ನಿರಾಶ್ರಿತ ವ್ಯಕ್ತಿ ಜತೆ ಯುಕೆ ಪ್ರಧಾನಿ ರಿಷಿ ಸುನಕ್ ಸಂವಾದ ವೈರಲ್; ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದ ನೆಟ್ಟಿಗರು

Rishi Sunak ಮೊದಲಿಗೆ ಅಲ್ಲಿ ಬಂದ ಯುವಕನಲ್ಲಿ ರಿಷಿ ಅವರು ಹೇಗಿದ್ದೀರಿ ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಆ ವ್ಯಕ್ತಿ ತನಗೆ ಹಸಿವಾಗಿದೆ ಎಂದು ಹೇಳುತ್ತಾನೆ. ಆನಂತರ ಸುನಕ್ ಆ ವ್ಯಕ್ತಿಯಲ್ಲಿ ನೀವು ವ್ಯಾಪಾರ ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ.

ನಿರಾಶ್ರಿತ ವ್ಯಕ್ತಿ ಜತೆ ಯುಕೆ ಪ್ರಧಾನಿ ರಿಷಿ ಸುನಕ್ ಸಂವಾದ ವೈರಲ್; ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದ ನೆಟ್ಟಿಗರು
ರಿಷಿ ಸುನಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 27, 2022 | 12:58 PM

ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ನಿರಾಶ್ರಿತ ವ್ಯಕ್ತಿಯೊಬ್ಬರ ಜತೆಗೆ ನಡೆಸುತ್ತಿರುವ ಸಂಭಾಷಣೆಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರಿಂದ ಟೀಕೆಗೊಳಗಾಗಿದೆ. ಸುನಕ್ ಅವರು ಆಶ್ರಯ ಮನೆಗೆ (shelter house)ಭೇಟಿ ನೀಡಿ ಅಲ್ಲಿನ ಅಡುಗೆ ಮನೆಯಲ್ಲಿ ಕೆಲಹೊತ್ತು ಆಹಾರ ಬಡಿಸುವ ಕೆಲಸ ಮಾಡಿದ್ದಾರೆ.ಈ ಸಮಯದಲ್ಲಿ ಅವರು ಮನೆಯಿಲ್ಲದ ನಿರಾಶ್ರಿತ ವ್ಯಕ್ತಿಯೊಬ್ಬರಿಗೆ ಆಹಾರ ಬಿಡಿಸುತ್ತಿರುವ ವೇಳೆ ನಡೆದ ಸಂಭಾಷಣೆಯ ವಿಡಿಯೊವಾಗಿದೆ ಇದು. ಕೌಂಟರ್‌ನಲ್ಲಿ ರಿಷಿ ಸುನಕ್  ನಡೆಸಿದ ಸಂಭಾಷಣೆಯನ್ನು ITV ನ್ಯೂಸ್ ಹಂಚಿಕೊಂಡಿದೆ. ಅದರಲ್ಲಿ, ಮೊದಲಿಗೆ ಅಲ್ಲಿ ಬಂದ ಯುವಕನಲ್ಲಿ ರಿಷಿ ಅವರು ಹೇಗಿದ್ದೀರಿ ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಆ ವ್ಯಕ್ತಿ ತನಗೆ ಹಸಿವಾಗಿದೆ ಎಂದು ಹೇಳುತ್ತಾನೆ. ಆನಂತರ ಸುನಕ್ ಆ ವ್ಯಕ್ತಿಯಲ್ಲಿ ನೀವು ವ್ಯಾಪಾರ ಮಾಡುತ್ತಿದ್ದೀರಾ ಎಂದು ಕೇಳುತ್ತಾರೆ “ಇಲ್ಲ, ನಾನು ನಿರಾಶ್ರಿತನಾಗಿದ್ದೇನೆ. ನಾನು ಮನೆಯಿಲ್ಲದ ವ್ಯಕ್ತಿ ಎಂದು ಆ ವ್ಯಕ್ತಿ ಉತ್ತರಿಸುತ್ತಾನೆ. ತನಗೆ ವ್ಯಾಪಾರದಲ್ಲಿ ಆಸಕ್ತಿ ಇದೆ ಎಂದು ಆ ವ್ಯಕ್ತಿ ಹೇಳಿದಾಗ ಯಾವ ರೀತಿಯ ವ್ಯಾಪಾರದಲ್ಲಿ ನಿಮಗೆ ಆಸಕ್ತಿ ಇದೆ ಎಂದು ರಿಷಿ ಕೇಳಿದ್ದಾರೆ. ನಂತರ ಇಬ್ಬರೂ ವಾಣಿಜ್ಯ ಕ್ಷೇತ್ರದ ಬಗ್ಗೆ ಮಾತನಾಡುತ್ತಾರೆ. ಆಗ ರಿಷಿ ಸುನಕ್, ಹಾಗಾದರೆ ನೀವು ಇದರಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಆ ಯುವಕ, ಬೇಜಾರು ಮಾಡಿಕೊಳ್ಳಬೇಡಿ, ನಾನು ಮೊದಲು ಕ್ರಿಸ್ಮಸ್ ಆಚರಿಸಲು ಬಯಸುತ್ತೇನೆ. ಯಾವುದಾದರೂ ಚಾರಿಟಿ ತನಗೆ ಕ್ರಿಸ್ಮಸ್ ಆಚರಿಸಲು ತಾತ್ಕಾಲಿಕ ವಸತಿ ನೀಡುತ್ತಿದ್ದರೆ ಒಳ್ಳೆಯದಿತ್ತು.  ನನಗೆ ರಸ್ತೆಯಲ್ಲಿ ಮಲಗಬೇಕಾಗಿ ಬರುತ್ತಿರಲಿಲ್ಲ ಎಂದಿದ್ದಾರೆ.

ಅಂದಹಾಗೆ ಈ ಸಂಭಾಷಣೆಯನ್ನು ಅಸಹನೀಯ ಎಂದಿದ್ದಾರೆ ದಿ ಲೇಬರ್ಸ್ ಡೆಪ್ಯುಟಿ ನಾಯಕ

ಇತ್ತೀಚೆಗೆ ಸುನಕ್ ಅವರು “ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಅರ್ಥವೇನೆಂದು ಬ್ರಿಟನ್‌ಗೆ ತಿಳಿದಿದೆ” ಎಂದು ಹೇಳಿರುವ ಟ್ವೀಟ್ ಟೀಕೆಗೊಳಗಾಗಿತ್ತು.ಅಧಿಕಾರ ವಹಿಸಿಕೊಂಡ ನಂತರ ಉಕ್ರೇನ್‌ಗೆ ತನ್ನ ಮೊದಲ ಭೇಟಿಯಲ್ಲಿ, ರಷ್ಯಾ ವಿರುದ್ಧದ ಯುದ್ಧದಲ್ಲಿ ಬ್ರಿಟನ್‌ನ ನಿರಂತರ ಬೆಂಬಲವನ್ನು ದೇಶಕ್ಕೆ ಭರವಸೆ ನೀಡಿದರು. ಭಾರತೀಯ ಮೂಲದ ರಿಷಿ ಸುನಕ್, ಸ್ವಾತಂತ್ರ್ಯಕ್ಕಾಗಿ ಹೋರಾಡುವುದರ ಅರ್ಥವೇನೆಂದು ಬ್ರಿಟನ್ನಿಗೆ ತಿಳಿದಿದೆ. ನಾವು ಎಲ್ಲಾ ರೀತಿಯಲ್ಲಿ ನಿಮ್ಮೊಂದಿಗೆ ಇದ್ದೇವೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ಮತ್ತಷ್ಟು  ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Tue, 27 December 22