2024ರಲ್ಲಿ ಚಂದ್ರನತ್ತ ಹಾರಲಿದೆ ಅರಬ್ ರಾಷ್ಟ್ರದ ಬಾಹ್ಯಾಕಾಶ ನೌಕೆ

ದುಬೈ: 2024ರಲ್ಲಿ ಮಾನವರಹಿತ ದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನ ನೆಲದಲ್ಲಿಳಿಸಲು UAE (ಯುನೈಟೆಡ್ ಅರಬ್ ಎಮಿರೇಟ್ಸ್) ಮುಂದಾಗಿದೆ. ಈ ಬಗ್ಗೆ ಖುದ್ದು ದುಬೈ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಿಳಿಸಿದ್ದಾರೆ. ತೈಲ ಸಮೃದ್ಧ ರಾಷ್ಟ್ರವು ಬಾಹ್ಯಾಕಾಶದಲ್ಲಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಈ ಯೋಜನೆ ಸಫಲವಾದ್ರೆ ಚಂದ್ರಯಾನ ಮಾಡಿದ ನಾಲ್ಕನೇ ದೇಶವಾಗಲಿದೆ. ಯುಎಇ ಈಗಾಗಲೇ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದು, ಈಗ ಚಂದ್ರಯಾನಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಂದ್ರ ನೆಡೆಗೆ ಕಳುಹಿಸುವ ರೋವರ್​ಗೆ ತಮ್ಮ […]

2024ರಲ್ಲಿ ಚಂದ್ರನತ್ತ ಹಾರಲಿದೆ ಅರಬ್ ರಾಷ್ಟ್ರದ ಬಾಹ್ಯಾಕಾಶ ನೌಕೆ
Ayesha Banu

| Edited By: sadhu srinath

Sep 30, 2020 | 4:30 PM

ದುಬೈ: 2024ರಲ್ಲಿ ಮಾನವರಹಿತ ದೇಶಿ ನಿರ್ಮಿತ ಬಾಹ್ಯಾಕಾಶ ನೌಕೆಯನ್ನು ಚಂದ್ರನ ನೆಲದಲ್ಲಿಳಿಸಲು UAE (ಯುನೈಟೆಡ್ ಅರಬ್ ಎಮಿರೇಟ್ಸ್) ಮುಂದಾಗಿದೆ. ಈ ಬಗ್ಗೆ ಖುದ್ದು ದುಬೈ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಿಳಿಸಿದ್ದಾರೆ.

ತೈಲ ಸಮೃದ್ಧ ರಾಷ್ಟ್ರವು ಬಾಹ್ಯಾಕಾಶದಲ್ಲಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಈ ಯೋಜನೆ ಸಫಲವಾದ್ರೆ ಚಂದ್ರಯಾನ ಮಾಡಿದ ನಾಲ್ಕನೇ ದೇಶವಾಗಲಿದೆ. ಯುಎಇ ಈಗಾಗಲೇ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದು, ಈಗ ಚಂದ್ರಯಾನಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಂದ್ರ ನೆಡೆಗೆ ಕಳುಹಿಸುವ ರೋವರ್​ಗೆ ತಮ್ಮ ದಿವಂಗತ ತಂದೆಯ ಹೆಸರಾದ ರಶೀದ್ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಶೇಖ್ ಮೊಹಮ್ಮದ್ ತಿಳಿಸಿದ್ದಾರೆ.

ಬಾಹ್ಯಾಕಾಶಕ್ಕೆ ನೌಕೆ ಕಳಿಸಿದ ಪ್ರಥಮ ಅರಬ್ ರಾಷ್ಟ್ರಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುಎಇ, ಮಂಗಳ ಗ್ರಹದ ಬಳಿಕ ಇದೀಗ ಚಂದ್ರನೆಡೆಗೆ ನೌಕೆ ಕಳುಹಿಸುತ್ತಿರುವುದು ಕುತೂಹಲ ತಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada