AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ

ಸಾಮಾನ್ಯವಾಗಿ ಬ್ರೈನ್ ಟ್ಯೂಮರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಆದರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಇರುವ ವಿಷಯಕ್ಕಿಂತ ಇಲ್ಲದಿರುವ ಸುಳ್ಳು ಸುದ್ದಿಗಳೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಜನ ಯಾವುದನ್ನೂ ನಂಬಬೇಕು ಮತ್ತು ಯಾವುದು ಸುಳ್ಳು ಎಂಬುದರ ನಡುವೆ ಗೊಂದಲದಲ್ಲಿ ಇರುತ್ತಾರೆ. ಅದರಲ್ಲಿಯೂ ಈ ಆರೋಗ್ಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ಹೆಚ್ಚಿನವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ ಈ ಬ್ರೈನ್ ಟ್ಯೂಮರ್ ಗೆ ಶಸ್ತ್ರಚಿಕಿತ್ಸೆ ಮಾತ್ರ ಪರಿಹಾರವಲ್ಲ. ಹಾಗಾದರೆ ಈ ರೀತಿಯ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ
Can Brain Tumors Be Treated Without Surgery? Know The TruthImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Jun 09, 2026 | 10:30 PM

Share

ಬ್ರೈನ್ ಟ್ಯೂಮರ್ (Brain Tumors) ಎಂಬ ಪದವೇ ಭಯ ಮತ್ತು ಆತಂಕ ಹುಟ್ಟಿಸುತ್ತದೆ. ಇದರ ಬಗ್ಗೆ ಹೇಳುವುದೇ ಬೇಡ ಏಕೆಂದರೆ ಇದೊಂದು ಗಂಭೀರ ಕಾಯಿಲೆ ಎಂಬುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ತಿಳಿದಿರುತ್ತದೆ. ಆದರೆ ಈ ಆರೋಗ್ಯ ಸಮಸ್ಯೆಯ ಬಗ್ಗೆ ಇರುವ ವಿಷಯಕ್ಕಿಂತ ಇಲ್ಲದಿರುವ ಸುಳ್ಳು ಸುದ್ದಿಗಳೇ ಹೆಚ್ಚು ಪ್ರಚಲಿತದಲ್ಲಿರುವುದರಿಂದ ಜನ ಯಾವುದನ್ನೂ ನಂಬಬೇಕು ಮತ್ತು ಯಾವುದು ಸುಳ್ಳು ಎಂಬುದರ ನಡುವೆ ಗೊಂದಲದಲ್ಲಿ ಇರುತ್ತಾರೆ. ಅಂತವುಗಳಲ್ಲಿ ಬ್ರೈನ್ ಟ್ಯೂಮರ್‌ಗೆ ಶಸ್ತ್ರಚಿಕಿತ್ಸೆಯೇ ಮದ್ದು ಎಂಬ ಮಾತು ಕೂಡ ಒಂದು. ಹಾಗಾದರೆ ಬ್ರೈನ್ ಟ್ಯೂಮರ್‌ ಎಂಬ ಗಂಭೀರ ಕಾಯಿಲೆಯಿಂದ ಮುಕ್ತಿ ಪಡೆಯಲು ಚಿಕಿತ್ಸೆ ಮಾತ್ರ ಪರಿಹಾರವೇ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂದು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಜ್ಞರು ಹೇಳುವುದೇನು?

ನ್ಯೂರೋ ಸರ್ಜನ್ ಡಾ. ಪ್ರವೀಣ್ ಗುಪ್ತಾ ಅವರು ಹೇಳುವ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆ ಒಂದೇ ರೀತಿಯಲ್ಲಿರದು. ಕೆಲವು ಸಣ್ಣ ಹಾಗೂ ನಿಧಾನವಾಗಿ ಬೆಳೆಯುವ ಟ್ಯೂಮರ್‌ಗಳು ವರ್ಷಗಳ ಕಾಲ ಯಾವುದೇ ದೊಡ್ಡ ಸಮಸ್ಯೆ ಉಂಟುಮಾಡದೇ ಸ್ಥಿರವಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನಿಯಮಿತ ಎಂ ಆರ್ ಐ (MRI) ಸ್ಕ್ಯಾನ್ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಸಾಕಾಗಬಹುದು. ಜೊತೆಗೆ ಪ್ರತಿಯೊಂದು ಬ್ರೈನ್ ಟ್ಯೂಮರ್‌ಗೂ ಆಪರೇಷನ್ ಅಗತ್ಯವಿಲ್ಲ. ಟ್ಯೂಮರ್‌ನ ಗಾತ್ರ, ಅದು ಇರುವ ಸ್ಥಳ, ಅದರ ಸ್ವಭಾವ ಹಾಗೂ ರೋಗಿಯ ಆರೋಗ್ಯ ಸ್ಥಿತಿಯನ್ನು ಆಧರಿಸಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಕೆಲವು ಬಿನೈನ್ (ಕ್ಯಾನ್ಸರ್ ಅಲ್ಲದ) ಟ್ಯೂಮರ್‌ಗಳು ಮೆದುಳಿನ ಸಂವೇದನಾಶೀಲ ಭಾಗಗಳಿಂದ ದೂರವಿದ್ದರೆ ಮತ್ತು ಯಾವುದೇ ಲಕ್ಷಣಗಳನ್ನು ಉಂಟುಮಾಡದಿದ್ದರೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ.

ಇದನ್ನೂ ಓದಿ: ಪದೇಪದೇ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಹೃದಯದ ಆರೋಗ್ಯ ಸರಿಯಾಗಿದ್ಯಾ ಪರೀಕ್ಷೆ ಮಾಡಿಸಿಕೊಳ್ಳಿ

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ನಿರಂತರ ತಲೆನೋವು, ಸೆಳೆತ (ಸೀಜರ್ಸ್), ದೃಷ್ಟಿ ಸಮಸ್ಯೆ, ಮಾತನಾಡಲು ಕಷ್ಟವಾಗುವುದು, ದೇಹದ ಭಾಗದಲ್ಲಿ ದುರ್ಬಲತೆ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಇತ್ತೀಚಿನ ತಂತ್ರಜ್ಞಾನಗಳಾದ ಹೈ-ರಿಸೊಲ್ಯೂಶನ್ MRI, ನ್ಯೂರೋ ನ್ಯಾವಿಗೇಶನ್, ಫಂಕ್ಷನಲ್ ಬ್ರೇನ್ ಮ್ಯಾಪಿಂಗ್ ಮತ್ತು ಅವೇಕ್ ಕ್ರೇನಿಯೋಟಮಿ ಮುಂತಾದವು ಬ್ರೈನ್ ಟ್ಯೂಮರ್ ಚಿಕಿತ್ಸೆಯನ್ನು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ ಮಾಡಿವೆ.

ಇಂಟರ್ನೆಟ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಅಪೂರ್ಣ ಮಾಹಿತಿಯನ್ನು ನಂಬಿ ಚಿಕಿತ್ಸೆ ಮಾಡಿಸುವ ಬಗ್ಗೆ ತೀರ್ಮಾನ ಮಾಡಬಾರದು. ಬ್ರೈನ್ ಟ್ಯೂಮರ್ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರಲ್ಲೂ ಅದರ ಸ್ಥಿತಿ ವಿಭಿನ್ನವಾಗಿರುತ್ತದೆ. ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ತಜ್ಞ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ. ಹಲವು ರೋಗಿಗಳು ಶಸ್ತ್ರಚಿಕಿತ್ಸೆಯಿಲ್ಲದೆ ಸಹ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಭಯಪಡದೇ ಜಾಗೃತಿಯಿಂದ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:27 pm, Tue, 9 June 26

Follow Us
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ