AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆದರಿಕೆ ಹಾಕಿ ಭಾರತ – ಪಾಕ್ ಯುದ್ಧ ನಿಲ್ಲಿಸಿದೆ, 5 ಜೆಟ್ ಹೊಡೆದುರುಳಿಸಲಾಗಿತ್ತು: ನಿಲ್ಲದ ಡೊನಾಲ್ಡ್ ಟ್ರಂಪ್ ಕ್ಯಾತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ-ಪಾಕಿಸ್ತಾನ ನಡುವಿನ ಸೇನಾ ಸಂಘರ್ಷವನ್ನು ತಡೆದಿರುವುದು ತಾವೇ ಎಂದು ಹೇಳಿದ್ದಾರೆ. ಆ ಯುದ್ಧದಲ್ಲಿ ಐದು ಜೆಟ್​​ಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಉಲ್ಲೇಖಿಸಿದ ಅವರು, ವ್ಯಾಪಾರ ಬೆದರಿಕೆಯ ಮೂಲಕ ಯುದ್ಧವನ್ನು ತಡೆದಿರುವುದಾಗಿ ಹೇಳಿದ್ದಾರೆ. ಆದರೆ, ಹೊಡೆದುರುಳಿಸಲಾದ ಜೆಟ್​​ಗಳು ಭಾರತದ್ದೋ ಪಾಕಿಸ್ತಾನದ್ದೋ ಎಂಬುದನ್ನು ಉಲ್ಲೇಖಿಸಿಲ್ಲ.

ಬೆದರಿಕೆ ಹಾಕಿ ಭಾರತ - ಪಾಕ್ ಯುದ್ಧ ನಿಲ್ಲಿಸಿದೆ, 5 ಜೆಟ್ ಹೊಡೆದುರುಳಿಸಲಾಗಿತ್ತು: ನಿಲ್ಲದ ಡೊನಾಲ್ಡ್ ಟ್ರಂಪ್ ಕ್ಯಾತೆ
ಡೊನಾಲ್ಡ್ ಟ್ರಂಪ್
Ganapathi Sharma
|

Updated on: Jul 19, 2025 | 10:41 AM

Share

ವಾಷಿಂಗ್ಟನ್, ಜುಲೈ 19: ಆಪರೇಷನ್ ಸಿಂಧೂರ್ ಬಳಿಕ ಆರಂಭವಾದ ಭಾರತ ಹಾಗೂ ಪಾಕಿಸ್ತಾನ ನಡುವಣ ಸೇನಾ ಸಂಘರ್ಷದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತದೇ ರಾಗ ಎಳೆದಿದ್ದಾರೆ. ‘ಯುದ್ಧವನ್ನು ನಾನೇ ನಿಲ್ಲಿಸಿದ್ದು’ ಎಂಬ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಆದರೆ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಅದು ಸಣ್ಣ ಯುದ್ಧವಾಗಿರಲಿಲ್ಲ. 5 ಜೆಟ್​​ಗಳನ್ನು ಹೊಡೆದುರುಳಿಸಲಾಗಿತ್ತು. ಅಂಥ ಯುದ್ಧವನ್ನು ನಾನು ವ್ಯಾಪಾರ ಸಂಬಂಧಿತ ಬೆದರಿಕೆ ಹಾಕಿ ನಿಲ್ಲಿಸಿದೆ’ ಎಂದು ಹೇಳಿದ್ದಾರೆ. ಆದರೆ, ಹೊಡೆದುರುಳಿಸಲಾಗಿದ್ದ 5 ಜೆಟ್​​ಗಳು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಭಾರತ ಪಾಕಿಸ್ತಾನ ಯುದ್ಧದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

‘ನಾವು ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವುಗಳು ಸಣ್ಣ ಯುದ್ಧಗಳಾಗಿರಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಣ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ವಿಮಾನಗಳನ್ನು ಹೊಡೆದುರುಳಿಸಲಾಗುತ್ತಿತ್ತು. ಸುಮಾರು ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂಬುದಾಗಿ ನಾನು ಭಾವಿಸುತ್ತೇನೆ. ಈ ಎರಡೂ ರಾಷ್ಟ್ರಗಳು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳಾಗಿದ್ದು, ಪರಸ್ಪರ ದಾಳಿ ಮಾಡುತ್ತಿದ್ದವು’ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದುವರಿದು, ನಾವು ಇರಾನ್‌ನ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ ಎಂದೂ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ
Image
ಉಗ್ರನಿಗಿಂತ ಕೆಟ್ಟದಾಗಿ ನಡೆಸಿಕೊಂಡರು; ಮಾಜಿ ಪಿಎಂ ಇಮ್ರಾನ್ ಖಾನ್ ಆರೋಪ
Image
ಟಿಆರ್​ಎಫ್ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕ
Image
ಪಾಕಿಸ್ತಾನದಲ್ಲಿ ಉಗ್ರರ ಸಂಘಟನೆ ಇರುವುದು ನಿಜ; ಒಪ್ಪಿಕೊಂಡ ಬಿಲಾವಲ್ ಭುಟ್ಟೋ
Image
ಭಾರತದೊಂದಿಗೆ ಪಾಲುದಾರಿಕೆಗೆ ಪಾಕ್ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ

ಭಾರತ ಮತ್ತು ಪಾಕಿಸ್ತಾನದ ವಿಚಾರದಲ್ಲಿ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿತ್ತು ಮತ್ತು ನಾವು ಅದನ್ನು ವ್ಯಾಪಾರದ ವಿಷಯ ಮುಂದಿಟ್ಟುಕೊಂಡು ಪರಿಹರಿಸಿದ್ದೇವೆ. ನೀವು ಶಸ್ತ್ರಾಸ್ತ್ರಗಳನ್ನು ಬಳಸಿದರೆ, ನಾವು ಯಾವುದೇ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನದ ಜೆಟ್​​​ಗಳನ್ನು ಹೊಡೆದುರುಳಿಸಲಾಗಿದ ಎಂಬ ಭಾರತದ ಹೇಳಿಕೆಯನ್ನು ಆ ದೇಶ ತಿರಸ್ಕರಿಸಿದೆ. ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಒಂದು ವಿಮಾನ ಮಾತ್ರ ಸ್ವಲ್ಪ ಹಾನಿಗೊಳಗಾಗಿದೆ ಎಂದು ಹೇಳಿದೆ. ಇದಕ್ಕೆ ವಿರುದ್ಧವಾಗಿ, ರಫೇಲ್ ಸೇರಿದಂತೆ ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದಾಗ್ಯೂ, ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಪಾಕಿಸ್ತಾನದ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಸಂಘರ್ಷದ ಸಮಯದಲ್ಲಿ ಕೆಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದರು. ಆದರೆ ಅವುಗಳ ಸಂಖ್ಯೆಯನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಭಾರತಕ್ಕೇನು ಕಾದಿದೆ? ಒಪ್ಪಂದ ಮಾಡಿಕೊಂಡರೆ ಶೇ 10, ಇಲ್ಲದಿದ್ದರೆ ಶೇ. 27 ಟ್ಯಾರಿಫ್? ಟ್ರಂಪ್ ನಿಲುವೇನಾಗಬಹುದು?

ಸೇನಾ ಸಂಘರ್ಷದ ಆರಂಭಿಕ ಹಂತಗಳಲ್ಲಿ ನಷ್ಟಗಳು ಸಂಭವಿಸಿವೆ ಎಂದು ಜನರಲ್ ಚೌಹಾಣ್ ಹೇಳಿದ್ದು, ಭಾರತೀಯ ಸಶಸ್ತ್ರ ಪಡೆಗಳು ತಮ್ಮ ತಪ್ಪುಗಳನ್ನು ಬಹಳ ಬೇಗನೆ ಸರಿಪಡಿಸಿಕೊಂಡವು ಮತ್ತು ನಂತರ ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿದ್ದವು ಎಂದಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ