ಮೊದಲ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್: ಮೆಟ್ರೋದಲ್ಲಿ ಸಂಚರಿಸಲು ಸಿಎಂ ನಿರ್ಧಾರ
ಸಿಎಂ ಡಿಕೆ ಶಿವಕುಮಾರ್ ಇಂದು ಕನಕಪುರ ಮತ್ತು ಹಾರೋಹಳ್ಳಿಯಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿ.ಎಂ. ಆದ ಬಳಿಕ ಸ್ವಕ್ಷೇತ್ರಕ್ಕೆ ಇದು ಅವರು ಮೊದಲ ಭಾರಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ಜೀರೋ ಟ್ರಾಫಿಕ್ನಿಂದ ವಾಹನ ಸವಾರರಿಗೆ ತೊಂದರೆ ಹಿನ್ನೆಲೆ ಮೆಟ್ರೋದಲ್ಲಿ ಸಂಚರಿಸಲಿದ್ದಾರೆ.
- Anil Kalkere
- Updated on: Jun 7, 2026
- 9:20 am
ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ: ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದ ಸುರ್ಜೇವಾಲ
ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ನಿನ್ನೆ ಬೆಳಗ್ಗೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಇದೀಗ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದಾರೆ. ಸಭೆ ಮೇಲೆ ಸಭೆ, ಮನವೊಲಿಸುವ ಪ್ರಯತ್ನದ ಬಳಿಕ ಇದೀಗ ಈ ನಿರ್ಧಾರಕೈಗೊಳ್ಳಲಾಗಿದೆ. ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದುಕೊಂಡಿರುವ ಬಗ್ಗೆ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
- Anil Kalkere
- Updated on: Jun 6, 2026
- 5:15 pm
ಡಿಕೆ ಶಿವಕುಮಾರ್ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಡ್ಲೆಕಾಯಿ ಅಂದರೆ ಅಚ್ಚುಮೆಚ್ಚು. ಅವರ ನಿವಾಸದ ಬಳಿ ಸುಮಾರು 20-25 ವರ್ಷಗಳಿಂದ ಕಡ್ಲೆಕಾಯಿ ಮಾರುವ ವ್ಯಾಪಾರಿಯೊಬ್ಬರು ಡಿಕೆಶಿಗೆ ನಿರಂತರವಾಗಿ ಕಡ್ಲೆಕಾಯಿ ಪೂರೈಸುತ್ತಿದ್ದಾರೆ. ಈಗ ಸಿಎಂ ಆದರೂ ಅವರಿಗೆ ಕಡ್ಲೆಕಾಯಿ ತಲುಪಿಸುವೆ ಎಂದು ವ್ಯಾಪಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡ್ಲೆಕಾಯಿಯೊಂದಿಗೆ ಡಿ.ಕೆ. ಶಿವಕುಮಾರ್ ಅವರ ಬಾಂಧವ್ಯ ಅನನ್ಯ.
- Anil Kalkere
- Updated on: Jun 3, 2026
- 2:54 pm
ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ
ಕರ್ನಾಟಕ ಯುವ ಕಾಂಗ್ರೆಸ್‌ನಲ್ಲಿ ರಾಜಕೀಯ ಬೆಳವಣಿಗೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳಿಗೆ ಕೊಕ್ ಕೊಟ್ಟ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಎರಡು ಗುಂಪುಗಳ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.ಇದರ ಮಧ್ಯೆ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
- Anil Kalkere
- Updated on: May 18, 2026
- 3:44 pm
ಗದಗಿನ ಲಕ್ಕುಂಡಿಯಲ್ಲಿ ನಿಧಿ ಪತ್ತೆ ಕೇಸ್: 664 ಗ್ರಾಂ ಆಂಟಿಕ್ ಚಿನ್ನದ ಮೌಲ್ಯ 8 ಕೋಟಿ ರೂ
ಗದಗದ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪತ್ತೆಯಾಗಿದ್ದ ಪ್ರಾಚೀನ ಚಿನ್ನಾಭರಣಗಳ ನಿಧಿ ರಾಜ್ಯಾದ್ಯಂತ ಕುತೂಹಲ ಕೆರಳಿಸಿತ್ತು. ಒಟ್ಟು 664 ಗ್ರಾಂ ತೂಕದ ಈ ಚಿನ್ನಾಭರಣಗಳು ಸುಮಾರು 600 ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಲಾಗಿದೆ. ಇವುಗಳ ಪ್ರಾಚೀನ ಮೌಲ್ಯದಿಂದಾಗಿ, ಈ ನಿಧಿಯ ಬೆಲೆ 8 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿದೆ.
- Anil Kalkere
- Updated on: May 16, 2026
- 6:38 pm
6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗರಿಗೆ ಬಂಪರ್ ಗಿಫ್ಟ್!
ಇ-ಖಾತಾ, ನಂಬಿಕೆ ನಕ್ಷೆ ಸೇರಿ ಬೆಂಗಳೂರಿನ ಜನರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ. ಅದರ ಜತೆಗೆ ಇದೀಗ ಬೆಂಗಳೂರಿಗೆ ಸೀಮಿತವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು (ಇಂದು 13) 6ನೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಏನದು 6ನೇ ಗ್ಯಾರಂಟಿ ಎನ್ನುವ ಡಿಟೇಲ್ಸ್ ಇಲ್ಲಿದೆ.
- Anil Kalkere
- Updated on: May 13, 2026
- 3:16 pm
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ, ಎಷ್ಟು ಗೊತ್ತಾ?
Karnataka Governmnet employees DA hiked: ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ನೌಕರರ ತುಟ್ಟಿಭತ್ಯೆಯನ್ನು ಶೇ. 14.25 ರಿಂದ ಶೇ. 15.75 ಕ್ಕೆ ಏರಿಕೆ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಈ ಹೆಚ್ಚಳ ಅನ್ವಯವಾಗಲಿದೆ.
- Anil Kalkere
- Updated on: May 11, 2026
- 2:41 pm
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ ಬಗ್ಗೆ ಸಚಿವ ಮುನಿಯಪ್ಪ ಹೇಳಿದ್ದಿಷ್ಟು
ಕರ್ನಾಟಕ ಸರ್ಕಾರವು ನಾಗಮೋಹನ್‌ದಾಸ್ ವರದಿಯ ಆಧಾರದ ಮೇಲೆ ಒಳಮೀಸಲಾತಿ ನಿರ್ಧಾರವನ್ನು ಕೈಗೊಂಡಿದೆ. ಇದು ಸುಮಾರು 40 ವರ್ಷಗಳ ಹೋರಾಟಕ್ಕೆ ದೊರೆತ ಫಲವಾಗಿದ್ದು, ರೋಸ್ಟರ್ ಬಿಂದುವಿನ ಸಮಸ್ಯೆಗಳನ್ನು ಪರಿಹರಿಸುವ ಗುರಿ ಹೊಂದಿದೆ. ಶೋಷಿತ ಮತ್ತು ವಂಚಿತ ಸಮುದಾಯಗಳ 101 ಜಾತಿಗಳಿಗೆ ನ್ಯಾಯ ಒದಗಿಸುವ ಈ ನಿರ್ಧಾರದಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
- Anil Kalkere
- Updated on: May 9, 2026
- 2:52 pm
ಅತ್ತ ಗೆದ್ದು ಬಿಎಸ್ವೈ ಭೇಟಿಯಾದ ಜೀವರಾಜ್: ಇತ್ತ ಸಿಎಂ ಭೇಟಿ ಮಾಡಿದ ರಾಜೇಗೌಡ
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆ ಬಿಗ್ ಹೈಡ್ರಾಮಾಗೆ ಕಾರಣವಾಗಿತ್ತು. ಮತ್ತೆ ನಾವೇ ಗೆದ್ದಿದ್ದೇವೆ ಅಂತ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿತ್ತು. ಆದರೆ ರಾತ್ರಿ ಕಳೆದು ಬೆಳಗಾಗೋದ್ರಲ್ಲೇ ಫಲಿತಾಂಶಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು. ಸದ್ಯ ಬಿಜೆಪಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಇತ್ತ ರಾಜೇಗೌಡ ಕೂಡ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.
- Anil Kalkere
- Updated on: May 6, 2026
- 3:38 pm
ರಾಜ್ಯ ರಾಜಕೀಯದಲ್ಲಿ ಸದ್ದು ಮಾಡಿದ ಮಾಟ, ಮಂತ್ರ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ
ರಾಜ್ಯ ರಾಜಕೀಯದಲ್ಲಿ ಮಾಟ, ಮಂತ್ರ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಟ ಮಂತ್ರ ಪ್ರಯೋಗ ಆಗಿರಬಹುದು ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ ಎನ್ನುವ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ, ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಆಗಿರಬಹುದು ಎಂದಿದ್ದಾರೆ.
- Anil Kalkere
- Updated on: Apr 21, 2026
- 5:01 pm
ಕರ್ನಾಟಕ ಲೋಕಾಯುಕ್ತದ 40 ವರ್ಷಗಳ ಸಾರ್ಥಕ ಪಯಣ: ಸಾಧನೆಯ ಹಾದಿ ಮೆಲುಕು ಹಾಕಿದ ನ್ಯಾಯಮೂರ್ತಿಗಳು
ಕರ್ನಾಟಕ ಲೋಕಾಯುಕ್ತ ತನ್ನ 40 ವರ್ಷಗಳ ಅರ್ಥಪೂರ್ಣ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಾರ್ಥಕ ಪಯಣದ ಅಂಗವಾಗಿ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಉದ್ಘಾಟಿಸಿದರು. ಈ ವೇಳೆ ನಾಲ್ಕು ದಶಕಗಳ ಕಾರ್ಯಸೇವೆ ಮೆಲುಕು ಹಾಕಲಾಯಿತು.
- Anil Kalkere
- Updated on: Apr 18, 2026
- 6:06 pm
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಯ ಮತದಾರರ ಅಂತಿಮ ಪಟ್ಟಿಪ್ರಕಟ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮತದಾರರು, ಒಟ್ಟು ವಾರ್ಡ್‌ಗಳು ಮತ್ತು ಯಾವ ವಾರ್ಡ್‌ಗಳಲ್ಲಿ ಹೆಚ್ಚು ಮತದಾರರಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
- Anil Kalkere
- Updated on: Apr 18, 2026
- 3:07 pm