ರಿವರ್ಸ್ ಮೆಂಟರಿಂಗ್ ಪ್ರಾಜೆಕ್ಟ್ ಬಗ್ಗೆ ಕೇಳಿದ್ದೀರಾ? ಹದಿಹರೆಯದ ಯುವತಿಯರು ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿಯಾಗಿರುವ ಯೋಜನೆ ಇದು

ಹದಿಹರೆಯದ ಯುವತಿಯರೇ ಹುಟ್ಟು ಹಾಕಿರುವ ಅದ್ಭುತ ಯೋಜನೆಯಿದು. ಇದನ್ನು ಭಾರತದಲ್ಲೂ ಪ್ರಯೋಗಿಸಿದರೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಬಹುದು.

ರಿವರ್ಸ್ ಮೆಂಟರಿಂಗ್ ಪ್ರಾಜೆಕ್ಟ್ ಬಗ್ಗೆ ಕೇಳಿದ್ದೀರಾ? ಹದಿಹರೆಯದ ಯುವತಿಯರು ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿಯಾಗಿರುವ ಯೋಜನೆ ಇದು
ಪೊಲೀಸ್​ ಅಧಿಕಾರಿಗಳಿಗೆ ಮೆಂಟರಿಂಗ್ ಮಾಡುವ ಯುವತಿಯರು ಇವರೇ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 31, 2021 | 4:55 PM

ಲಂಡನ್​: ಇದೊಂದು ವಿನೂತನ, ಸ್ವಾಗತಾರ್ಹ ಹಾಗೂ ಅನುಕರಣೀಯ ಮಾದರಿ. ಈ ಯೋಚನೆ ಬೇರೆ ಯಾರೂ ಮಾಡಿರಲಾರರು. ಲಂಡನ್ ನಗರದ ಮೂವರು ಹದಿಹರೆಯದ ಯುವತಿಯರು ನಗರದ ಮೆಟ್ರೊಪಾಲಿಟನ್ ವ್ಯವಸ್ಥೆಯ ಮಹಿಳಾ ಅಧಿಕಾರಿಗಳೊಂದಿಗೆ ತಮ್ಮ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ತಮ್ಮವರಿಗೆ ನೆರವಾಗುವುದರ ಜೊತೆಗೆ ಪೊಲೀಸಿಂಗ್ ವ್ಯವಸ್ಥೆಯ ಕೆಲಸವನ್ನು ಹಗುರಗೊಳಿಸುತ್ತಿದ್ದಾರೆ. ಇದನ್ನು ರಿವರ್ಸ್ ಮೆಂಟರಿಂಗ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತಿದ್ದು ಲಂಡನ್ನಲ್ಲಿ ಕ್ರಮೇಣ ಜನಪ್ರಿಯಗೊಳ್ಳುತ್ತಿದೆ. ಶೋಷಣೆಗೊಳಗಾಗಿರುವ ಕುಟುಂಬಗಳ ಹಿನ್ನೆಲೆಯುಳ್ಳ ಮೂವರು ಯುವತಿಯರು ಬೇರೆ ಬೇರೆ ಅಧಿಕಾರಿಗಳ ಜೊತೆ ಅಪರಾಧಕ್ಕೆ ಜಗತ್ತಿಗೆ ಸಂಬಂಧಪಟ್ಟಿರುವ ವಿವಿಧ ವಿಷಯಗಳನ್ನು ಆಗಿಂದಾಗ್ಗೆ ಚರ್ಚಿಸುತ್ತಾ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ.

ಪೊಲೀಸ್ ಸಿಬ್ಬಂದಿ ಯಾವ ದೇಶದವರೇ ಅಗಿರಲಿ, ಅವರು ಖಡಕ್ ಮನೋಭಾವದವರು, ಜನರೊಂದಿಗೆ ಕಠಿಣವಾಗಿ ವರ್ತಿಸುವವರು ಅನ್ನೋದು ನಮ್ಮ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಅಂಥ ಭಾವನೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಎರಡೂ ಪಾರ್ಟಿಗಳು-ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಯುವತಿಯರು ಮಾಡುತ್ತಿದ್ದಾರೆ.

ಫರ್ಹೀನ್ ಖಾನ್ ಹೆಸರಿನ ಯುವತಿ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ವ್ಯವಸ್ಥೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಲೆನ್ ಬಾಲ್ ಅವರೊಂದಿಗೆ ನಿರಂತರವಾಗಿ ಚರ್ಚೆ ಮಾಡುತ್ತಿರುತ್ತಾಳೆ. ಹೆಲೆನ್ ಅವರು ಯುತಿಯರೊಂದಿಗೆ ವಿಷಯಗಳನ್ನು ಡಿಸ್ಕಸ್ ಮಾಡುತ್ತಿರುವುದು ಬಹಳ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ್ದಾರೆ.

‘ನಾನು ಮಾಡುವ ಕೆಲಸಕ್ಕೆ ಒಂದು ಹೊಸ ದೃಷ್ಟಿಕೋನವನ್ನು ಇದು ಒದಗಿಸಿದೆ. ಯುವತಿಯರು ನಮ್ಮೊಂದಿಗೆ ಹಂಚಿಕೊಳ್ಳುವ ವಿಷಯಗಳು ನಮಗೆ ಸ್ಫೂರ್ತಿ ನೀಡುತ್ತಿವೆ. ಪೊಲೀಸ್ ಮತ್ತು ಸಮುದಾಯಗಳ ನಡುವೆ ಇವರು ಸೇತುವೆಯಾಗಿ ನಿಂತಿದ್ದಾರೆ, ಜನರ ಸಮಸ್ಯೆಗಳ ಆಳ ತಲುಪುವುದು ನಮಗೆ ಇವರಿಂದ ಸಾಧ್ಯವಾಗುತ್ತಿದೆ, ಯಾವತ್ತೂ ಕೊನೆಗೊಳ್ಳದ ಸ್ನೇಹ ಮತ್ತು ಬಾಂಧವ್ಯ ನಮ್ಮ ಮತ್ತು ಯುವತಿಯರು ನಡುವೆ ಬೆಸೆದಿದೆ’ ಎಂದು ಹೆಲೆನ್ ಹೇಳಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಯುವತಿಯರ ನಡುವೆ ಬೆಸುಗೆ ಮತ್ತು ಬಾಂಧವ್ಯ ಉತ್ತಮ ಮತ್ತು ಗಟ್ಟಿಕೊಳ್ಳಲು ಅವರು ಶೇರ್ ಮಾಡಿಕೊಳ್ಳುವ ವಿದ್ವಾಂಸರ, ಹೆಸರಾಂತ ನಾಯಕರ, ತತ್ವಜ್ಞಾನಿಗಳ ಹಾಗೂ ಇತರ ಖ್ಯಾತನಾಮರ ಉಕ್ತಿಗಳು (ಕೋಟ್) ಬಹಳ ನೆರವಾಗಿವೆ. ಎರಡೂ ಪಾರ್ಟಿಗಳು ಕೋಟ್ ಗಳನ್ನು ಶೇರ್ ಮಾಡಿಕೊಂಡು ಅವನ್ನು ಕೆಲಸದಲ್ಲಿ ಮತ್ತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಲ್ಲೊಂದು ಉದಾಹರಣೆಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ. ಹೆಲೆನ್ ಅವರೊಂದಿಗೆ ಖಾನ್ ಶೇರ್ ಮಾಡಿರುವ ಕೋಟ್ ಹೀಗಿದೆ: Creating something new is easy but creating something that lasts is the challenge-Adam Burman.

ಇದಕ್ಕೆ ಪ್ರತಿಯಾಗಿ ಹೆಲೆನ್ ಅವರು, ಮಾಯೋ ಏಂಜೆಲೊ ಅವರು ಕೋಟ್ ಅನ್ನು ಹೇಳುತ್ತಾರೆ: Try to be rainbow in some other’s clouds ಎನ್ನುದನ್ನು ಹೇಳಿ ಖಾನ್​ಗೆ, I have had cloudy times, ಆದರೆ ನೀನು ಕಾರ್ಮೋಡಗಳ ನಡುವೆ ಕಾಮನಬಿಲ್ಲು ಆಗಿ ಉದಯಿಸಿರುವೆ!’ ಎಂದು ಹೇಳಿದ್ದಾರೆ.

ಸಮಸ್ಯೆಗಳು ಬಗೆಹರಿಯಬೇಕಾದರೆ, ಅವುಗಳನ್ನು ಚರ್ಚಿಸಬೇಕಾಗುತ್ತದೆ, ಎಂದು ಖಾನ್ ಹೇಳುತ್ತಾಳೆ.

ಅದಕ್ಕೆ ಹೆಲೆನ್, ‘ಖಾನ್​ಳೊಂದಿಗೆ ಸಮಾಲೋಚನೆಗಳನ್ನು ನಡೆಸಲಾರಂಭಿಸಿದ್ದು ನನ್ನ ಮೇಲೆ ಬಹು ದೊಡ್ಡ ಪರಿಣಾಮ ಬೀರಿದೆ. ಇದು ವಿಸ್ತರಣೆಯಾಗಬೇಕು. ಬೇರೆ ಯುವತಿಯರು ತಮಗೆ ಸಮೀಪದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು, ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಯುವಜನಾಂಗದ ದನಿ ಮತ್ತು ಪೊಲೀಸ್ ಅಧಿಕಾರಿಗಳ ಕರ್ತವ್ಯ ನಿಷ್ಠೆ ಚಮತ್ಕಾರಗಳನ್ನು ಮಾಡಬಲ್ಲದು,’ ಎಂದು ಹೆಲೆನ್ ಹೇಳಿದ್ದಾರೆ.

ಅಂದಹಾಗೆ ಖಾನ್, ಹೆಲೆನ್ ಅವರೊಂದಿಗೆ ಕೌಟುಂಬಿಕ ಹಿಂಸೆ ಸಮಸ್ಯೆಗಳನ್ನು ಚರ್ಚಿಸಿದರೆ, ಬೇರೆ ಇಬ್ಬರು ಯುವತಿಯರು ಅಪರಾಧ ಜಗತ್ತಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಇತರ ಇಬ್ಬರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಾರೆ.

ಹದಿಹರೆಯದ ಯುವತಿಯರೇ ಹುಟ್ಟು ಹಾಕಿರುವ ಅದ್ಭುತ ಯೋಜನೆಯಿದು. ಇದನ್ನು ಭಾರತದಲ್ಲೂ ಪ್ರಯೋಗಿಸಿದರೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಬಹುದು. ಯುವತಿಯರು ಮನಸ್ಸು ಮಾಡಬೇಕಷ್ಟೇ. ಹಾಗೆಯೇ, ದಿನವಿಡೀ ಮೊಬೈಲ್ ಫೋನ್​​ನಲ್ಲಿ ಸಮಯ ಕಳೆಯುವ ಯುವಕರರು ಇದೇ ತೆರನಾದ ಇನ್ನೋವೇಟಿವ್ ಯೋಜನೆಗಳನ್ನು ಯೋಚಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು.

ಇದನ್ನೂ ಓದಿ:  IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?