ಪಾಕಿಸ್ತಾನ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಕದನವಿರಾಮ ಒಪ್ಪಂದ ಕೊನೆಗೊಳಿಸಿರುವುದಾಗಿ ಟಿಟಿಪಿ ಘೋಷಣೆ
ಪಾಕಿಸ್ತಾನ ವಾಯುವ್ಯ ಭಾಗದ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನ, ಡೆರಾ ಇಸ್ಮಾಯಿಲ್ ಖಾನ್ ಮತ್ತು ಟ್ಯಾಂಕ್ ಜಿಲ್ಲೆಗಳಲ್ಲಿ ಆ ದೇಶದ ಸೇನೆ ಸೆಪ್ಟೆಂಬರ್ 22 ರಿಂದ ಟಿಟಿಪಿಯೊಂದಿಗೆ ಕಾದಾಟ ನಡೆಸುತ್ತಲೇ ಇದೆ. ಮಾತುಕತೆ ಜಾರಿಯಲ್ಲಿದ್ದರೂ ಎರಡೂ ಪಕ್ಷಗಳು ಕದನ ವಿರಾಮ ಒಪ್ಪಂದ ಕಾಯ್ದಕೊಂಡಿರುವ ಬಗ್ಗೆ ಹೇಳಿಕೊಂಡಿವೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಅಂತಲೂ ಗುರುತಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆವೂರಿರುವ ದಿ ಮೂವ್ಮೆಂಟ್ ಆಫ್ ತಾಲಿಬಾನ್ (The Movement of Taliban) ಹೆಸರಿನ ಸಂಘಟನೆಯು ಆ ದೇಶದೊಂದಿಗೆ ಕಳೆದ ಆರು ತಿಂಗಳಿಂದ ಮಾಡಿಕೊಂಡಿದ್ದ ಕದನ ವಿರಾಮವನ್ನು ಕೊನೆಗೊಳಿಸಿದೆ. ಟಿಟಿಪಿಯ ಅಧಿಕೃತ ವೆಬ್ ಸೈಟ್ ಉಮರ್ ಮಿಡಿಯಾ ಬಿಡುಗಡೆ ಮಾಡಿರುವ ಪ್ರಕಟಣೆಯೊಂದರ ಪ್ರಕಾರ ತಾಲಿಬಾನ್ ಮೂವ್ಮೆಂಟ್ ನ ‘ರಕ್ಷಣಾ ಸಚಿವ’ ಮುಫ್ತಿ ಮುಜಾಹಿಮ್ (Mufti Mujahim) ನವೆಂಬರ್ 28ರಂದು ಕದನ ವಿರಾಮ ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದ್ದಾರೆ. ಸಂಘಟನೆ ವಿರುದ್ಧ ಪಾಕಿಸ್ತಾನ ಶುರಮಾಡಿರುವ ಮಿಲಿಟರಿ ಕಾರ್ಯಾಚರಣೆಗೆ (military operations) ಪ್ರತಿಯಾಗಿ ದೇಶದ ಎಲ್ಲ ಭಾಗಗಳಲ್ಲಿ ದಾಳಿಗಳನ್ನು ನಡೆಸುವಂತೆ ಟಿಟಿಪಿ ಪಡೆಗಳಿಗೆ ಮುಜಾಹಿಮ್ ‘ಆದೇಶ’ ನೀಡಿದ್ದಾರೆ.
ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ತಮ್ಮ ಸಂಘಟನೆಯ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿರುವುದರಿಂದ ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸದೆ ವಿಧಿಯಿಲ್ಲ ಎಂದು ಟಿಟಿಪಿ ಹೇಳಿದೆ. ‘ಇನ್ನು ಮುಂದೆ ದೇಶದ ಎಲ್ಲ ಭಾಗಗಳಲ್ಲಿ ನಾವು ದಾಳಿಗಳನ್ನು ನಡೆಸಲಿದ್ದೇವೆ,’ ಎಂದು ಟಿಟಿಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಟಿಟಿಪಿ ಸಂಘಟನೆ 2007ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಪಾಕಿಸ್ತಾನದ ನಾಗರಿಕರು, ಸರ್ಕಾರೀ ಅಧಿಕಾರಿಗಳು, ಪೊಲೀಸ್ ಮತ್ತು ಯೋಧರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. ಪಾಕಿಸ್ತಾನದ ವಾಯುವ್ಯ ಭಾಗದ ಅಧಿಕ ಪ್ರಾಂತ್ಯಗಳಲ್ಲಿ 2007 ರಿಂದ 2013 ರವರೆಗೆ ತಾಲಿಬಾನ್ ಅಧಿಕಾರ ನಡೆಸುತ್ತಿದ್ದ ಅವಧಿಯಲ್ಲಿ ಟಿಟಿಪಿ ನಡೆಸಿದ ದಾಳಿಗಳಿಗೆ ಸಾವಿರಾರು ಪಾಕಿಸ್ತಾನಿಗಳು ಬಲಿಯಾಗಿದ್ದಾರೆ. ಪಾಕಿಸ್ತಾನ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ಟಿಟಿಪಿ ಉಲ್ಲಂಘಿಸಿ ಕೆಲ ಪ್ರಾಂತ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಪಾಕಿಸ್ತಾನ ವಾಯುವ್ಯ ಭಾಗದ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನ, ಡೆರಾ ಇಸ್ಮಾಯಿಲ್ ಖಾನ್ ಮತ್ತು ಟ್ಯಾಂಕ್ ಜಿಲ್ಲೆಗಳಲ್ಲಿ ಆ ದೇಶದ ಸೇನೆ ಸೆಪ್ಟೆಂಬರ್ 22 ರಿಂದ ಟಿಟಿಪಿಯೊಂದಿಗೆ ಕಾದಾಟ ನಡೆಸುತ್ತಲೇ ಇದೆ. ಮಾತುಕತೆ ಜಾರಿಯಲ್ಲಿದ್ದರೂ ಎರಡೂ ಪಕ್ಷಗಳು ಕದನ ವಿರಾಮ ಒಪ್ಪಂದ ಕಾಯ್ದಕೊಂಡಿರುವ ಬಗ್ಗೆ ಹೇಳಿಕೊಂಡಿವೆ.
ಅಫ್ಘಾನಿಸ್ತಾನದ ತಾಲಿಬಾನ್ ಟಿಟಿಪಿ ನೆರವಿನೊಂದಿಗೆ ಅಲ್ಲಿನ ಸರ್ಕಾರವನ್ನು ಪತನಗೊಳಿಸಿ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡ ಸುಮಾರು ಒಂದು ವರ್ಷದ ನಂತರ ಅಂದರೆ ಮೇ 2022 ರಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಟಿಟಿಪಿ ಮಧ್ಯೆ ಒಂದು ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಅದರ ಪ್ರಬಲ ಉಪಸಂಸ್ಥೆಯಾಗಿರುವ ಹಕ್ಕಾನಿ ನೆಟ್ ವರ್ಕ್ ಈ ಕದನ ವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದವು.
ಟಿಟಿಪಿ ಪ್ರಾಬಲ್ಯದ ಪ್ರಾಂತ್ಯಗಳಲ್ಲಿ ಅಫ್ಘಾನ ತಾಲಿಬಾನ್ ಆಶ್ರಯ ಪಡೆದುಕೊಂಡಿದ್ದರೆ, ಅಫಘಾನಿಸ್ತಾನದಲ್ಲಿ ಆ ದೇಶದ ಸೇನೆ, ಯುಎಸ್ ಮತ್ತು ನ್ಯಾಟೊ ಪಡೆಗಳ ವಿರುದ್ಧ ಹೋರಾಡಲು ಅಫ್ಘನ್ ತಾಲಿಬಾನ್ ಗೆ ಟಿಟಿಪಿ ತನ್ನ ಸೇನಾಬಲವನ್ನು ಒದಗಿಸಿತ್ತು. ಟಿಟಿಪಿಯ ಪ್ರಸ್ತುತ ಎಮೀರ್ ಮುಫ್ತಿ ನೂರ್ ವಲಿ ಮೆಹ್ಸೂದ್ ಮತ್ತು ಅವರಿಗಿಂತ ಮುಂಚಿನ ನಾಯಕರು ಅಫ್ಘನ್ ತಾಲಿಬಾನ್ ಅಗ್ರ ನಾಯಕನೊಂದಿಗೆ ಸ್ನೇಹ ಹೊಂದಿರುವುದನ್ನು ಹೇಳಿಕೊಂಡಿದ್ದಾರೆ.
ಅಫಘಾನಿಸ್ತಾನದಲ್ಲಿ ತನ್ನ ಸಹಯೋಗಿ ತಾಲಿಬಾನಿಗಳ ಹಾಗೆ ಪಾಕಿಸ್ತಾನದಲ್ಲೂ ಇಸ್ಲಾಮಿಕ್ ರಾಷ್ಟ್ರವನ್ನ ಸ್ಥಾಪಿಸುವ ಏಕೈಕ ಉದ್ದೇಶ ಹೊಂದಿರುವ ಟಿಟಿಪಿ ಸಂಘಟನೆಯು ನಿರ್ದಯತೆಯಿಂದ ಪಾಕಿಸ್ತಾನ ಮತ್ತು ಅದರ ನಾಗರಿಕರ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಪಾಕಿಸ್ತಾನದ ಸೇನೆ ಟಿಟಿಪಿ ಮೇಲೆ ಪೂರ್ಣಪ್ರಮಾಣದ ಆಕ್ರಮಣ ಆರಂಭಿಸಿದಾಗ ಅದರ ಸದಸ್ಯರು ಆಶ್ರಯಕ್ಕಾಗಿ ಅಫ್ಘಾನ್ ತಾಲಿಬಾನ್ ನ ಮೊರೆ ಹೋಗುತ್ತಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Wed, 30 November 22