ಅಫ್ಘಾನಿಸ್ತಾನದ ಬಗ್ಗೆ ಯಾಕೆ ಸುಮ್ಮನೆ ಮಾತನಾಡುತ್ತೀರಿ, ಸುಮ್ಮನೆ ಇದ್ದುಬಿಡಿ: ಪಾಕ್ ಪ್ರಧಾನಿಗೆ ಅಫ್ಘಾನ್ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಸಲಹೆ
ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ತಾಲಿಬಾನಿಗಳು ಆ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಅಲ್ಲಿಯವರೆಗೆ ಅಧ್ಯಕ್ಷರಾಗಿದ್ದ ಹಮೀದ್ ಕರ್ಜಾಯಿ ದೇಶ ಬಿಟ್ಟು ಹೋಗಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ (Hamid Karzai )ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ಖಾನ್ (Imran Khan)ರಿಗೆ ಒಂದು ಮನವಿ ಮಾಡಿದ್ದಾರೆ. ಅಫ್ಘನ್ನರ ಪರವಾಗಿ ಮಾತನಾಡುವುದನ್ನು ನಿಲ್ಲಿಸಿ, ಅಪಪ್ರಚಾರದಿಂದ ದೂರ ಇರಿ ಎಂದು ಕೇಳಿದ್ದಾರೆ. ಟ್ವೀಟ್ ಮಾಡಿರುವ ಹಮೀದ್ ಕರ್ಜಾಯಿ, ಅಫ್ಘಾನಿಸ್ತಾನದಿಂದ ಬೆದರಿಕೆ ಬರುತ್ತಿದೆ ಎಂದು ಪಾಕಿಸ್ತಾನ ಹೇಳುತ್ತಿರುವುದು ಕೇವಲ ಪ್ರಚಾರಕ್ಕಾಗಿದೆ. ಇದು ಸ್ವಲ್ಪ ವಿರುದ್ಧವಾಗಿಯೂ ಇದೆ. ಅಂದಹಾಗೆ, ಐಸಿಸ್ ಬೆದರಿಕೆ ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಬರುತ್ತಿದೆ ಎಂದು ಹೇಳಿದ್ದಾರೆ. ಭಾನುವಾರ ಪಾಕಿಸ್ತಾನ ಇಸ್ಲಾಮಿಕ್ ಸಹಕಾರ ಸಂಘಟನೆ ಶೃಂಗಸಭೆ ನಡೆಸಿತ್ತು. ಅಫ್ಘಾನಿಸ್ತಾನದಲ್ಲಿ ಉಂಟಾದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಈ ಸಮಿಟ್ ನಡೆದಿತ್ತು. ಸಮಿಟ್ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಹಮೀದ್ ತಿರುಗೇಟು ನೀಡಿದ್ದಾರೆ. ನೀವು ಸುಮ್ಮನಿರಿ, ಇದು ಅಫ್ಘಾನಿಸ್ತಾನದ ಆಂತರಿಕ ವಿಚಾರಗಳು ಎಂದಿದ್ದಾರೆ.
د افغانستان پخوانی جمهور رئیس حامد کرزی د اسلامي همکاریو د سازمان @OIC_OCI په غونډه کې د پاکستان د صدراعظم ښاغلی عمران خان @PakPMO څرگندونې د افغانانو ترمنځ د تفرقه اچونې هڅه او د افغانستان خلکو ته توهین گڼي، همدارنگه دا چې گواکې داعش ډله په افغانستان کې فعالیت لري او له…
— Hamid Karzai (@KarzaiH) December 19, 2021
ಇಮ್ರಾನ್ ಖಾನ್ ಹೇಳಿದ್ದೇನು? ಭಾನುವಾರ ನಡೆದ ಇಸ್ಲಾಮಿಕ್ ಸಹಕಾರ ಶೃಂಗಸಭೆಯಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಅಫ್ಘಾನಿಸ್ತಾನದಲ್ಲಿ ಇದೀಗ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಜಗತ್ತು ಸಮಯೋಚಿತವಾಗಿ ಯೋಚಿಸಿ, ವರ್ತಿಸಬೇಕು. ಇಲ್ಲದೆ ಇದ್ದರೆ ಆ ದೇಶ ಮಾನವ ನಿರ್ಮಿತ ಅತಿದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು. ಹಾಗೇ, ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಟರ್ಕಿ ವಿದೇಶಾಂಗ ವ್ಯವಹಾರಗಳ ಸಚಿವ ಮೆವ್ಲುಟ್ ಕ್ಯಾವುಲು, ಇದೀಗ ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಿರುವ ತಾಲಿಬಾನಿಗಳ ಜತೆ ಕೆಲಸ ಮಾಡುವುದು ಅನಿವಾರ್ಯ ಎಂದಿದ್ದರು.
ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ತಾಲಿಬಾನಿಗಳು ಆ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಂತೆ ಅಲ್ಲಿಯವರೆಗೆ ಅಧ್ಯಕ್ಷರಾಗಿದ್ದ ಹಮೀದ್ ಕರ್ಜಾಯಿ ದೇಶ ಬಿಟ್ಟು ಹೋಗಿದ್ದಾರೆ. ಹಾಗೇ, ಯುಸ್ ಕೂಡ ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸ್ ಪಡೆದಿದೆ. ತಾಲಿಬಾನಿಗಳನ್ನು ಕೆಲವು ದೇಶಗಳು ಒಪ್ಪಿಕೊಂಡಿದ್ದರೆ, ಇನ್ನೂ ಕೆಲವು ದೇಶಗಳು ಒಪ್ಪಿಕೊಂಡಿಲ್ಲ. ಅದರಲ್ಲೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದ ಮೇಲೆ ಮೊದಲು ಸಂಭ್ರಮಿಸಿದ್ದು ಪಾಕಿಸ್ತಾನ. ಆದರೆ ಈಗೀಗ ಪಾಕ್ ಕೂಡ ಉಲ್ಟಾ ಹೊಡೆಯುತ್ತಿದೆ. ಅದರಲ್ಲಿ ಹಮೀದ್ ದೇಶ ಬಿಟ್ಟು ಹೋದ ಮೇಲೆ ಹೀಗೆ ಅಫ್ಘಾನಿಸ್ತಾನದ ಬಗ್ಗೆ ಟ್ವೀಟ್ ಮಾಡಿದ್ದು ಅಚ್ಚರಿ ತಂದಿದೆ.
ಇದನ್ನೂ ಓದಿ: ಸುದೀಪ್ ಬಾಡಿಗಾರ್ಡ್ಗೆ ವಿಡಿಯೋ ಕಾಲ್ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ