AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಸುಂಕದ ಅಸ್ತ್ರ ಪ್ರಯೋಗಿಸಿದ ಅಮೆರಿಕ; ರಷ್ಯಾದ ತೈಲ ಖರೀದಿಸಿದ್ದಕ್ಕೆ ಭಾರತಕ್ಕೆ ಟ್ರಂಪ್ ಬೆದರಿಕೆ

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ವಿಷಯ ಗೊತ್ತಿದ್ದರೂ ಭಾರತ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸಿ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಮೂಲಕ ಲಾಭ ಗಳಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಹಾಗೇ, ಇದೇ ಕಾರಣಕ್ಕೆ ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು "ಗಣನೀಯವಾಗಿ" ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಭಾರತದ ಪಾಲಿಗೆ ಟ್ರಂಪ್ ಮತ್ತೊಮ್ಮೆ ಬಿಸಿ ತುಪ್ಪವಾಗಿದ್ದಾರೆ.

ಮತ್ತೆ ಸುಂಕದ ಅಸ್ತ್ರ ಪ್ರಯೋಗಿಸಿದ ಅಮೆರಿಕ; ರಷ್ಯಾದ ತೈಲ ಖರೀದಿಸಿದ್ದಕ್ಕೆ ಭಾರತಕ್ಕೆ ಟ್ರಂಪ್ ಬೆದರಿಕೆ
Modi With Trump
ಸುಷ್ಮಾ ಚಕ್ರೆ
|

Updated on:Aug 04, 2025 | 10:03 PM

Share

ನವದೆಹಲಿ, ಆಗಸ್ಟ್ 4: ಭಾರತದ ಪಾಲಿಗೆ ಅಮೆರಿಕ (United States) ಒಂದು ರೀತಿಯ ಮಗ್ಗುಲಿನ ಮುಳ್ಳು ಎಂದರೂ ತಪ್ಪಾಗಲಾರದು. ‘ಭಯೋತ್ಪಾದನೆ ವಿರುದ್ಧ ಭಾರತದ ಜೊತೆ ನಿಲ್ಲುತ್ತೇನೆ’ ಎಂದು ಘೋಷಿಸಿ, ಪ್ರಧಾನಿ ನರೇಂದ್ರ ಮೋದಿ ಸಿಕ್ಕಾಗಲೆಲ್ಲ ಅಪ್ಪಿ ಮುದ್ದಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪಹಲ್ಗಾಮ್ ದಾಳಿಯ ನಂತರ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ತೀವ್ರ ಮುಜುಗರ ಉಂಟಾಗುವಂತೆ ಮಾಡಿದ್ದರು. ಈಗಲೂ ಸಮಯ ಸಿಕ್ಕಾಗಲೆಲ್ಲ ‘ನಾನೇ ಭಾರತ-ಪಾಕಿಸ್ತಾನದ ಯುದ್ಧವಾಗದಂತೆ ತಡೆದು ಕದನವಿರಾಮಕ್ಕೆ ಒಪ್ಪಿಸಿದ್ದು’ ಎಂದು ಹೇಳುತ್ತಲೇ ಇರುತ್ತಾರೆ ಟ್ರಂಪ್. ಈ ವಿಷಯದಲ್ಲಿ ಟ್ರಂಪ್ ಅವರಿಗೆ ಕರೆ ಮಾಡಿ ಪ್ರಧಾನಿ ಮೋದಿ ಕದನವಿರಾಮ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಮಾತುಕತೆಯಿಂದ ನಡೆದಿದ್ದು ಸ್ಪಷ್ಟನೆ ನೀಡಿದ್ದರು. ಆದರೂ ಟ್ರಂಪ್ ಹಳೇ ರಾಗ ಹಾಡುವುದನ್ನು ನಿಲ್ಲಿಸಿಲ್ಲ. ಪಾಕಿಸ್ತಾನದ ಜೊತೆ ಆಪ್ತ ಸಂಬಂಧ ಹೊಂದುತ್ತಿರುವ ಟ್ರಂಪ್ ಮೇಲ್ನೋಟಕ್ಕೆ ‘ಮೋದಿ ನನ್ನ ಒಳ್ಳೆ ಸ್ನೇಹಿತ’ ಎಂದು ಹೇಳಿಕೊಂಡು ತಿರುಗುತ್ತಾರೆ. ಭಾರತ ಸರ್ಕಾರದ ಸಚಿವರು ಕೂಡ ಕದನವಿರಾಮದ ಬಗ್ಗೆ ಟ್ರಂಪ್ ಹೇಳಿಕೆಗೆ ಸ್ಪಷ್ಟನೆ ನೀಡಿ ನೀಡಿ ರೋಸಿ ಹೋಗಿದ್ದಾರೆ. ಇದೊಂದು ಕಡೆಯಾದರೆ, ಅಮೆರಿಕ ಸುಂಕದ ವಿಚಾರದಲ್ಲಿಯೂ ಭಾರತಕ್ಕೆ ಬ್ಲಾಕ್​ಮೇಲ್ ಮಾಡುವುದನ್ನು ನಿಲ್ಲಿಸಿಲ್ಲ.

ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬ ವಿಷಯ ಗೊತ್ತಿದ್ದರೂ ಪಾಕಿಸ್ತಾನದ ಜೊತೆ ಬೃಹತ್ ತೈಲ ಒಪ್ಪಂದವನ್ನು ಘೋಷಿಸಿರುವ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳನ್ನು ಹುಡುಕಲಿದ್ದಾರಂತೆ. ಹಾಗೇ, ಮುಂದೊಂದು ದಿನ ಭಾರತಕ್ಕೆ ಕೂಡ ಪಾಕಿಸ್ತಾನ ತೈಲ ಮಾರಾಟ ಮಾಡಬಹುದು ಎಂಬ ವ್ಯಂಗ್ಯ ಹೇಳಿಕೆಯನ್ನು ನೀಡಿದ್ದ ಟ್ರಂಪ್ ಇದೀಗ ಭಾರತ ರಷ್ಯಾದಿಂದ ತೈಲ ಖರೀದಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾಕ್ಕೆ ಅದರ ತೈಲ ಖರೀದಿ ಮಾಡುವ ಮೂಲಕ ಭಾರತ ಪರೋಕ್ಷವಾಗಿ ಹಣ ಸಹಾಯ ಮಾಡುತ್ತಿದೆ ಎಂದು ಆರೋಪಿಸಿರುವ ಟ್ರಂಪ್ ಭಾರತದ ಮೇಲೆ ತೀವ್ರ ಸುಂಕ ವಿಧಿಸುತ್ತೇವೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಹಾಗಾದರೆ, ಪಾಕಿಸ್ತಾನದ ಜೊತೆಗಿನ ತೈಲ ಒಪ್ಪಂದದಿಂದ ಅಮೆರಿಕ ಕೂಡ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಪರೋಕ್ಷವಾಗಿ ಫಂಡಿಂಗ್ ಮಾಡಿದಂತೆ ಆಗುವುದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ಈ ಪ್ರಶ್ನೆಯನ್ನು ಅಮೆರಿಕಕ್ಕೆ ಕೇಳುವ ಧೈರ್ಯವನ್ನು ಭಾರತ ಇನ್ನೂ ಮಾಡಿಲ್ಲ.

ಇದನ್ನೂ ಓದಿ: Trump vs Pak- ಪಾಕಿಸ್ತಾನದಿಂದ ಭಾರತಕ್ಕೆ ತೈಲ ಮಾರುವ ದಿನ ಬರುತ್ತೆ: ಟ್ರಂಪ್ ಹೊಸ ವರಸೆ

ಟ್ರಂಪ್ ಹೇಳಿದ್ದೇನು?:

ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುವುದಲ್ಲದೆ ಭಾರೀ ಲಾಭಕ್ಕೆ ಮುಕ್ತ ಮಾರುಕಟ್ಟೆಗಳಲ್ಲಿ ಅದನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ. “ರಷ್ಯಾದ ಯುದ್ಧ ಯಂತ್ರ”ದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಭಾರತಕ್ಕೆ ಕಾಳಜಿ ಇಲ್ಲ ಎಂದು ಟ್ರಂಪ್ ಟೀಕಿಸಿದ್ದಾರೆ.

ಟ್ರಂಪ್ ಈ ಹಿಂದೆ ಭಾರತದ ಮೇಲೆ 25% ಸುಂಕ ಮತ್ತು ರಷ್ಯಾದ ಕಚ್ಚಾ ತೈಲ ಮತ್ತು ಮಿಲಿಟರಿ ಉಪಕರಣಗಳನ್ನು ಖರೀದಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು. ಆದರೆ, ಅವರು ಸುಂಕವನ್ನು ಎಷ್ಟು ಹೆಚ್ಚಿಸುತ್ತಾರೆ ಎಂಬುದನ್ನು ಖಚಿತಪಡಿಸಿರಲಿಲ್ಲ. “ಭಾರತವು ಬೃಹತ್ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಅಷ್ಟು ಮಾತ್ರವಲ್ಲ, ಖರೀದಿಸಿದ ತೈಲದ ಬಹುಪಾಲು ಭಾಗವನ್ನು ಮುಕ್ತ ಮಾರುಕಟ್ಟೆಯಲ್ಲಿ ದೊಡ್ಡ ಲಾಭಕ್ಕಾಗಿ ಮಾರಾಟ ಮಾಡುತ್ತಿದೆ. ರಷ್ಯಾದ ಯುದ್ಧ ಯಂತ್ರದಿಂದ ಉಕ್ರೇನ್‌ನಲ್ಲಿ ಎಷ್ಟು ಜನರು ಸಾವನ್ನಪ್ಪದ್ದಾರೆ ಎಂಬುದು ಭಾರತಕ್ಕೆ ಮುಖ್ಯವಲ್ಲ. ಈ ಕಾರಣದಿಂದಾಗಿ, ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ” ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಭಾರತವು ರಷ್ಯಾಗೆ ಪರೋಕ್ಷವಾಗಿ ಹಣಕಾಸು ಒದಗಿಸುತ್ತಿದೆ, ನಾವಂತೂ ಒಪ್ಪಲ್ಲ ಎಂದ ಟ್ರಂಪ್ ಆಪ್ತ ಸಹಾಯಕ

ಕಳೆದ ವಾರ, ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದ ಹೆಚ್ಚಿನ ಸುಂಕಗಳು ಮತ್ತು ರಷ್ಯಾದೊಂದಿಗೆ ಮುಂದುವರಿದ ಮಿಲಿಟರಿ ಮತ್ತು ಇಂಧನ ಸಂಬಂಧಗಳನ್ನು ಉಲ್ಲೇಖಿಸಿ ಎಲ್ಲಾ ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕವನ್ನು ವಿಧಿಸುವುದಾಗಿ ಘೋಷಿಸಿದರು. ಆದರೆ, ಭಾರತ ಸರ್ಕಾರವು ಇಲ್ಲಿಯವರೆಗೆ ಯಾವುದೇ ಪ್ರತೀಕಾರದ ಕ್ರಮವನ್ನು ತೆಗೆದುಕೊಂಡಿಲ್ಲ. ಸುಂಕದ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಭಾರತ ಹೇಳಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ. ಭಾರತ ಮತ್ತು ಅಮೆರಿಕ ಕಳೆದ ಕೆಲವು ತಿಂಗಳುಗಳಿಂದ ನ್ಯಾಯಯುತ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಕುರಿತು ಮಾತುಕತೆಗಳಲ್ಲಿ ತೊಡಗಿವೆ ಎಂದು ಮೋದಿ ಸರ್ಕಾರ ತಿಳಿಸಿತ್ತು.

“ಭಾರತ ನಮ್ಮ ಸ್ನೇಹಿತ. ಆದರೆ, ನಾವು ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯವಹಾರ ಮಾಡಿದ್ದೇವೆ. ಏಕೆಂದರೆ ಅವರ ಸುಂಕಗಳು ತುಂಬಾ ಹೆಚ್ಚಾಗಿವೆ, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ” ಎಂದು ಟ್ರಂಪ್ ಕಳೆದ ವಾರ ಹೇಳಿದ್ದರು. “ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಸಹ ಹೊಂದಿದ್ದಾರೆ” ಎಂದು ಟ್ರಂಪ್ ಹೇಳಿದ್ದರು. ಹಾಗೇ, ರಷ್ಯಾ ಜೊತೆಗಿನ ಭಾರತದ ದೀರ್ಘಕಾಲದ ರಕ್ಷಣಾ ಮತ್ತು ಇಂಧನ ಸಂಬಂಧಗಳ ಬಗ್ಗೆ ಟ್ರಂಪ್ ತಮ್ಮ ಟೀಕೆಯನ್ನು ಪುನರುಚ್ಚರಿಸಿದ್ದರು. “ಭಾರತ ಮೊದಲಿನಿಂದಲೂ ತಮ್ಮ ಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸಿದ್ದಾರೆ. ಹಾಗೇ, ಚೀನಾ ಜೊತೆಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಇದು ಒಳ್ಳೆಯದಲ್ಲ, ವಿಶೇಷವಾಗಿ ಉಕ್ರೇನ್‌ನಲ್ಲಿನ ಹತ್ಯೆಯನ್ನು ರಷ್ಯಾ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವುದು ಸರಿಯಲ್ಲ” ಎಂದು ಟ್ರಂಪ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:55 pm, Mon, 4 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ