ಟರ್ಕಿಯ ಭಯೋತ್ಪಾದಕ ದಾಳಿಯನ್ನು ಮುಂಬೈ ಉಗ್ರರ ದಾಳಿಗೆ ಹೋಲಿಸುತ್ತಿರುವುದೇಕೆ?
ಟರ್ಕಿಯ ರಾಜಧಾನಿ ಅಂಕಾರಾ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ 26/11 ದಾಳಿಗೆ ಹೋಲಿಸಲಾಗುತ್ತಿದೆ. 2008ರಲ್ಲಿ ನಡೆದ ಈ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು 4 ದಿನಗಳಲ್ಲಿ 175 ಜನರನ್ನು ಕೊಂದಿದ್ದರು. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ನವದೆಹಲಿ: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಇದರೊಂದಿಗೆ ದಾಳಿ ನಡೆಸಿದ ಭಯೋತ್ಪಾದಕರು ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಟರ್ಕಿಯ ಪ್ರಮುಖ ರಕ್ಷಣಾ ಮತ್ತು ವಿಮಾನಯಾನ ಕಂಪನಿಗಳಲ್ಲಿ ಒಂದಾದ ಟುಸಾಸ್ನ ಪ್ರಧಾನ ಕಛೇರಿಯಲ್ಲಿ ಸ್ಫೋಟ ಸಂಭವಿಸಿದೆ. ಭಯೋತ್ಪಾದಕರ ದಾಳಿಯ ನಂತರ ಜನರು ಹೊರಗೆ ಓಡುತ್ತಿರುವುದು ಕಂಡುಬಂದಿದೆ. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿವೆ ಮತ್ತು ಭಯೋತ್ಪಾದಕರ ವಿರುದ್ಧ ಕ್ರಮವನ್ನು ಪ್ರಾರಂಭಿಸಲಾಗಿದೆ.
ಟರ್ಕಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಮುಂಬೈನಲ್ಲಿ 26/11ರಂದು ನಡೆದ ಭಯೋತ್ಪಾದಕ ದಾಳಿಗೆ ಹೋಲಿಸಲಾಗುತ್ತಿದೆ. ನವೆಂಬರ್ 2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಟ್ಟು 175 ಜನರು ಸಾವನ್ನಪ್ಪಿದ್ದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಯಲ್ಲಿ 9 ಉಗ್ರರು ಭಾಗಿಯಾಗಿದ್ದರು. ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ ನಡೆಸಿತ್ತು. 2008ರ ನವೆಂಬರ್ 26ರಿಂದ 29ರವರೆಗೆ ಉಗ್ರರು ಮುಂಬೈನಲ್ಲಿ ಹಿಂಸಾಚಾರವನ್ನು ಉಂಟುಮಾಡಿದರು.
ಇದನ್ನೂ ಓದಿ: ಗಡಿಯಲ್ಲಿ ಶಾಂತಿಗೆ ಆದ್ಯತೆ ನೀಡಬೇಕು; ರಷ್ಯಾದಲ್ಲಿ ಚೀನಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್, ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕ್ಯಾಮಾ ಆಸ್ಪತ್ರೆ, ನಾರಿಮನ್ ಹೌಸ್, ಮೆಟ್ರೋ ಚಿತ್ರಮಂದಿರ, ಟೈಮ್ಸ್ ಆಫ್ ಇಂಡಿಯಾ ಕಟ್ಟಡ ಮತ್ತು ಸೇಂಟ್ ಕ್ಸೇವಿಯರ್ ಕಾಲೇಜ್ ಹಿಂಭಾಗದ ಗಲ್ಲಿಗಳ ಮೇಲೆ ಭಯೋತ್ಪಾದಕರು ಏಕಕಾಲದಲ್ಲಿ ದಾಳಿ ನಡೆಸಿದ್ದರು.
Shooters have reportedly taken hostages during the attack on the Turkish Aerospace Industries facility in Ankara
Special ops teams have arrived on the scene.#Turkey pic.twitter.com/cXUNbcnNQv
— MOHAMMAD AL_ARSHASHAN 🇩🇪🇪🇺 (@MOHAMMAD_ALARSH) October 23, 2024
ಮುಂಬೈನ ಬಂದರು ಪ್ರದೇಶದ ಮಜಗಾಂವ್‌ನಲ್ಲಿ ಮತ್ತು ವಿಲೆ ಪಾರ್ಲೆಯ ಟ್ಯಾಕ್ಸಿಯಲ್ಲಿ ಮೊದಲ ಸ್ಫೋಟ ಸಂಭವಿಸಿತ್ತು. ನವೆಂಬರ್ 28ರ ಬೆಳಿಗ್ಗೆ ತಾಜ್ ಹೋಟೆಲ್ ಹೊರತುಪಡಿಸಿ ಎಲ್ಲಾ ಸ್ಥಳಗಳನ್ನು ಮುಂಬೈ ಪೊಲೀಸರು ಮತ್ತು ಭದ್ರತಾ ಪಡೆಗಳು ಸುರಕ್ಷಿತವಾಗಿರಿಸಿದ್ದವು. ನವೆಂಬರ್ 29ರಂದು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (NSG) ಉಳಿದ ದಾಳಿಕೋರರನ್ನು ಹೊರಹಾಕಲು ಆಪರೇಷನ್ ಬ್ಲ್ಯಾಕ್ ಟೊರ್ನಾಡೋವನ್ನು ಪ್ರಾರಂಭಿಸಿತು. ಅದು ತಾಜ್ ಹೋಟೆಲ್‌ನಲ್ಲಿ ಉಳಿದಿರುವ ಕೊನೆಯ ದಾಳಿಕೋರರ ಸಾವಿನೊಂದಿಗೆ ಮುಕ್ತಾಯವಾಯಿತು.
ಈ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸದಸ್ಯ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಬಂಧಿಸಲಾಯಿತು. ಬಳಿಕ ಆತನನ್ನು ಗಲ್ಲಿಗೇರಿಸಲಾಯಿತು.
⚡ Breaking: Terrorist attack at the aerospace industry center in Ankara, Turkey.
10 people reported dead, with several engineers taken hostage. Among the attackers was a female terrorist.
The terrorists used AK-74 rifles and explosives, which can be seen detonating in the… pic.twitter.com/Y399YsQ7JU
— Shubham Singh (@Shubhamsingh038) October 23, 2024
ಇದನ್ನೂ ಓದಿ: ಟರ್ಕಿಯ ಏರೋಸ್ಪೇಸ್ ಕಂಪನಿ ಮೇಲೆ ಉಗ್ರರ ದಾಳಿ; ನಾಲ್ವರು ಸಾವು, 14 ಮಂದಿಗೆ ಗಾಯ
ಇದೀಗ ಟರ್ಕಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳು ಕಾರ್ ಪಾರ್ಕ್‌ನಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿರುವ ಪ್ರವೇಶದ್ವಾರದಲ್ಲಿ ಸ್ಫೋಟ ಉಂಟಾಗಿರುವುದನ್ನು ತೋರಿಸಿದೆ. ಇದರ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು, ಜನರು ಓಡಿಹೋಗುತ್ತಿರುವುದು ಕಂಡುಬಂದಿದೆ. ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲೂ ಇದೇ ರೀತಿಯ ಪರಿಸ್ಥಿತಿ ಇತ್ತು ಮತ್ತು ಸ್ಫೋಟದ ನಂತರ ಗುಂಡಿನ ಚಕಮಕಿ ನಡೆದಿತ್ತು.
ಟರ್ಕಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ವೇಳೆ ಉಗ್ರರು ಬಂದೂಕು ಹಿಡಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮುಂಬೈ ದಾಳಿಯ ಸಂದರ್ಭದಲ್ಲೂ ಉಗ್ರರು ಇದೇ ರೀತಿಯಲ್ಲಿ ಶಸ್ತ್ರಾಸ್ತ್ರಗಳಿಂದ ಮನಬಂದಂತೆ ಗುಂಡು ಹಾರಿಸಿರುವುದು ಕಂಡುಬಂದಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ