AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಸಮಯದಲ್ಲಿ ಈ ರೀತಿಯಾದರೆ ನಿರ್ಲಕ್ಷಿಸಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು

ಬ್ರೈನ್ ಟ್ಯೂಮರ್ ತುಂಬಾ ಗಂಭೀರ ಕಾಯಿಲೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ರೋಗಿ ಸಾಯಬಹುದು. ಆದರೆ ಬ್ರೈನ್ ಟ್ಯೂಮರ್ ಸಂದರ್ಭದಲ್ಲಿ, ರಾತ್ರಿ ಮಲಗಿರುವಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ಇವುಗಳನ್ನು ನಿರ್ಲಕ್ಷಿಸಬಾರದು. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ ಇದರಿಂದಾಗುವ ಪರಿಣಾಮವನ್ನು ಕಡಿಮೆ ಮಾಡಬಹುದು. ಹಾಗಾದರೆ ರಾತ್ರಿ ಸಮಯದಲ್ಲಿ ಯಾವ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು, ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾತ್ರಿ ಸಮಯದಲ್ಲಿ ಈ ರೀತಿಯಾದರೆ ನಿರ್ಲಕ್ಷಿಸಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು
ಬ್ರೈನ್ ಟ್ಯೂಮರ್ ಲಕ್ಷಣ
ಪ್ರೀತಿ ಭಟ್​, ಗುಣವಂತೆ
|

Updated on: Nov 22, 2025 | 4:22 PM

Share

ಬ್ರೈನ್ ಟ್ಯೂಮರ್ (Brain Tumor) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಇದೊಂದು ಗಂಭೀರ ಕಾಯಿಲೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ರೋಗಿ ಸಾಯಲೂಬಹುದು. ಆದರೆ ಕೆಲವು ಲಕ್ಷಣಗಳ ಮೂಲಕ ಈ ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು ಎಂದರೆ ನಂಬುತ್ತೀರಾ? ಹೌದು. ಬ್ರೈನ್ ಟ್ಯೂಮರ್ ಬರುವ ಸಂದರ್ಭದಲ್ಲಿ, ರಾತ್ರಿ ಮಲಗಿರುವಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ ಇದರಿಂದಾಗುವ ಪರಿಣಾಮವನ್ನು ಕಡಿಮೆ ಮಾಡಬಹುದು. ಹಾಗಾದರೆ ರಾತ್ರಿ ಸಮಯದಲ್ಲಿ ಯಾವ ರೀತಿಯ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು, ಯಾವ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೆದುಳಿನಲ್ಲಿ ಗಡ್ಡೆಗಳು ಬೆಳೆಯುವುದು ಅಂದರೆ ಬ್ರೈನ್ ಟ್ಯೂಮರ್ ಎನ್ನುವುದು ಬಹಳ ಗಂಭೀರವಾದಂತಹ ಕಾಯಿಲೆಯಾಗಿದೆ. ಚಿಕಿತ್ಸೆಯನ್ನು ವಿಳಂಬ ಮಾಡಿದಷ್ಟು ಇದರಿಂದ ಉಂಟಾಗುವ ತೊಂದರೆಗಳು ಹೆಚ್ಚಾಗಬಹುದು. ಒಬ್ಬ ವ್ಯಕ್ತಿಯಲ್ಲಿ ಮೆದುಳಿನ ಗಡ್ಡೆಯಾದಾಗ ರಾತ್ರಿ ಸಮಯದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಲಕ್ಷಣಗಳನ್ನು ನಿರ್ಲಕ್ಷಿಸದಿದ್ದರೆ ಬ್ರೈನ್ ಟ್ಯೂಮರ್ ನಿಂದ ಪರಿಹಾರ ಕಂಡುಕೊಳ್ಳಬಹುದು.

ಮೆದುಳಿನ ಗಡ್ಡೆಗಳು ಕಂಡುಬರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮೆದುಳಿನಲ್ಲಿನ ಜೀವಕೋಶಗಳು ಇದ್ದಕ್ಕಿದ್ದಂತೆ ಬೆಳೆಯಲು ಪ್ರಾರಂಭಿಸಿದಾಗ ಮೆದುಳಿನ ಗಡ್ಡೆ ಉಂಟಾಗುತ್ತದೆ. ಹಾನಿಕರವಲ್ಲದ ಗೆಡ್ಡೆಗಳು ಕ್ಯಾನ್ಸರ್ ಅಲ್ಲ, ಆದರೆ ಅವು ನಿಧಾನವಾಗಿ ಬೆಳೆಯುತ್ತವೆ. ಮತ್ತೊಂದೆಡೆ, ಮಾರಕ ಗಡ್ಡೆಗಳು ವೇಗವಾಗಿ ಬೆಳೆಯುತ್ತವೆ ಮಾತ್ರವಲ್ಲ ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಚಿಕಿತ್ಸೆಯು ಗಡ್ಡೆಯ ಲಕ್ಷಣಗಳು, ಅದು ಎಲ್ಲಿದೆ, ಅದರ ಗಾತ್ರ ಮತ್ತು ಅದು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ರಾತ್ರಿ ಸಮಯದಲ್ಲಿ ಕಂಡುಬರುವ ಲಕ್ಷಣಗಳು:

ಮೂರ್ಛೆ ಹೋಗುವುದು

ನಿದ್ರೆ ಮಾಡುತ್ತಿರುವ ಸಮಯದಲ್ಲಿ ಹಠಾತ್ ಮೂರ್ಛೆ ಹೋಗುವುದು ಅಥವಾ ಪ್ರಜ್ಞೆ ಕಳೆದುಕೊಳ್ಳುವುದು ಮೆದುಳಿನಲ್ಲಿ ಗಡ್ಡೆ ಇರುವ ಲಕ್ಷಣವಾಗಿದೆ. ಈ ರೀತಿಯಾಗುವುದನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಅವು ಮುಂದೆ ತುಂಬಾ ಗಂಭೀರವಾಗಬಹುದು. ಹಾಗಾಗಿ ಈ ರೀತಿಯ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಲು ಮರೆಯಬೇಡಿ.

ಇದನ್ನೂ ಓದಿ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ತೀವ್ರ ತಲೆನೋವು, ರಾತ್ರಿ ಮಲಗಿದಾಗ ವಾಂತಿ

ರಾತ್ರಿ ಸಮಯದಲ್ಲಿ ತೀವ್ರ ತಲೆನೋವಿನ ಜೊತೆಗೆ, ರಾತ್ರಿ ಮಲಗಿದ್ದಾಗ ವಾಂತಿ ಮಾಡುವುದು ಸಹ ಮೆದುಳಿನ ಗೆಡ್ಡೆಯ ಸಂಕೇತವಾಗಿರಬಹುದು. ಮಾತ್ರವಲ್ಲ ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಮಾಡುವುದು ಕೂಡ ಮೆದುಳಿನಲ್ಲಿ ಗಡ್ಡೆ ಇರುವ ಲಕ್ಷಣವಾಗಿರಬಹುದು. ಇನ್ನು ತೀವ್ರ ತಲೆನೋವಿದ್ದಾಗ ವಾಂತಿ ಮಾಡುವುದು ಕೂಡ ಮೆದುಳಿನಲ್ಲಿ ಗಡ್ಡೆ ಇರುವುದರ ಸೂಚನೆಯಾಗಿರಬಹುದು. ಗಡ್ಡೆಯಿಂದ ಮೆದುಳಿನ ಮೇಲೆ ಒತ್ತಡ ಉಂಟಾಗುವುದು ವಾಂತಿಗೆ ಕಾರಣವಾಗಬಹುದು.

ನಿದ್ರೆಗೆ ಭಂಗ ಅಥವಾ ನಿದ್ರಾಹೀನತೆ

ನಿದ್ರೆಯಲ್ಲಿ ಆಗಾಗ ಕಂಡುಬರುವ ಅಡಚಣೆಗಳು ಮೆದುಳಿನಲ್ಲಿ ಗಡ್ಡೆ ಇರುವುದರ ಸಂಕೇತವಾಗಿರಬಹುದು. ಮಾತ್ರವಲ್ಲ ಕೆಲವರಲ್ಲಿ ಕಂಡು ಬರುವ ಅತಿಯಾದ ನಿದ್ರಾಹೀನತೆ ಅಥವಾ ದಿನವಿಡೀ ದಣಿದ ಭಾವನೆಯೂ ಕೂಡ ಮೆದುಳಿನಲ್ಲಿ ಗಡ್ಡೆ ಬೆಳೆದಿರುವ ಲಕ್ಷಣಗಳಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.

ಇದರೊಂದಿಗೆ ಆಗಾಗ ಕಂಡುಬರುವ ತೀವ್ರ ತಲೆನೋವು, ಮಸುಕಾದ ದೃಷ್ಟಿ ಅಥವಾ ನಡವಳಿಕೆಯಲ್ಲಿನ ಬದಲಾವಣೆಗಳು ಕೂಡ ಟ್ಯೂಮರ್ ಲಕ್ಷಣಗಳಾಗಿರಬಹುದು. ಈ ರೀತಿ ನಿಮಗೂ ಆಗುತ್ತಿದ್ದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಅಮೂಲ್ಯವಾಗಿರುವ ಜೀವವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್