ಬ್ರೇಕಪ್: ಕೋಪದಲ್ಲಿ ಪ್ರಿಯಕರನ ಕೈ ಬೆರಳನ್ನೇ ಕತ್ತರಿಸಿದ ಯುವತಿ
ಸಂಬಂಧ ಮುರಿದುಬಿದ್ದಿದ್ದಕ್ಕೆ ಕೋಪಗೊಂಡ ಯುವತಿ ತನ್ನ ಪ್ರಿಯಕರನ ಕೈ ಬೆರಳನ್ನೇ ಕತ್ತರಿಸಿರುವ ಘಟನೆ ಜಪಾನ್ನಲ್ಲಿ ನಡೆದಿದೆ. ಜಪಾನ್‌ನ ಹೊನ್ಶು ದ್ವೀಪದ ಕನ್ಸೈ ಪ್ರದೇಶದ ಒಸಾಕಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಸಂಭವಿಸಿದ ಈ ಭಯಾನಕ ಘಟನೆಯ ಬಗ್ಗೆ ತಿಳಿಸಿದ್ದಾನೆ. ಆತನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಜಪಾನ್, ಮೇ 12: ಬ್ರೇಕಪ್(Breakup) ಆಗಿದ್ದಕ್ಕೆ ಬೇಸರಗೊಂಡ ಯುವತಿ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್ನೊಳಗಿಟ್ಟ ಘಟನೆ ಜಪಾನ್ನಲ್ಲಿ ನಡೆದಿದೆ. ಆರೋಪಿ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು. ತಾನು ಉಂಗುರು ಹಾಕಬೇಕಿದ್ದ ಬೆರಳಿಗೆ ಮತ್ಯಾರೋ ಹಾಕಬಹುದು ಎನ್ನುವ ಕೋಪದಲ್ಲಿ ಆಕೆಯ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದಾಳೆ.
ಜಪಾನ್‌ನ ಹೊನ್ಶು ದ್ವೀಪದ ಕನ್ಸೈ ಪ್ರದೇಶದ ಒಸಾಕಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 21 ವರ್ಷದ ವ್ಯಕ್ತಿ ಸ್ವತಃ ಪೊಲೀಸರಿಗೆ ಕರೆ ಮಾಡಿ ತನಗೆ ಸಂಭವಿಸಿದ ಈ ಭಯಾನಕ ಘಟನೆಯ ಬಗ್ಗೆ ತಿಳಿಸಿದ್ದಾನೆ. ಆತನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಬ್ರೇಕಪ್ ಬಗ್ಗೆ ವಾಗ್ವಾದ ನಡೆದ ನಂತರ ತನ್ನ ಗೆಳತಿ ಸಾಕಿ ಸಾಟೊ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಯುವಕ ಹೇಳಿದ್ದಾನೆ. ಹೇಗೋ ಆ ಯುವಕ ಸಹಾಯಕ್ಕಾಗಿ ಪೊಲೀಸರ ಬಳಿ ಮನವಿ ಮಾಡಿದ. ಇದಾದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದಾಗ, ಇಬ್ಬರು ಫ್ಲಾಟ್‌ನಲ್ಲಿಯೇ ಪತ್ತೆಯಾಗಿದ್ದಾರೆ. ಆ ಯುವಕನ ಎಡ ಕೆನ್ನೆ ಮತ್ತು ಮೂಗಿನ ಮೇಲೆ ಗಾಯದ ಗುರುತುಗಳಿದ್ದವು.
ಮತ್ತಷ್ಟು ಓದಿ: Breakup Benefits: ನಿಮ್ಗೊತ್ತಾ ಬ್ರೇಕಪ್‌ನಿಂದಲೂ ಹಲವಾರು ಪ್ರಯೋಜನಗಳಿವೆಯಂತೆ
ವರದಿಯ ಪ್ರಕಾರ, 2023 ರಲ್ಲಿ, ಆತ 19 ವರ್ಷದವನಾಗಿದ್ದಾಗ ಅವನು ಸ್ಯಾಟೊಳ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ನೋಡಿದ್ದ ಮತ್ತು ಅವಳ ಮುಗ್ಧ ನೋಟದಿಂದ ಆಕರ್ಷಿತನಾಗಿದ್ದ. ಸ್ವಲ್ಪ ಸಮಯದ ನಂತರ, ಇಬ್ಬರೂ ಸಂಬಂಧ ಬೆಳೆಸಿಕೊಂಡರು ಮತ್ತು ಜುಲೈನಿಂದ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.
ಆದರೆ ಸಾಟೊ ಬಹಳ ಪ್ರಾಬಲ್ಯ ಹೊಂದಿರುವ ಸ್ವಭಾವವನ್ನು ಹೊಂದಿದ್ದಳು. ಅವಳು ಹೇಳಿದ್ದಕ್ಕೆಲ್ಲಾ ಸೈ ಎನ್ನುವ ಹುಡುಗರು ಆಕೆಗೆ ಇಷ್ಟವಾಗುತ್ತಿದ್ದರು. ಆಕೆ ಸ್ವಲ್ಪ ದಿನದಲ್ಲೇ ಆತನನ್ನು ನಿಯಂತ್ರಿಸಲು ಪ್ರಾರಂಭಿಸಿದ್ದಳು. ಅವನ ಬ್ಯಾಂಕ್ ಪಾಸ್‌ಬುಕ್ ಮತ್ತು ಅವನ ಸ್ಮಾರ್ಟ್‌ಫೋನ್ ಅನ್ನು ವಶಪಡಿಸಿಕೊಂಡಿದ್ದಳು.
ಅಕ್ಟೋಬರ್‌ನಲ್ಲಿ, ಬ್ರೇಕಪ್ ಬಗ್ಗೆ ಮಾತನಾಡುವಾಗ, ಸಾಟೊ ಚಾಕುವಿನಿಂದ ಯುವಕನ ಉಂಗುರದ ಬೆರಳನ್ನು ಕತ್ತರಿಸಿ ಮದ್ಯದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಳು. ಆದರೆ, ಆರೋಪಿ ಗೆಳತಿ ಹೇಳುವುದೇನೆಂದರೆ, ಆ ಯುವಕನೇ ಇದನ್ನು ಮಾಡಿದ್ದಾನೆ.
ಆದರೆ ಪೊಲೀಸರು ಇದನ್ನು ಒಪ್ಪಲಿಲ್ಲ ತನಿಖೆ ಮುಂದುವರೆಸಿದ್ದಾರೆ. ಗೆಳತಿ ತುಂಬಾ ಸುಂದರಿಯಾಗಿದ್ದಳು. ಆಕೆಯನ್ನು ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳ ಕಿರುಕುಳವನ್ನು ಸಹಿಸಿಕೊಂಡೆ ಮತ್ತು ಅವಳ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಆತ ಹೇಳಿದ್ದಾನೆ. ಈ ಘಟನೆ ಜಪಾನಿನ ಜಾಲತಾಣಿಗರನ್ನು ಬೆಚ್ಚಿಬೀಳಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




