ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ, ಶಿಕ್ಷಕನ ವಿರುದ್ಧ ಆಕ್ರೋಶ

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ ನೀಡಿರುವ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳು ಹೆಚ್ಚು ನೀರು ಕುಡಿಬೇಕು, ಚಟುವಟಿಕೆಯಿಂದಿರಬೇಕು, ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ.

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ, ಶಿಕ್ಷಕನ ವಿರುದ್ಧ ಆಕ್ರೋಶ
ತರಗತಿ ಮಕ್ಕಳು, ಸಾಂದರ್ಭಿಕ ಚಿತ್ರ
Image Credit source: Reason Foundation

Updated on: Oct 08, 2024 | 11:07 AM

ತರಗತಿ ವೇಳೆ ಶೌಚಾಲಯಕ್ಕೆ ಹೋಗದ ಮಕ್ಕಳಿಗೆ ಬೋನಸ್ ಅಂಕ ನೀಡಿರುವ ಶಿಕ್ಷಕನ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳು ಹೆಚ್ಚು ನೀರು ಕುಡಿಬೇಕು, ಚಟುವಟಿಕೆಯಿಂದಿರಬೇಕು, ಸರಿಯಾದ ಸಮಯಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ.

ಆದರೆ ಕ್ಯಾಲಿಫೋರ್ನಿಯಾದ ಶಿಕ್ಷಕರೊಬ್ಬರು ತರಗತಿ ವೇಳೆ ಯಾರು ಕಡಿಮೆ ಬಾರಿ ಶೌಚಾಲಯಕ್ಕೆ ಹೋಗುತ್ತಾರೋ ಅವರಿಗೆ ಬೋನಸ್ ಅಂಕಗಳನ್ನು ನೀಡಿದ್ದು, ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಏಕೆಂದರೆ ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜನೆ ಮಾಡಲೇಬೇಕು, ದೇಹದಲ್ಲಿ ಚಯಾಪಚಯ ಕ್ರಿಯೆ ನಡೆಯಲು ನೀರಿನ ಅವಶ್ಯಕತೆ ತುಂಬಾ ಇದೆ.

ಮೂತ್ರಕ್ಕೆ ಹೋಗಬೇಕಾಗುತ್ತದೆ ಎಂದು ನೀರು ಕುಡಿಯದಿದ್ದರೆ ಮಕ್ಕಳು ನಿರ್ಜಲೀಕರಣದಂತಹ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಗಣಿತ ಶಿಕ್ಷಕರೊಬ್ಬರು ವಾರಕ್ಕೆ ಒಂದೇ ಒಂದು ಬಾತ್​ ರೂಂ ಪಾಸ್​ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡುವ ಆಮಿಷವೊಡ್ಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಸೆಪ್ಟೆಂಬರ್​ 5ರಂದು ಪೋಷಕರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೂತ್ರ ಬಂದಾಗ 30 ನಿಮಿಷಗಳ ಕಾಲ ಮಗಳಿಗೆ ತಡೆದುಕೊಳ್ಳುವಂತೆಯೂ ಆಕೆ ಹೇಳಿದ್ದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್​​; ಬಡತನ ಗೆದ್ದ ಸ್ಫೂರ್ತಿದಾಯಕ ಕಥೆ

ಇಂತಹ ಅನೇಕ ಘಟನೆಗಳು ಸಾಕಷ್ಟು ಶಾಲೆಗಳಲ್ಲಿ ನಡೆಯುತ್ತಿರುತ್ತದೆ, ಅಹಮದಾಬಾದ್​ನ ಮಾಧವ್ ಪಬ್ಲಿಕ್ ಸ್ಕೂಲ್​ನಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಗೋಡೆಗೆ ತಳ್ಳಿ ಹಲ್ಲೆ ನಡೆಸಿ ಸಿಕ್ಕಿಬಿದ್ದಿದ್ದರು.

ಜಿಲ್ಲಾ ಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಶಾಲೆಯು ಪಟೇಲ್ ಅವರನ್ನು ಅಮಾನತುಗೊಳಿಸಿದೆ. ಶಿಕ್ಷಕನನ್ನು ವತ್ವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿಯಂತೆ ಆ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ರಾಜಸ್ಥಾನದ ಟೋಂಕ್‌ನಲ್ಲಿ 5 ನೇ ತರಗತಿಯ ಬಾಲಕಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿದ ಆರೋಪದ ಮೇಲೆ ಸರ್ಕಾರಿ ಶಿಕ್ಷಕನನ್ನು ಬಂಧಿಸಲಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us