ದೇಶಗಳನ್ನು ಬೆದರಿಸುತ್ತಾ, ಯುದ್ಧ ನಿಲ್ಲಿಸಿದ ಬಿಟ್ಟಿ ಕ್ರೆಡಿಟ್ ಪಡೆದು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಸೆ ಪಟ್ಟಿದ್ದ ಟ್ರಂಪ್ಗೆ ನಿರಾಸೆ
Nobel Peace Prize 2025: ನೊಬೆಲ್ ಶಾಂತಿ ಪುರಸ್ಕಾರ ಪಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೇ ಸರ್ಕಸ್ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಬಾರಿಯ ಪುರಸ್ಕಾರವೂ ಕೈತಪ್ಪಿದೆ. ದೇಶಗಳನ್ನು ಬೆದರಿಸುತ್ತಾ, ಮತ್ತೊಂದೆಡೆ ಯುದ್ಧ ನಿಲ್ಲಿಸಿದ ಬಿಟ್ಟಿ ಕ್ರೆಡಿಟ್ ಪಡೆಯುತ್ತಾ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕೆಂಬ ಟ್ರಂಪ್ ಆಸೆಗೆ ತಣ್ಣೀರೆರೆಚಿದಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಯುದ್ಧಗಳನ್ನು ಕೊನೆಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ನೊಬೆಲ್ ಶಾಂತಿ ಪುರಸ್ಕಾರವನ್ನು ಯಾರಿಗೆ ಕೊಡುತ್ತಾರೋ ಗೊತ್ತಿಲ್ಲ.

ವಾಷಿಂಗ್ಟನ್, ಅಕ್ಟೋಬರ್ 10: ಇಂದು ನೊಬೆಲ್ ಶಾಂತಿ ಪುರಸ್ಕಾರ(Nobel Peace Prize) ಘೋಷಣೆಯಾಗಿದೆ. ಟ್ರಂಪ್ ಕನಸುಕಂಡಂತೆ ಈ ಪುರಸ್ಕಾರ ಟ್ರಂಪ್ ಪಾಲಾಗಲಿಲ್ಲ. ದೇಶಗಳನ್ನು ಬೆದರಿಸುತ್ತಾ, ಮತ್ತೊಂದೆಡೆ ಯುದ್ಧ ನಿಲ್ಲಿಸಿದ ಬಿಟ್ಟಿ ಕ್ರೆಡಿಟ್ ಪಡೆಯುತ್ತಾ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕೆಂಬ ಟ್ರಂಪ್ ಆಸೆಗೆ ತಣ್ಣೀರೆರೆಚಿದಂತಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಯುದ್ಧಗಳನ್ನು ಕೊನೆಗೊಳಿಸಿರುವುದಾಗಿ ಹೇಳಿಕೊಂಡಿದ್ದರು. ನೊಬೆಲ್ ಶಾಂತಿ ಪುರಸ್ಕಾರವನ್ನು ಯಾರಿಗೆ ಕೊಡುತ್ತಾರೋ ಗೊತ್ತಿಲ್ಲ. ಮಾರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ ಸಿಕ್ಕಿದೆ.
ನಾನು ಏಳು ಯುದ್ಧಗಳನ್ನು ಪರಿಹರಿಸಿದ್ದೇನೆ, ಎಂಟನೆಯದನ್ನು ಪರಿಹರಿಸುವ ಹತ್ತಿರದಲ್ಲಿದ್ದೇವೆ. ಇತಿಹಾಸದಲ್ಲಿ ಯಾರೂ ಇಷ್ಟೊಂದು ಪ್ರಕರಣಗಳನ್ನು ಪರಿಹರಿಸಿಲ್ಲ ಎಂದು ಹೇಳಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಸ್ವಯಂ ನಾಮನಿರ್ದೇಶನ ಮಾಡುವಂತಿಲ್ಲ.
ಈ ಬಾರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪಾಕಿಸ್ತಾನ ಸರ್ಕಾರ ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಿವೆ. ಹಾಗೆ ನೋಡಿದರೆ, 2018ರಿಂದ ಹಲವು ಬಾರಿ ಟ್ರಂಪ್ ಹೆಸರನ್ನು ನೊಬೆಲ್ ಪ್ರಶಸ್ತಿಗಾಗಿ ಅಮೆರಿಕದಿಂದ ಮತ್ತು ಹೊರ ದೇಶಗಳಿಂದ ನಾಮನಿರ್ದೇಶನ ಮಾಡಲಾಗಿದೆ.
ಮತ್ತಷ್ಟು ಓದಿ: ನೊಬೆಲ್ ಶಾಂತಿ ಪುರಸ್ಕಾರದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ಟ್ರಂಪ್ ನಡೆಸಿರುವ ಕೆಲವು ಗಮನಾರ್ಹ ವಿದೇಶಾಂಗ ನೀತಿ ಮಧ್ಯಸ್ಥಿಕೆಗಳನ್ನೇ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಪ್ರಮುಖ ಅಂಶವಾಗಿ ಪ್ರಸ್ತಾಪಿಸಲಾಗಿದೆ. ಆದರೆ, ಇವೆಲ್ಲವೂ ವೈಯಕ್ತಿಕ ಮಟ್ಟದ ಸಾಧನೆಗಳು.
ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿಯು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪುರಸ್ಕರಿಸುವಾಗ ಪ್ರಮುಖವಾಗಿ ವ್ಯಕ್ತಿ ಅಥವಾ ಸಂಸ್ಥೆಗಳ ಪ್ರಯತ್ನದಿಂದ ಶಾಂತಿಯು ಎಷ್ಟು ದೀರ್ಘಾವಧಿವರೆಗೆ ನೆಲೆಸಿದೆ ಮತ್ತು ಅಂತಾರಾಷ್ಟ್ರೀಯ ಭ್ರಾತೃತ್ವಕ್ಕೆ ಇದರ ಕೊಡುಗೆ ಏನು ಎನ್ನುವ ಅಂಶವನ್ನೇ ಮುಖ್ಯವಾಗಿ ಪರಿಶೀಲಿಸುತ್ತದೆ ಎನ್ನುವುದು ವಿಶ್ಲೇಷಕರ ವಾದ. 2009ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪ್ರಶಸ್ತಿ ನೀಡಿದ್ದಕ್ಕಾಗಿ ನೊಬೆಲ್ ಸಮಿತಿಯು ತೀವ್ರ ಟೀಕೆ ಎದುರಿಸಿತ್ತು.
ನೊಬೆಲ್ ಪ್ರಶಸ್ತಿ ಎಂದರೇನು? ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಆದರೆ ಅವರ ಈ ಆವಿಷ್ಕಾರವು ಅವರಿಗೆ ಟೀಕೆಯಷ್ಟೇ ಖ್ಯಾತಿಯನ್ನೂ ತಂದುಕೊಟ್ಟಿತು. ನಂತರ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆಯನ್ನು ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು. ಈ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.
ವಿಜ್ಞಾನ ಪ್ರಶಸ್ತಿಗಳನ್ನು ನೀಡುವ ತೀರ್ಪುಗಾರರು ಅತ್ಯಂತ ಸೂಕ್ಷ್ಮವಾಗಿರುತ್ತಾರೆ. ಒಂದು ಆವಿಷ್ಕಾರವು ಮಾನವ ಜೀವನಕ್ಕೆ ಶಾಶ್ವತ ಪ್ರಯೋಜನಗಳನ್ನು ಹೊಂದಿದೆ ಎಂದು ಸಾಬೀತಾಗದ ಹೊರತು ಅದನ್ನು ಗುರುತಿಸಲಾಗುವುದಿಲ್ಲ.
ಶಾಂತಿ ಪ್ರಶಸ್ತಿಯು ಸಾಮಾನ್ಯವಾಗಿ ಪ್ರಸ್ತುತ ಸಂದರ್ಭಗಳು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಸಂದೇಶವನ್ನು ಹೊಂದಿರುತ್ತದೆ. ಒಂದು ಪ್ರಶಸ್ತಿಯನ್ನು ಗರಿಷ್ಠ ಮೂವರು ವಿಜೇತರ ನಡುವೆ ಹಂಚಿಕೊಳ್ಳಬಹುದು, ಆದರೆ ನಿಜವಾದ ಬಹುಮಾನವೆಂದರೆ ಅವರ ಕಠಿಣ ಪರಿಶ್ರಮ, ಆಲೋಚನೆಗಳು ಮತ್ತು ಕೊಡುಗೆಗಳನ್ನು ಇಡೀ ಪ್ರಪಂಚದ ಮುಂದೆ ಅಮರಗೊಳಿಸುವ ಮನ್ನಣೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Fri, 10 October 25




