AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ಗೆ ನೆರವು ನೀಡಿದರೆ ಆರ್ಥಿಕವಾಗಿ ಸರ್ವನಾಶ, ವಿಶ್ವದ ರಾಷ್ಟ್ರಗಳಿಗೆ ಟ್ರಂಪ್ ಖಡಕ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಆರ್ಥಿಕ, ವಾಣಿಜ್ಯ ನೆರವು ನೀಡುವ ರಾಷ್ಟ್ರಗಳಿಗೆ ಕಠಿಣ ಆರ್ಥಿಕ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ. ಇರಾನ್ ಮೇಲಿನ ಮಿಲಿಟರಿ ಮತ್ತು ಆರ್ಥಿಕ ನಿರ್ಬಂಧಗಳು ಅತ್ಯಂತ ಪರಿಣಾಮಕಾರಿ ಎಂದಿರುವ ಟ್ರಂಪ್, ಅಕ್ರಮ ತೈಲ ಸಾಗಣೆ, ಹಣ ವರ್ಗಾವಣೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯದಂತೆ ತಡೆಯಲು ಮಿತ್ರರಾಷ್ಟ್ರಗಳ ಬೆಂಬಲ ಕೋರಿದ್ದಾರೆ. ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಮತ್ತು ಜಾಗತಿಕ ವ್ಯಾಪಾರ ವಲಯದ ಮೇಲೆ ನಿರ್ಬಂಧಗಳ ಪ್ರಭಾವವನ್ನು ವಿವರಿಸಲಾಗಿದೆ.

ಇರಾನ್‌ಗೆ ನೆರವು ನೀಡಿದರೆ ಆರ್ಥಿಕವಾಗಿ ಸರ್ವನಾಶ, ವಿಶ್ವದ ರಾಷ್ಟ್ರಗಳಿಗೆ ಟ್ರಂಪ್ ಖಡಕ್ ಎಚ್ಚರಿಕೆ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Aug 20, 2026 | 7:22 AM

Share

ವಾಷಿಂಗ್ಟನ್,ಆಗಸ್ಟ್​ 20: ಇರಾನ್ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಅಥವಾ ಸರಕು ಸಾಗಣೆಯ ನೆರವು ನೀಡುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೀವ್ರ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ನೆರವಾಗುವ ಯಾವುದೇ ದೇಶವಾದರೂ “ಅಗಾಧ ಆರ್ಥಿಕ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಅವರು ಗುಡುಗಿದ್ದಾರೆ. ಇರಾನ್ ಮೇಲಿನ ಮಿಲಿಟರಿ ಮತ್ತು ಆರ್ಥಿಕ ನಿರ್ಬಂಧಗಳು ಇತಿಹಾಸದಲ್ಲೇ ಅತ್ಯಂತ ಪರಿಣಾಮಕಾರಿ ಕಾರ್ಯಾಚರಣೆಯಾಗಿದೆ ಎಂದಿರುವ ಟ್ರಂಪ್, ಇರಾನ್ ಮಿಲಿಟರಿ ಸಂಪೂರ್ಣವಾಗಿ ದುರ್ಬಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ಕಳ್ಳಸಾಗಣೆ ಹಾಗೂ ಆರ್ಥಿಕ ನೆರವಿಗೆ ಬ್ರೇಕ್

ಇರಾನ್‌ನೊಂದಿಗೆ ನಡೆಯುತ್ತಿರುವ ಅಕ್ರಮ ತೈಲ ಸಾಗಣೆ, ಹಣ ವರ್ಗಾವಣೆ , ವಿನಿಮಯ ಮಾರ್ಗಗಳು, ನಕಲಿ ಕಂಪನಿಗಳು ಹಾಗೂ ಹಡಗು ನೋಂದಣಿಗಳನ್ನು ಜಗತ್ತಿನ ಎಲ್ಲಾ ರಾಷ್ಟ್ರಗಳು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಿತ್ರರಾಷ್ಟ್ರಗಳ ಬೆಂಬಲಕ್ಕೆ ಮನವಿ: ಇರಾನ್ ಮೂಲದ ಭಯೋತ್ಪಾದನೆಯನ್ನು ನಿಯಂತ್ರಿಸಲು ಹಾಗೂ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಪಡೆಯದಂತೆ ತಡೆಯಲು ಅಮೆರಿಕದ ಎಲ್ಲಾ ಮಿತ್ರರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

ನೌಕಾ ದಿಗ್ಬಂಧನ ಮತ್ತು ಹಾರ್ಮುಜ್ ಜಲಸಂಧಿ ಬಿಕ್ಕಟ್ಟು

ಇರಾನ್ ಮೇಲೆ ಅಮೆರಿಕ ಹೇರಿರುವ ನೌಕಾ ದಿಗ್ಬಂಧನ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ದರಗಳು ನಿಯಂತ್ರಣದಲ್ಲೇ ಇವೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.

ಹಾರ್ಮುಜ್ ಜಲಸಂಧಿಯ ಷರತ್ತು: ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಮುಕ್ತವಾಗಿ ತೆರೆದರೆ, ಅದರ ಮೇಲಿನ ಕೆಲವು ಕಠಿಣ ಕ್ರಮಗಳನ್ನು ಹಿಂಪಡೆಯುವ ಬಗ್ಗೆ ಅಮೆರಿಕ ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಮತ್ತಷ್ಟು ಓದಿ: ಇರಾನ್-ಅಮೆರಿಕ ನೀ ಕೊಡೆ ನಾ ಬಿಡೆ ಜಗ್ಗಾಟ; ಹಾರ್ಮುಜ್ ಜಲಸಂಧಿ ಅಮೆರಿಕದ ಭೂಭಾಗ ಎಂದು ಟ್ರಂಪ್ ಘೋಷಣೆ

ದೀರ್ಘಾವಧಿ ಸಂಘರ್ಷಕ್ಕೆ ಇರಾನ್ ಸಿದ್ಧತೆ: ಅಮೆರಿಕದ ಕಠಿಣ ದಿಗ್ಬಂಧನಗಳ ನಡುವೆಯೂ ಇರಾನ್ ಮಣಿಯಲು ನಿರಾಕರಿಸಿದ್ದು, 2028 ರವರೆಗೆ ಅಮೆರಿಕದೊಂದಿಗೆ ದೀರ್ಘಾವಧಿಯ ಆರ್ಥಿಕ ಹಾಗೂ ಸೇನಾ ಸಂಘರ್ಷವನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿದೆ.

ಜಾಗತಿಕ ವ್ಯಾಪಾರ ವಲಯದ ಮೇಲೆ ಪ್ರಭಾವ: ಯುಎಸ್‌ ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಇರಾನ್‌ನಿಂದ ತೈಲ ಮತ್ತು ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಚೀನಾ ಸೇರಿದಂತೆ ಹಲವು ಏಷ್ಯನ್ ಮತ್ತು ಯುರೋಪಿಯನ್ ವ್ಯಾಪಾರ ಸಂಸ್ಥೆಗಳು ತೀವ್ರ ಕಟ್ಟೆಚ್ಚರ ವಹಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?