ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
ಗರ್ಭಿಣಿಯರಲ್ಲಿ ಅವಧಿ ಪೂರ್ವ ಹೆರಿಗೆಗೆ ವಾಯು ಮಾಲಿನ್ಯದ ಹೆಚ್ಚಳವೂ ಕಾರಣವಾಗುತ್ತದೆಯೇ?
ವಾಯು ಮಾಲಿನ್ಯವು ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅತ್ಯಂತ ಅಪಾಯಕಾರಿ. ಹೌದು, ಇದು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನದಲ್ಲಿ ಬಹಿರಂಗವಾಗಿದೆ. ಅಧ್ಯಯನದ ಪ್ರಕಾರ, ಗಾಳಿಯಲ್ಲಿರುವ ವಿಷವು ಪ್ರಪಂಚಕ್ಕೆ ಬರುವ ಮೊದಲೇ ಮಗುವಿನ ಆರೋಗ್ಯಕ್ಕೆ ಹೇಗೆ ಹಾನಿ ಮಾಡುತ್ತದೆ ಎಂಬುದರ ಬಗ್ಗೆ ವಿವರಿಸಿದೆ. ಹಾಗಾದರೆ ಇದು ಗರ್ಭದಲ್ಲಿರುವ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಈ ರೀತಿಯ ಅಪಾಯವನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 10, 2026
- 10:11 pm
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ವೈದ್ಯರು ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿ
ಹವಾಮಾನ ಬದಲಾಗುತ್ತಿರುವ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಅದರಲ್ಲಿಯೂ ಹೆಚ್ಚಿನವರಲ್ಲಿ ಮಲಬದ್ಧತೆ ಸಮಸ್ಯೆ ಕಂಡುಬರುತ್ತದೆ. ಇದು ದೇಹವನ್ನು ಆಲಸ್ಯ ಮತ್ತು ದಣಿದಂತೆ ಮಾಡುತ್ತದೆ. ಹಾಗಾದರೆ ಮಲಬದ್ಧತೆಯ ಲಕ್ಷಣಗಳು ಹೇಗಿರುತ್ತವೆ, ಈ ಸಮಸ್ಯೆ ತಡೆಗಟ್ಟಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಮತ್ತು ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 10, 2026
- 9:14 pm
ನಗರಗಳಲ್ಲಿ ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗಿ ಆರೋಗ್ಯ ಹದಗೆಡುತ್ತಿರುವುದಕ್ಕೆ ಕಾರಣವೇನು?
ನಗರಗಳಲ್ಲಿ ಹೆಚ್ಚಿತ್ತಿರುವ ಉಷ್ಣತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಈಗ ನಿರ್ಜಲೀಕರಣ, ಶಾಖದಿಂದ ಬಳಲಿಕೆ ಮತ್ತು ಹೀಟ್ ಸ್ಟ್ರೋಕ್ (Heat stroke) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಇದು ಹೆಚ್ಚಾಗಿದೆ. ಆದರೆ ಬೆಂಗಳೂರು ಅಥವಾ ನಗರದ ಜೀವನಶೈಲಿಯಲ್ಲಿ ಈ ರೀತಿ ಬದಲಾವಣೆ ಕಂಡುಬಂದಿರುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 10, 2026
- 8:09 pm
Shigella Infection: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?
ಕೇರಳದಲ್ಲಿ ಶಿಗೆಲ್ಲೋಸಿಸ್ ಎಂಬ ಸೋಂಕು ಆರೋಗ್ಯ ಇಲಾಖೆ ನಿದ್ದೆಗೆಡುವಂತೆ ಮಾಡಿದೆ. ಶಿಗೆಲ್ಲ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಈ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಸೋಂಕು ಹರಡಬಹುದಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಐದು ವರ್ಷದೊಳಗಿನ ಮಕ್ಕಳಿಗೆ, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿಯೂ ಇದು ವೇಗವಾಗಿ ಹರಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
- Preethi Bhat Gunavante
- Updated on: Jun 10, 2026
- 4:28 pm
ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ
ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಆದರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಇರುವ ವಿಷಯಕ್ಕಿಂತ ಇಲ್ಲದಿರುವ ಸುಳ್ಳು ಸುದ್ದಿಗಳೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಜನ ಯಾವುದನ್ನೂ ನಂಬಬೇಕು ಮತ್ತು ಯಾವುದು ಸುಳ್ಳು ಎಂಬುದರ ನಡುವೆ ಗೊಂದಲದಲ್ಲಿ ಇರುತ್ತಾರೆ. ಅದರಲ್ಲಿಯೂ ಈ ಆರೋಗ್ಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ಹೆಚ್ಚಿನವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ ಈ ಬ್ರೈನ್ ಟ್ಯೂಮರ್ ಗೆ ಶಸ್ತ್ರಚಿಕಿತ್ಸೆ ಮಾತ್ರ ಪರಿಹಾರವಲ್ಲ. ಹಾಗಾದರೆ ಈ ರೀತಿಯ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 9, 2026
- 10:30 pm
ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಮೈಗ್ರೇನ್ ಕೂಡ ಒಂದು. ಇದು ಪದೇ ಪದೇ ಕಾಣಿಸಿಕೊಳ್ಳುವುದರಿಂದ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಇದನ್ನು ಸಾಮಾನ್ಯ ತಲೆನೋವು ಎಂದು ಪರಿಗಣಿಸಿ ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕು. ಅದರಲ್ಲಿಯೂ ಇತ್ತೀಚಿನ ಅಧ್ಯಯನವು ಮೈಗ್ರೇನ್ ಮತ್ತು ಹೃದಯದ ಆರೋಗ್ಯದ ನಡುವಿನ ಸಂಭಾವ್ಯ ಸಂಬಂಧವನ್ನು ಸೂಚಿಸಿದೆ. ಈ ಅಧ್ಯಯನದ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Jun 9, 2026
- 8:46 pm
ಪುರುಷರಿಗೆ ದೊಡ್ಡ ಹೊಟ್ಟೆ ಬರುವುದಕ್ಕೆ ಕೇವಲ ಆಹಾರ ಮಾತ್ರ ಕಾರಣವಲ್ಲ! ಹಾಗಾದ್ರೆ ಯಾಕೆ ಈ ರೀತಿ ಆಗುತ್ತೆ?
ಪುರುಷರಲ್ಲಿ ಹೊಟ್ಟೆ ಬೊಜ್ಜು ಬರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಈ ರೀತಿಯಾಗುವುದಕ್ಕೆ ಕೇವಲ ಹೆಚ್ಚು ತಿನ್ನುವುದು, ವ್ಯಾಯಾಮದ ಕೊರತೆ ಅಥವಾ ಅತಿಯಾದ ತೂಕದ ಪರಿಣಾಮ ಮಾತ್ರ ಕಾರಣವಲ್ಲ. ಬದಲಾಗಿ ಈ ರೀತಿಯಾಗುವುದಕ್ಕೆ ಮುಖ್ಯ ಕಾರಣವಿದೆ. ವೈದ್ಯರ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಹೊಟ್ಟೆ ಹೊರಬರುವುದಕ್ಕೆ ಹಾರ್ಮೋನ್ ಅಸಮತೋಲನ ಕೂಡ ಪ್ರಮುಖ ಕಾರಣವಾಗಿರಬಹುದು. ಹಾಗಾದರೆ ಯಾವ ಹಾರ್ಮೋನ್ ಸಮಸ್ಯೆಯಿಂದ ಹೊಟ್ಟೆಯ ಸುತ್ತ ಬೊಜ್ಜು ಕಂಡುಬರುತ್ತದೆ ಮತ್ತು ಹಾರ್ಮೋನ್ ಸಮತೋಲನ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 9, 2026
- 6:15 pm
Philippines Earthquake: ದಕ್ಷಿಣ ಫಿಲಿಪೈನ್ಸ್ನಲ್ಲಿ 7.8 ತೀವ್ರತೆಯ ಭೂಕಂಪ, ಓರ್ವ ಸಾವು, ಹಲವರಿಗೆ ಗಾಯ, ಸುನಾಮಿ ಎಚ್ಚರಿಕೆ
ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಓರ್ವ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಕರಾವಳಿ ಜನರನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಫಿಲಿಪೈನ್ಸ್‌ನ ವಿಪತ್ತು ನಿರ್ವಹಣಾ ನೀತಿಗಳು ಮತ್ತು ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಗಳು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ. ನೌಕಾಸೇನೆ ಮತ್ತು ಕರಾವಳಿ ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.
- Preethi Bhat Gunavante
- Updated on: Jun 8, 2026
- 7:16 am
ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತವಾಗುವುದಕ್ಕೆ ಕಾರಣವೇನು? ತಡೆಗಟ್ಟಲು ಇಲ್ಲಿದೆ ಸಲಹೆ
ಇಂದಿನ ಕಾಲದಲ್ಲಿ, ಹೃದಯಾಘಾತದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದು ಹೆಚ್ಚಾಗಿ ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಸಂಬಂಧಿಸಿದಂತೆ ಕಂಡುಬರುತ್ತದೆ, ಆದರೆ ಅಂತಹ ಸಂದರ್ಭಗಳಲ್ಲಿ, ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತ ಸಂಭವಿಸಬಹುದೇ? ಹಾಗಾದರೆ ಅದಕ್ಕೆ ಕಾರಣಗಳೇನು? ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಏನು ಮಾಡಬೇಕು, ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 7, 2026
- 9:26 pm
ಎಬೋಲಾ ವೈರಸ್ ಅಪಾಯಕಾರಿ, ಆದ್ರೆ ಈ ಸಲಹೆ ಪಾಲಿಸಿದ್ರೆ ಹತ್ತಿರವೂ ಸುಳಿಯಲ್ಲ!
ಎಬೋಲಾ ವೈರಸ್ ಬಗ್ಗೆ ದಿನದಿಂದ ದಿನಕ್ಕೆ ವಿಶ್ವಾದ್ಯಂತ ಕಳವಳ ಹೆಚ್ಚಾಗಿದೆ. ಇದೊಂದು ಗಂಭೀರವಾದ ವೈರಲ್ ಸೋಂಕಾಗಿರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಜೊತೆಗೆ ಎಬೋಲಾ ವೈರಸ್‌ನಿಂದ ಸಾವಿನ ಅಪಾಯ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಅದನ್ನು ತಡೆಗಟ್ಟಲು ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಇಲ್ಲವಾದಲ್ಲಿ ಈ ರೀತಿಯ ಸೋಂಕು ಎಲ್ಲೆಡೆ ಹರಡಿ ಮುಂದೆ ಇದನ್ನು ತಡೆಗಟ್ಟುವುದು ಬಹಳ ಕಷ್ಟವಾಗುತ್ತದೆ.
- Preethi Bhat Gunavante
- Updated on: Jun 7, 2026
- 8:56 pm
ಹೆಚ್ಚು ಬೆವರುತ್ತೀರಾ? ಈ ರೀತಿಯಾಗುವುದಕ್ಕೆ ಕಾರಣ ಏನ್ ಗೊತ್ತಾ?
ಅನೇಕರು ಅಗತ್ಯಕ್ಕಿಂತ ಹೆಚ್ಚು ಬೆವರುತ್ತಾರೆ. ಕೆಲವರಿಗೆ ಯಾವುದೇ ಹೆಚ್ಚು ಶಾರೀರಿಕ ಕೆಲಸವಿಲ್ಲದೇ ಬೆವರು ಬರುವ ಸಮಸ್ಯೆ ಕಾಣಿಸಬಹುದು. ಇದನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಹೆಚ್ಚು ಬೆವರು ಬರುವ ಪ್ರಮುಖ ಕಾರಣಗಳೇನು, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಮತ್ತು ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 5, 2026
- 9:53 pm
ಹೆಚ್ಚು ಆಂಟಿಬಯೋಟಿಕ್ ಸೇವನೆಯಿಂದ ಕರುಳಿನ ಆರೋಗ್ಯ ಹದಗೆಡಬಹುದೇ? ತಜ್ಞರು ಹೇಳುವುದೇನು?
ಇತ್ತೀಚಿನ ದಿನಗಳಲ್ಲಿ, ಆಂಟಿಬಯೋಟಿಕ್ ಔಷಧಿಗಳ ಬಳಕೆ ತುಂಬಾ ಹೆಚ್ಚಾಗಿದೆ. ಆದರೆ ಅನೇಕರು ಅವುಗಳನ್ನು ಅಗತ್ಯವಿಲ್ಲದೆ ಅಥವಾ ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಆಂಟಿಬಯೋಟಿಕ್ ಅತಿಯಾದ ಬಳಕೆಯು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಆಂಟಿಬಯೋಟಿಕ್‌ಗಳು ಕರುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಈ ರೀತಿ ಸಮಸ್ಯೆಗಳನ್ನು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Jun 5, 2026
- 9:06 pm