AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್​ ಕುಮಾರ್ ಎನ್​ ವೈ

ಪ್ರಜ್ವಲ್​ ಕುಮಾರ್ ಎನ್​ ವೈ

senior correspondent - TV9 Kannada

prajwal.nidumanahally@tv9.com

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
ಮೊಹಮ್ಮದ್ ನಲಪಾಡ್​ಗೆ ಬೆನ್ನುಬೆನ್ನಿಗೆ ಸಂಕಷ್ಟ: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್

ಮೊಹಮ್ಮದ್ ನಲಪಾಡ್​ಗೆ ಬೆನ್ನುಬೆನ್ನಿಗೆ ಸಂಕಷ್ಟ: SIT ಚಾರ್ಜ್​ಶೀಟ್ ಬೆನ್ನಲ್ಲೇ ಇಡಿ 3ನೇ ಸಮನ್ಸ್

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಹಣ ವರ್ಗಾವಣೆಯಲ್ಲಿ ನಲಪಾಡ್ ಹೆಸರು ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಇದೀಗ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದ ನಲಪಾಡ್, ಈ ಬಾರಿ ಹಾಜರಾಗದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಬೆಂಗಳೂರು: ಆವಲಹಳ್ಳಿ ಬಳಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ; 225 ಜಿಲೆಟಿನ್ ಕಡ್ಡಿ, 50 ಡಿಟೋನೇಟರ್ ವಶ

ಬೆಂಗಳೂರು: ಆವಲಹಳ್ಳಿ ಬಳಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆ; 225 ಜಿಲೆಟಿನ್ ಕಡ್ಡಿ, 50 ಡಿಟೋನೇಟರ್ ವಶ

ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡ ಅಗ್ರಹಾರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 225 ಜಿಲೆಟಿನ್ ಕಡ್ಡಿ ಹಾಗೂ 50 ಡಿಟೋನೇಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ, ಬೆಂಗಳೂರಿನಲ್ಲಿ ಮತ್ತೆ ಸ್ಫೋಟಕಗಳ ವಿಚಾರ ಸದ್ದು ಮಾಡಿದ್ದು, ಯಾವ ಕಾರಣಕ್ಕೆ ಸ್ಫೋಟಕ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಹೈಡ್ರಾಮಾ: ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಸತ್ಯ!

ಬೆಂಗಳೂರಿನಲ್ಲಿ ರಾಜ್ಯಪಾಲರ ಸಂಚಾರದ ವೇಳೆ ವಿಐಪಿ ಟ್ರಾಫಿಕ್ ತಡೆದಿದ್ದಕ್ಕೆ ಆಕ್ರೋಶಗೊಂಡು, ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಪ್ರತಿಭಟಿಸಿದ್ದ ಮೋಹಿತ್ ಎಂಬ ಯುವಕನ ಅಸಲಿ ಸತ್ಯ ಬಯಲಾಗಿದೆ. ಹೆಚ್‌ಎಎಲ್ ಪೊಲೀಸರ ವಿಚಾರಣೆ ವೇಳೆ ಕಾರಿನಲ್ಲಿ ಯಾರೂ ಇರಲಿಲ್ಲ, ಒತ್ತಡದಲ್ಲಿ ಸುಳ್ಳು ಹೇಳಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆತನಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ: ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ಬೆಂಗಳೂರಿನ ಗಾಂಧಿನಗರದಲ್ಲಿರುವ ಕಾರಾಗೃಹ ಇಲಾಖೆಗೆ ಸೇರಿದ 50 ಕೋಟಿ ರೂ. ಮೌಲ್ಯದ 10 ಸಾವಿರ ಚದರ ಅಡಿ ಜಾಗವನ್ನು ಅಕ್ರಮವಾಗಿ ಕಬ್ಜಾ ಮಾಡಿದ್ದ ಕಲೀಂ ಮತ್ತು ಅನಿಲ್ ಎಂಬುವವರ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಆದೇಶದ ಮೇರೆಗೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಬೆಂಗಳೂರು ಗಾಂಧಿನಗರದಲ್ಲಿರುವ ಸುಮಾರು 40-50 ಕೋಟಿ ರೂ ಮೌಲ್ಯದ ಕಾರಾಗೃಹ ಇಲಾಖೆಯ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿದ್ದಾರೆ. ಸದ್ಯ ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಇಬ್ಬರಿಗೂ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.

ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

ಬೆಂಗಳೂರು: ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

ಬೆಂಗಳೂರಿನ ವಿದೇಶಿ ಅಂಚೆ ಕಚೇರಿಗೆ ಅಮೆರಿಕ ಹಾಗೂ ಥಾಯ್ಲೆಂಡ್​​ನಿಂದ ಸ್ನಾಕ್ಸ್ ಬಾಕ್ಸ್ ಮೂಲಕ ಬಂದಿದ್ದ 3 ಕೋಟಿ ರೂ. ಮೌಲ್ಯದ 3 ಕೆಜಿಗೂ ಅಧಿಕ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ಭರ್ಜರಿ ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ನಿಖರ ಮಾಹಿತಿಯ ಆಧಾರದಲ್ಲಿ ಪೊಲೀಸರು ಶ್ವಾನ ದಳದ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಇನ್ನಿಬ್ಬರಿಂದ 47 ಲಕ್ಷ ರೂ ಮೌಲ್ಯದ ಬಿಟ್‌ಕಾಯಿನ್ ಜಪ್ತಿ ಮಾಡಿದ ಇಡಿ

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಇನ್ನಿಬ್ಬರಿಂದ 47 ಲಕ್ಷ ರೂ ಮೌಲ್ಯದ ಬಿಟ್‌ಕಾಯಿನ್ ಜಪ್ತಿ ಮಾಡಿದ ಇಡಿ

ಬಹುಕೋಟಿ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಮುಖ ಆರೋಪಿಗಳಿಂದ ಲಕ್ಷಾಂತರ ರೂ ಮೌಲ್ಯದ 50 ಸಾವಿರ USDT ಬಿಟ್‌ಕಾಯಿನ್ ಜಪ್ತಿ ಮಾಡಿದೆ. ಆರೋಪಿಗಳು ಅಮೆರಿಕ ಮೂಲದ ಕಂಪನಿಯನ್ನು ಹ್ಯಾಕ್ ಮಾಡಿ ಬಿಟ್‌ಕಾಯಿನ್ ಖರೀದಿಸಿದ್ದರು. ಸದ್ಯ ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ!

ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದು ಕ್ಯಾಬ್ ಚಾಲಕನ ಕಿಡ್ನ್ಯಾಪ್, ದರೋಡೆ!

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಬೇಗೂರು ಸಮೀಪ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್, ಕ್ಯಾಬ್ ಚಾಲಕ ಮೊಹಮ್ಮದ್ ರಫೀಕ್ ಹಾಗೂ ಆತನ ಸ್ನೇಹಿತರನ್ನು ಅಪಹರಿಸಿ, ಚಾಕು ತೋರಿಸಿ ಹಲ್ಲೆ ನಡೆಸಿ ದರೋಡೆ ಮಾಡಿದೆ. ಮಹಿಳೆಯ ವಿಚಾರದಲ್ಲಿ ನಡೆದ ಈ ಭೀಕರ ಕೃತ್ಯದ ಹಿನ್ನೆಲೆಯಲ್ಲಿ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು

ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು

ಮೃತ ರೋಗಿಯ 2 ಲಕ್ಷ ರೂ ಮೌಲ್ಯದ ರಾಡೋ ವಾಚ್ ಕಳತನವಾಗಿರುವಂತಹ ಘಟನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ತಂದೆ ನೆನಪಿಗಿದ್ದ ಬೆಲೆಬಾಳುವ ರಾಡೋ ವಾಚ್​ ಕಳ್ಳತನವೆಂದು ಮಗಳು ದೂರು ನೀಡಿದ್ದು, ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್

ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್

ಬೆಂಗಳೂರಿನ ಕೆಂಗೇರಿ ಪೊಲೀಸರು ಮಲ್ಟಿ ಟ್ಯಾಲೆಂಟ್​ನನ್ನು ಬಂಧಿಸಿದ್ದಾರೆ. ಬೈಕ್ ಕಳ್ಳತನ ಪ್ರಕರಣದ ತನಿಖೆ ವೇಳೆ ಈತ ಗ್ಯಾಸ್ ಸಿಲಿಂಡರ್, ವಾಹನ ಬ್ಯಾಟರಿ ಹಾಗೂ ಆಟೋ ರಿಕ್ಷಾ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆತ ಕಳ್ಳತನ ಮಾಡಿದ್ದ 25 ಬೈಕ್‌ಗಳು, 12 ಸಿಲಿಂಡರ್‌ಗಳು ಸೇರಿ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಬೆಂಗಳೂರಿನ ಹೆಬ್ಬಾಳ ಪೊಲೀಸರು ದೆಹಲಿ ಮೂಲದ ಬೃಹತ್ ಡ್ರಗ್ ಜಾಲ ಭೇದಿಸಿದ್ದು, ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕೇಸ್​ ಕುರಿತು ಸುಮಾರು 40 ಮಂದಿಯನ್ನು ಒಳಗೊಂಡ ತಂಡ ದೆಹಲಿ ಮತ್ತು ದೆಹಲಿ ಎನ್​​ಸಿಆರ್​​ನಲ್ಲಿ ಕಾರ್ಯಾಚರಣೆ ನಡೆಸಿತ್ತು. ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳ ಬೆನ್ನುಬಿದ್ದ ವೇಳೆ ದೆಹಲಿಯಿಂದ ಡ್ರಗ್ಸ್​​ ಬರುತ್ತಿರುವ ಬಗ್ಗೆ ಖಾಕಿಗೆ ಮಾಹಿತಿ ಸಿಕ್ಕಿತ್ತು ಎನ್ನಲಾಗಿದೆ.

ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು?

ಮಜಾಕ್ ಮಾಡಲೆಂದು ಗೆಳಯನೋರ್ವ ತನ್ನ ಸ್ನೇಹಿತನ ಮೊಬೈಲ್ ಬಚ್ಚಿಟ್ಟಿದ್ದು, ಬಳಿಕ ಈ ತಮಾಷೆಗೆ ಓರ್ವನ ಜೀವವೇ ಹೋಗಿದೆ. ಸಣ್ಣ ಪುಟ್ಟ ತಮಾಷೆ ವಿಚಾರ ಆಗಿದ್ರೂ ಪರವಾಗಿಲ್ಲ. ಅದು ಜಸ್ಟ್ ಮಾತಿನಲ್ಲೇ ಇರಬೇಕು. ಅದರ ಬದಲು ಮಜಾಕ್​​ನಲ್ಲಿ ಕೈ ಮೈ ಮುಟ್ಟಿ ಜಗಳ ಮಾಡಿದರೆ ಏನಾಗುತ್ತೆ ಎನ್ನುವುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿ. ಅಷ್ಟಕ್ಕೂ ಆಗಿದ್ದೇನು ಎನ್ನುವ ವಿವರ ಇಲ್ಲಿದೆ.