ಅಮೆರಿಕ-ಪಾಕ್ ನಡುವೆ ನಡೆದಿದೆ ಎನ್ನಲಾದ ರಹಸ್ಯ ಒಪ್ಪಂದ ಸುಳ್ಳಾ? ಶ್ವೇತ ಭವನ ಕೊಟ್ಟ ಸ್ಪಷ್ಟನೆ ಏನು?
ಪಾಕಿಸ್ತಾನ ಹಾಗೂ ಅಮೆರಿಕದ ನಡುವೆ ಅಪಾಯಕಾರಿ ಕ್ಷಿಪಣಿಗಳಿಗೆ ಸಂಬಂಧಿಸಿದಂತೆ ಒಪ್ಪಂದವಾಗಿದೆ ಎನ್ನುವ ವಿಚಾರಕ್ಕೆ ಶ್ವೇತಭವನ ಸ್ಪಷ್ಟನೆ ನೀಡಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾ ಹಾಗೂ ಅಮೆರಿಕ ದೇಶಗಳು ತೀರಾ ಹತ್ತಿರವಾಗಿವೆ. ಅಮೆರಿಕ ಹಾಗೂ ಪಾಕಿಸ್ತಾನದ ನಡುವೆ ಅಪಾಯಕಾರಿ ಕ್ಷಿಪಣಿಗೆ ಸಂಬಂಧಿಸಿದ ಒಪ್ಪಂದವಾಗಿದೆ ಶೀಘ್ರ ಅದು ಪಾಕ್ ಕೈಸೇರಲಿದೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಶ್ವೇತ ಭವನ ಸ್ಪಷ್ಟನೆ ಕೊಟ್ಟಿದ್ದು, ಯಾವುದೇ ಕ್ಷಿಪಣಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿಲ್ಲ, ಅಂಥಾ ಯಾವ ಒಪ್ಪಂದವೂ ಎರಡು ದೇಶಗಳ ನಡುವೆ ಆಗಿಲ್ಲ ಎಂದು ಹೇಳಿದೆ.

ವಾಷಿಂಗ್ಟನ್, ಅಕ್ಟೋಬರ್ 10: ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನ(Pakistan) ಹಾಗೂ ಅಮೆರಿಕ(America) ದೇಶಗಳು ತುಂಬಾ ಹತ್ತಿರವಾಗಿವೆ. ಅಮೆರಿಕ ಹಾಗೂ ಪಾಕಿಸ್ತಾನದ ನಡುವೆ ಅಪಾಯಕಾರಿ ಕ್ಷಿಪಣಿಗೆ ಸಂಬಂಧಿಸಿದ ಒಪ್ಪಂದವಾಗಿದೆ ಶೀಘ್ರ ಅದು ಪಾಕ್ ಕೈಸೇರಲಿದೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಶ್ವೇತ ಭವನ ಸ್ಪಷ್ಟನೆ ಕೊಟ್ಟಿದ್ದು, ಯಾವುದೇ ಕ್ಷಿಪಣಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿಲ್ಲ, ಅಂಥಾ ಯಾವ ಒಪ್ಪಂದವೂ ಎರಡು ದೇಶಗಳ ನಡುವೆ ಆಗಿಲ್ಲ ಎಂದು ಹೇಳಿದೆ.
ಅಮೆರಿಕದ ಯುದ್ಧ ಇಲಾಖೆ ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಒಪ್ಪಂದ ಕುರಿತಂತೆ ಕೆಲವು ಮಾರ್ಪಾಟುಗಳನ್ನು ಮಾಡಿದೆ. ಈ ಮಾರ್ಪಾಟು ಪಾಕಿಸ್ತಾನಕ್ಕೆ ಹೊಸ ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳ (AMRAAMs) ವಿತರಣೆ ಒಳಗೊಂಡಿಲ್ಲ ಎಂದು ಸ್ಪಷ್ಟೀಕರಣ ನೀಡಲಾಗಿದೆ.
ಅಮೆರಿಕ ಇತ್ತೀಚೆಗೆ ಮಾಡಿಕೊಂಡ ಒಪ್ಪಂದವು ಬ್ರಿಟನ್, ಪೋಲೆಂಡ್, ಪಾಕಿಸ್ತಾನ, ಜರ್ಮನಿ, ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ರೊಮೇನಿಯಾ, ಕತಾರ್, ಓಮನ್, ಕೊರಿಯಾ, ಗ್ರೀಸ್, ಸ್ವಿಟ್ಜರ್ಲೆಂಡ್, ಪೋರ್ಚುಗಲ್, ಸಿಂಗಾಪುರ, ನೆದರ್ಲ್ಯಾಂಡ್ಸ್, ಜೆಕ್ ಗಣರಾಜ್ಯ, ಜಪಾನ್, ಸ್ಲೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಜಿಯಂ, ಬಹ್ರೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಫಿನ್ಲ್ಯಾಂಡ್, ಸ್ವೀಡನ್, ತೈವಾನ್, ಲಿಥುವೇನಿಯಾ, ಇಸ್ರೇಲ್, ಬಲ್ಗೇರಿಯಾ, ಹಂಗೇರಿ ಮತ್ತು ಟರ್ಕಿಗಳಿಗೆ ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟ ಕೂಡ ಒಳಗೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಮತ್ತಷ್ಟು ಓದಿ: Pakistan US Defence Deal: ಪಾಕಿಸ್ತಾನಕ್ಕೆ ಅಪಾಯಕಾರಿ ಕ್ಷಿಪಣಿಗಳನ್ನು ನೀಡಲಿದೆ ಅಮೆರಿಕ, ರಹಸ್ಯವಾಗಿ ನಡೆದಿದೆ ದೊಡ್ಡ ಒಪ್ಪಂದ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಡುವಿನ ಸಭೆಯ ಕೆಲವೇ ದಿನಗಳ ನಂತರ ಈ ಒಪ್ಪಂದವಾಗಿದೆ ಎಂದು ಹೇಳಲಾಗಿತ್ತು.ಈ ಒಪ್ಪಂದವು ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಹೊಸ ಕಾರ್ಯತಂತ್ರದ ನಿಕಟತೆಯನ್ನು ಸೂಚಿಸುತ್ತದೆ ಎಂದು ರಕ್ಷಣಾ ತಜ್ಞರು ಹೇಳಿದ್ದರು.
ಈ ಒಪ್ಪಂದದ ಮೂಲಕ, ಅಮೆರಿಕವು ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿರಬಹುದು ಎನ್ನಲಾಗಿತ್ತು. ಪಾಕಿಸ್ತಾನವು AIM-120 ಕ್ಷಿಪಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು F-16 ನವೀಕರಣಗಳು ಅದರ ವಾಯು ಶಕ್ತಿಯನ್ನು ಸುಧಾರಿಸುತ್ತದೆ. ಭಾರತವು ಈಗಾಗಲೇ ರಫೇಲ್ ಮತ್ತು ಸುಖೋಯ್-30MKI ನಂತಹ ಸುಧಾರಿತ ಯುದ್ಧವಿಮಾನಗಳನ್ನು ಹೊಂದಿದ್ದು, ಅವು ಮೆಟಿಯೋರ್ ಕ್ಷಿಪಣಿಯನ್ನು ಬಳಸುತ್ತವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




