US Drone Strike: ಸಿರಿಯಾದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಐಸಿಸ್ ಉಗ್ರ ಮುಹಾಜಿರ್ ಹತ್ಯೆ: ಯುಎಸ್
ಪೂರ್ವ ಸಿರಿಯಾದಲ್ಲಿ ಯುಎಸ್ ಮಿಲಿಟರಿ ಡ್ರೋನ್ ದಾಳಿಯಲ್ಲಿ ಐಸಿಸ್(ISIS) ಉಗ್ರ ಅಲ್ ಮುಹಾಜಿರ್ನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪೂರ್ವ ಸಿರಿಯಾದಲ್ಲಿ ಯುಎಸ್ ಮಿಲಿಟರಿ ಡ್ರೋನ್ ದಾಳಿಯಲ್ಲಿ ಐಸಿಸ್(ISIS) ಉಗ್ರ ಅಲ್ ಮುಹಾಜಿರ್ನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜುಲೈ 7 ರಂದು ಡ್ರೋನ್ ದಾಳಿ ನಡೆಸಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಭಾನುವಾರ ತಿಳಿಸಿದೆ. ಈ ದಾಳಿಯಲ್ಲಿ ಬೇರೆ ಯಾವುದೇ ನಾಗರಿಕರು ಗಾಯಗೊಂಡಿರುವ ಕುರಿತು ಮಾಹಿತಿ ಇಲ್ಲ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅಮೆರಿಕವು ಐಸಿಸ್ ವಿರುದ್ಧ ದಾಳಿ ಹಾಗೂ ಕಾರ್ಯಾಚರಣೆಯನ್ನು ಹೆಚ್ಚಿಸಿವೆ. ಅಮೆರಿಕ ಕಳೆದ ಒಂದು ವರ್ಷದಿಂದ ಸಿರಿಯಾದಲ್ಲಿ ಶಂಕಿತ ಐಸಿಸ್ ಉಗ್ರರ ವಿರುದ್ಧ ದಾಳಿ ಡನೆಸುತ್ತಿದೆ. ಹಲವು ನಾಯಕರನ್ನು ಕೂಡ ಬಂಧಿಸಿದೆ, ಅವರಲ್ಲಿ ಕೆಲವರು 2019ರಲ್ಲಿ ಸಿರಿಯಾದ ಪ್ರದೇಶವನ್ನು ತೊರೆದು ಟರ್ಕಿ ಬೆಂಬಲಿತ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದಿದ್ದು ಅದಕ್ಕೂ ಮುನ್ನ ರಷ್ಯಾದ ವಿಮಾನದಿಂದ ಹಸ್ತಕ್ಷೇಪವನ್ನು ಎದುರಿಸಬೇಕಾಯಿತು ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮತ್ತಷ್ಟು ಮಾಹಿತಿ ನೀಡಿದೆ. ಅದೇ ಸಮಯದಲ್ಲಿ, ಗಾರ್ಡಿಯನ್ ವರದಿಯ ಪ್ರಕಾರ, ಎರಡು ಗಂಟೆಗಳ ಎನ್‌ಕೌಂಟರ್‌ನಲ್ಲಿ ರಷ್ಯಾದ ವಿಮಾನಗಳಿಂದ ಕಿರುಕುಳಕ್ಕೊಳಗಾದ ಅದೇ MQ-9 ನಿಂದ ದಾಳಿಯನ್ನು ನಡೆಸಲಾಯಿತು ಎಂದು US ಸೆಂಟ್ರಲ್ ಕಮಾಂಡ್‌ನ ಹೇಳಿಕೆ ತಿಳಿಸಿದೆ.
ಮತ್ತಷ್ಟು ಓದಿ: ಕರ್ನಾಟಕದಲ್ಲಿ ರೋಬೋಟ್‌ಗಳ ಮೂಲಕ ವಿಧ್ವಂಸಕ ಕೃತ್ಯಕ್ಕೆ ಐಸಿಸ್ ಸಂಚು: ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಬುಧವಾರ ರಷ್ಯಾದ ವಿಮಾನಗಳು ಮತ್ತು MQ-9 ಡ್ರೋನ್‌ಗಳ ನಡುವೆ ಎರಡು ಗಂಟೆಗಳ ಮುಖಾಮುಖಿಯಾಗಿದೆ. ಈ ಸಮಯದಲ್ಲಿ, MQ-9 ರೀಪರ್ಸ್ ಡ್ರೋನ್ ರಷ್ಯಾದ ವಿಮಾನಗಳ ಮುಂದೆ ತಪ್ಪಿಸಿಕೊಳ್ಳಲು ಕಲಾತ್ಮಕ ಪ್ರದರ್ಶನವನ್ನು ಮಾಡಿತು. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಯುಎಸ್ ಏರ್ ಫೋರ್ಸ್ ಸೆಂಟ್ರಲ್ ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ರಷ್ಯಾದ ವಾಯುಪಡೆಯ ಕ್ರಮಗಳನ್ನು ಖಂಡಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ