾಗಿ ಮತ್ತೆ ಮನೆ ತಲುಪಿದ ಬೆಕ್ಕು
ಬೆಕ್ಕು
Follow us
TV9 Web
| Updated By: ನಯನಾ ರಾಜೀವ್

Updated on: Aug 09, 2024 | 9:37 AM

ಬಾಂಗ್ಲಾದೇಶದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಭುಗಿಲೆದ್ದ ಹಿಂಸಾಚಾರದಿಂದ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ಅವರು ಬಾಂಗ್ಲಾದೇಶ ತೊರೆಯುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಅವರ ಅಧಿಕೃತ ನಿವಾಸವನ್ನು ಪ್ರತಿಭಟನಾಕಾರರು ವಶಪಡಿಸಿಕೊಂಡರು. ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಮನೆಯ ಕುರ್ಚಿಗಳು, ಬಟ್ಟೆಗಳು, ಸಾಕು ಪ್ರಾಣಿಗಳು, ಕೋಳಿಗಳು, ಮೀನು, ಬೆಕ್ಕು ಮತ್ತು ಜರ್ಮನ್ ಶೆಫರ್ಡ್​ ಸೇರಿದಂತೆ ಅನೇಕ ವಸ್ತುಗಳನ್ನು ಲೂಟಿ ಮಾಡಿದರು.

ಇದೀಗ ಬಾಂಗ್ಲಾದೇಶದ ಸ್ವಯಂಸೇವಾ ಸಂಸ್ಥೆಯೊಂದು ಶೇಖ್ ಹಸೀನಾ ಅವರ ಅಧಿಕೃತ ನಿವಾಸಿದಿಂದ ಲೂಟಿ ಮಾಡಿದ್ದ ಜರ್ಮನ್ ಶೆಫರ್ಡ್​ ಮತ್ತು ಬೆಕ್ಕನ್ನು ಹಿಂದಿರುಗಿಸುವ ಕೆಲಸ ಮಾಡಿದ್ದಾರೆ. ಶೇಖ್ ಹಸೀನಾ ಅವರ ನಿವಾಸದಿಂದ ಲೂಟಿ ಮಾಡಿದ ಬೆಕ್ಕನ್ನು 40 ಸಾವಿರ ರೂ. ಬಾಂಗ್ಲಾದೇಶಿ ಟಾಕಾಗೆ ಮಾರಾಟ ಮಾಡಲಾಗಿತ್ತು. ಬಾಂಗ್ಲಾದೇಶದ ವಿಶೇಷ ಭದ್ರತಾ ಪಡೆ ಹಸೀನಾ ಅವರ ನೆಚ್ಚಿನ ಜರ್ಮನ್ ಶೆಫರ್ಡ್​ ಅನ್ನು ಕೂಡ ಕರೆತರಲಾಗಿದೆ.

ಅಭೊಯಾರೊನ್ನೊ ಹೆಸರಿನ ಸಂಸ್ಥೆಯು ಫೇಸ್​ಬುಕ್ ಪೋಸ್ಟ್​ನಲ್ಲಿ ಹಸೀನಾರ ಬೆಕ್ಕನ್ನು ಮನೆಗೆ ಹಿಂದಿರುಗಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಆದರೆ ಟಿವಿ9 ಕನ್ನಡ ಈ ವಿಡಿಯೋವನ್ನು ದೃಢೀಕರಿಸಿಲ್ಲ.

ನಿವಾಸದಿಂದ ಲೂಟಿ ಮಾಡಿರುವ ಎಲ್ಲಾ ಪ್ರಾಣಿಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.

ಅಗತ್ಯ ಬಿದ್ದರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಪ್ರಾಣಿಗಳನ್ನು ಲೂಟಿ ಮಾಡಿದವರಿಗೆ ತಕ್ಷಣ ಹಿಂದಿರುಗಿಸುವಂತೆ ಸಂಘಟನೆಯು ವಿನಂತಿಸಿದೆ. ಹಿಂಸಾತ್ಮಕ ಚಳವಳಿಯಿಂದಾಗಿ ಶೇಖ್ ಹಸೀನಾ ಸೋಮವಾರ ಬಾಂಗ್ಲಾದೇಶವನ್ನು ತೊರೆದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ