ನ್ಯೂಯಾರ್ಕ್: ಅಮೆರಿಕದಲ್ಲಿ ಉಂಟಾಗಿರುವ ಭಾರೀ ಹಿಮಪಾತ (winter storm) ಇದುವರೆಗೆ 60ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಒಟ್ಟು 62 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮುಖ್ಯವಾಗಿ ಬಫಲೋ ಹೆಚ್ಚು ಹಾನಿಗೊಳಗಾದ ನಗರವಾಗಿದೆ. ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆಯಿದೆ.
ಹಿಮಪಾತ ಮತ್ತು ಶೀತಗಾಳಿಯಿಂದ ಅಮೆರಿಕದಲ್ಲಿ ಅನೇಕ ವಿಮಾನಗಳು ರದ್ದಾಗಿವೆ. ಬಫಲೋದಲ್ಲಿ ವಾಹನ ಚಲಾಯಿಸುವುದನ್ನು ನಿಷೇಧಿಸಲಾಗಿದೆ. ಈ ಹಿಮಪಾತವನ್ನು ಈ ಶತಮಾನದಲ್ಲೇ ಅತಿ ಭೀಕರ ಹಿಮಪಾತ ಎಂದು ಹೇಳಲಾಗಿದೆ. ಬಫಲೋ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
I spoke with @GovKathyHochul to get an update on the extreme winter weather hitting New York. We stand ready to make sure they have the resources they need to get through this.
My heart is with those who lost loved ones this holiday weekend. You are in my and Jill’s prayers. pic.twitter.com/Lt6eZ1YJR5
— President Biden (@POTUS) December 26, 2022
ಶೀತ ಚಂಡಮಾರುತವು ನ್ಯೂಯಾರ್ಕ್‌ನಲ್ಲಿ ದಕ್ಷಿಣಕ್ಕೆ ಹರಡಿದ್ದರಿಂದ ರಸ್ತೆ ಮಾರ್ಗದ ಪ್ರವಾಹಗಳು, ಮರಗಳು ಮತ್ತು ಕೊಂಬೆಗಳು ಉರುಳಿಬಿದ್ದಿರುವ ಹಲವಾರು ಘಟನೆಗಳು ನಡೆದಿವೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ. ಹಿಮಪಾತದಿಂದ ಅಮೆರಿಕದ ಜನಜೀವನ ಅಸ್ತವ್ಯಸ್ತವಾಗಿದೆ. ಇದುವರೆಗೂ ನ್ಯೂಯಾರ್ಕ್‌ನಲ್ಲಿ ಕನಿಷ್ಠ 27 ಮಂದಿ ಬಿರುಗಾಳಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಅಮೆರಿಕದಲ್ಲಿ ಶೀತ ಮಾರುತಗಳ ಆರ್ಭಟಕ್ಕೆ ಸುಮಾರು 60ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
A winter storm has battered #Buffalo, New York, paralyzing the city’s international airport. The frigid storm has claimed the lives of at least 34 across the #US, and knocked out power for hundreds of thousands of households.#Newyork #WinterStorm pic.twitter.com/jtna9o1uCM
— Chaudhary Parvez (@ChaudharyParvez) December 26, 2022
ಬಫಲೋ ನಗರದ ಸುತ್ತಲೂ ಬೆಟ್ಟಗಳಂತೆ ಆವರಿಸಿರುವ ಹಿಮಗಡ್ಡೆಗಳನ್ನು ತೆರವುಗೊಳಿಸುವ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಾರುಗಳು, ಬಸ್, ಆಂಬುಲೆನ್ಸ್‌ಗಳು, ಟ್ರಕ್‌ಗಳು ಹಿಮದ ಅಡಿ ಹೂತುಹೋಗಿವೆ. ಅಮೆರಿಕದಲ್ಲಿ ಹಿಮಪಾತ ಶುರುವಾದ ಬಳಿಕ ಸುಮಾರು 15,000 ವಿಮಾನಗಳ ಸಂಚಾರ ರದ್ದುಗೊಂಡಿದೆ. ಸೋಮವಾರ ಒಂದೇ ದಿನ 3,800 ವಿಮಾನಗಳ ಹಾರಾಟ ರದ್ದಾಗಿವೆ.