Indian Americans: ಭಾರತೀಯರನ್ನು ಹಾಡಿಹೊಗಳಿದ ಅಮೆರಿಕ ಸಂಸದ; ಕಾರಣ ಇಲ್ಲಿದೆ ನೋಡಿ

ಅವರು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಅವರು ನಿಯಮಗಳನ್ನು ಪಾಲಿಸುತ್ತಾರೆ ಎಂದು ಅಮೆರಿಕದಲ್ಲಿರುವ ಭಾರತೀಯರನ್ನು ಅಲ್ಲಿನ ಸಂಸದ ರಿಚ್ ಮೆಕ್​ಕಾರ್ಮಿಕ್ ಶ್ಲಾಘಿಸಿದ್ದಾರೆ.

Indian Americans: ಭಾರತೀಯರನ್ನು ಹಾಡಿಹೊಗಳಿದ ಅಮೆರಿಕ ಸಂಸದ; ಕಾರಣ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರImage Credit source: Reuters
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Jan 14, 2023 | 1:15 PM

ವಾಷಿಂಗ್ಟನ್: ‘ಅಮೆರಿಕದಲ್ಲಿರುವ ಭಾರತೀಯರು (Indian Americans) ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್​ಕಾರ್ಮಿಕ್ (Rich McCormick). ಅಮೆರಿಕ ಸಂಸತ್​ನಲ್ಲಿ ಮಾತನಾಡಿದ ಮೆಕ್​ಕಾರ್ಮಿಕ್, ಅವರು (ಭಾರತೀಯರು) ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ 1ರಷ್ಟು ಇದ್ದಾರೆ. ಆದರೂ ಶೇ 6ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ ಉತ್ಪಾದಕರು. ಅವರು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಅವರು ನಿಯಮಗಳನ್ನು ಪಾಲಿಸುತ್ತಾರೆ’ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಮೆಕ್​ಕಾರ್ಮಿಕ್, ರಿಪಬ್ಲಿಕನ್ ಪಕ್ಷದ ಸಂಸದರಾಗಿದ್ದು, ಜಾರ್ಜಿಯಾ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. 2022ರ ನವೆಂಬರ್​​ 8ರಂದು ನಡೆದಿದ್ದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಾಬ್ ಕ್ರಿಶ್ಚನ್ ವಿರುದ್ಧ ಜಯ ಗಳಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

‘ಭಾರತೀಯ ಅಮೆರಿಕನ್ನರಲ್ಲಿ ಇತರರಲ್ಲಿ ಕಂಡುಬರುವಂಥ ಸಮಸ್ಯೆಗಳು ಕಾಣಿಸುವುದಿಲ್ಲ. ಸಾಮಾನ್ಯವಾಗಿ ತುರ್ತು ಚಿಕಿತ್ಸೆ ಕೊಠಡಿಗೆ ಬರುವವರಲ್ಲಿ ಕಾಣಿಸುವಂಥ ಆತಂಕ, ಖಿನ್ನತೆಯಂಥ ಸಮಸ್ಯೆಗಳು ಅವರಲ್ಲಿ ಇರುವುದಿಲ್ಲ. ಯಾಕೆಂದರೆ ಅವರು ಅತ್ಯುತ್ತಮ ಉತ್ಪಾದಕತೆ ಹೊಂದಿರುವ ಕುಟುಂಬಗಳ ಹಿನ್ನೆಲೆಯುಳ್ಳವರಾಗಿರುತ್ತಾರೆ. ಅತ್ಯುತ್ತಮವಾಗಿ ಅಮೆರಿಕದ ನಾಗರಿಕರನ್ನು ಪ್ರತಿನಿಧಿಸುತ್ತಾರೆ’ ಎಂದು ಮೆಕ್​ಕಾರ್ಮಿಕ್ ಹೇಳಿದ್ದಾರೆ.

ಭಾರತೀಯರಿಗೆ ವೀಸಾ; ಪ್ರಕ್ರಿಯೆ ಸುಗಮಗೊಳಿಸುವ ಸುಳಿವು

ಜಾರ್ಜಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಮೂಲದವರಿದ್ದಾರೆ. ಈ ಸಂದರ್ಭದಲ್ಲಿ ನಾನು ನನ್ನ ಕ್ಷೇತ್ರದ ಜನರನ್ನು, ವಿಶೇಷವಾಗಿ ಭಾರತದಿಂದ ವಲಸೆ ಬಂದವರನ್ನು ಶ್ಲಾಘಿಸುತ್ತೇನೆ. ನನ್ನ ಕ್ಷೇತ್ರದಲ್ಲಿ ಭಾರತದಿಂದ ವಲಸೆ ಬಂದ 1 ಲಕ್ಷ ಜನ ಇದ್ದಾರೆ ಎಂದು ಅವರು ಹೇಳಿದ್ದಾರೆ.

‘ನನ್ನ ಕ್ಷೇತ್ರದ ಪ್ರತಿ ಐವರು ವೈದ್ಯರಲ್ಲಿ ಒಬ್ಬರು ಭಾರತೀಯರು. ಅವರು ಅಮೆರಿಕದ ನಾಗರಿಕರನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತಿದ್ದಾರೆ. ಕಾನೂನನ್ನು ಪಾಲಿಸಲು ಮತ್ತು ತೆರಿಗೆಯನ್ನು ಪಾವತಿಸಲು ಮತ್ತು ಸಮಾಜದಲ್ಲಿ ಅತ್ಯಂತ ಸೃಜನಶೀಲ ಮತ್ತು ಉತ್ಪಾದಕರಾಗಿರಲು ಇಲ್ಲಿಗೆ ಬರುವವರಿಗೆ ನಾವು ವಲಸೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತೇವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಭಾರತೀಯರಿಗೆ ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವ ಸುಳಿವು ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Sat, 14 January 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ