AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 1ರಿಂದ ಶೇ.155ರಷ್ಟು ಸುಂಕ ವಿಧಿಸುವುದಾಗಿ ಚೀನಾಗೆ ಟ್ರಂಪ್ ಎಚ್ಚರಿಕೆ

ಚೀನಾ ಶೇ.155 ರಷ್ಟು ಸುಂಕ ವಿಧಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಚೀನಾಕ್ಕೆ ಎಚ್ಚರಿಕೆ ನೀಡಿದ್ದು, ನವೆಂಬರ್ 1 ರೊಳಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಮೊದಲು ಅನೇಕ ದೇಶಗಳು ಅಮೆರಿಕದ ಲಾಭ ಪಡೆದಿದ್ದವು, ಆದರೆ ಈಗ ಹಾಗೆ ಆಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ನವೆಂಬರ್ 1ರಿಂದ ಶೇ.155ರಷ್ಟು ಸುಂಕ ವಿಧಿಸುವುದಾಗಿ ಚೀನಾಗೆ ಟ್ರಂಪ್ ಎಚ್ಚರಿಕೆ
ಡೊನಾಲ್ಡ್​ ಟ್ರಂಪ್-ಷಿ
ನಯನಾ ರಾಜೀವ್
|

Updated on:Oct 21, 2025 | 8:02 AM

Share

ವಾಷಿಂಗ್ಟನ್, ಅಕ್ಟೋಬರ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಭಾರತದ ಬಳಿಕ ಇದೀಗ ಚೀನಾಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 1ರಿಂದ ಶೇ.155ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವ್ಯಾಪಾರ ಒಪ್ಪಂದಕ್ಕೆ ಬರದಿದ್ದರೆ ನವೆಂಬರ್ 1 ರಿಂದ ಚೀನಾದ ಸರಕುಗಳ ಮೇಲೆ ಅವರ ಆಡಳಿತವು ಶೇ. 155 ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಸಭೆಯಲ್ಲಿ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ವ್ಯಾಪಾರ ಉದ್ವಿಗ್ನತೆಗಳ ಹೊರತಾಗಿಯೂ ಚೀನಾ, ಅಮೆರಿಕದೊಂದಿಗೆ ತುಂಬಾ ಗೌರವದಿಂದ ವರ್ತಿಸಿದೆ ಎಂದು ಹೇಳಿದರು.

ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ.ಹಲವು ದೇಶಗಳು ಈ ಹಿಂದೆ ಅಮೆರಿಕದ ಲಾಭ ಪಡೆದಿದ್ದರೂ, ಆ ದಿನಗಳು ಮುಗಿದುಹೋಗಿವೆ ಎಂದು ಟ್ರಂಪ್ ಹೇಳಿದರು. ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಚೀನಾ ಶೇ. 55 ಮತ್ತು ಶೇ. 155 ರಷ್ಟು ಹಣವನ್ನು ನವೆಂಬರ್ 1 ರಿಂದ ಪಾವತಿಸಲಿದೆ.

ಈ ತಿಂಗಳ ಕೊನೆಯಲ್ಲಿ ದಕ್ಷಿಣ ಕೊರಿಯಾದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ಯೋಜಿತ ಭೇಟಿಯ ಬಗ್ಗೆಯೂ ಮಾತನಾಡಿದರು. ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ನವೆಂಬರ್ 1 ರಿಂದ ಜಾರಿಗೆ ಬರುವಂತೆ ಚೀನಾದ ಸರಕುಗಳ ಮೇಲೆ ಅವರು ಪ್ರಸ್ತುತ ಪಾವತಿಸುತ್ತಿರುವ ಸುಂಕದ ಜೊತೆಗೆ 100 ಪ್ರತಿಶತ ಹೆಚ್ಚುವರಿ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಪೋಸ್ಟ್​ ಮಾಡಿದ್ದರು.

ಮತ್ತಷ್ಟು ಓದಿ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಇಲ್ಲವಾದಲ್ಲಿ ಭಾರೀ ಸುಂಕ ಪಾವತಿಗೆ ಸಿದ್ಧರಾಗಿ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ

ದಕ್ಷಿಣ ಕೊರಿಯಾದಲ್ಲಿ ಶೀಘ್ರದಲ್ಲೇ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ ಟ್ರಂಪ್, ಈ ಸಭೆ ಎರಡೂ ದೇಶಗಳಿಗೆ ಪ್ರಯೋಜನಕಾರಿ ಒಪ್ಪಂದವಾಗಲಿದೆ ಎಂದರು. ಅಕ್ಟೋಬರ್ 10 ರಂದು ಚೀನಾದ ಮೇಲೆ 100% ವರೆಗೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿತು.

ಹಲವಾರು ಅಪರೂಪದ ಖನಿಜಗಳಿಗೆ ಸಂಬಂಧಿಸಿದಂತೆ ಚೀನಾ ಹೊಸ ನಿಯಮಗಳನ್ನು ಹೊರಡಿಸಿದೆ.ಈ ನಿಯಮಗಳ ಅಡಿಯಲ್ಲಿ, ಯಾವುದೇ ಕಂಪನಿಯು ಚೀನಾದಿಂದ ಅಪರೂಪದ ಖನಿಜಗಳನ್ನು ಖರೀದಿಸಿ ಹೊರಗೆ ಮಾರಾಟ ಮಾಡಲು ಬಯಸಿದರೆ, ಅದು ಮೊದಲು ಚೀನಾ ಸರ್ಕಾರದಿಂದ ಪರವಾನಗಿ ಪಡೆಯಬೇಕಾಗುತ್ತದೆ.

ಚೀನಾ ವಿಶ್ವದ 17 ಅಪರೂಪದ ಭೂಮಿಯ ಖನಿಜಗಳನ್ನು ಹೊಂದಿದ್ದು, ಅವುಗಳನ್ನು ಅದು ಜಗತ್ತಿಗೆ ರಫ್ತು ಮಾಡುತ್ತದೆ. ಇವುಗಳನ್ನು ಎಲೆಕ್ಟ್ರಾನಿಕ್ಸ್, ವಿದ್ಯುತ್ ವಾಹನಗಳು ಮತ್ತು ರಕ್ಷಣಾ ವಲಯದಲ್ಲಿ ಬಳಸಲಾಗುತ್ತದೆ. ಇದರರ್ಥ ಚೀನಾ ಈಗ 17 ಅಪರೂಪದ ಖನಿಜಗಳಲ್ಲಿ 12 ಅನ್ನು ನಿಯಂತ್ರಿಸುತ್ತದೆ. ಅವುಗಳನ್ನು ಬಳಸುವ ಮೊದಲು, ಚೀನಾದಿಂದ ರಫ್ತು ಪರವಾನಗಿ ಅಗತ್ಯವಿರುತ್ತದೆ.ಈ ಕ್ರಮವು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಭದ್ರತೆ ಮತ್ತು ಉದ್ಯಮದ ಮೇಲೆ ಪರಿಣಾಮ ಬೀರಬಹುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:00 am, Tue, 21 October 25

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?