Best Cars: ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳಿವು!

ದೇಶಿಯ ಕಾರು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವಾರು ಹೊಸ ಕಾರು ಮಾದರಿಗಳು ಬಿಡುಗಡೆಗೊಂಡಿದ್ದು, ರೂ. 10 ಲಕ್ಷ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ ಹಲವಾರು ಹೊಸ ಕಾರುಗಳು ಖರೀದಿಗೆ ಲಭ್ಯವಿವೆ.

Best Cars: ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳಿವು!
ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರಿಗಳಿವು!
Follow us
Praveen Sannamani
|

Updated on:Dec 20, 2022 | 4:10 PM

ಹೊಸ ಕಾರುಗಳ ಮಾರಾಟವು(Car Sales) ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಹೊಸ ಕಾರುಗಳು ಹೆಚ್ಚಿನ ಬೇಡಿಕೆ ಹೊಂದಿವೆ. ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರುಗಳು ಖರೀದಿಗೆ ಲಭ್ಯವಿದ್ದರೂ ರೂ. 10 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿರುವ ಕಾರು ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಹೊಂದಿವೆ. ನಾವಿಂದು ಈ ಲೇಖನದಲ್ಲಿ ರೂ. 10 ಲಕ್ಷದೊಳಗೆ ಖರೀದಿಸಬಹುದಾದ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರುಗಳ ಮಾಹಿತಿ ನೀಡಲಾಗಿದ್ದು, ಇವು ಸಾಕಷ್ಟು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿಲ್ಲವಾದರೂ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಎನ್ನಬಹುದು.

ಮಹೀಂದ್ರಾ ಎಕ್ಸ್ ಯುವಿ300

ಬಜೆಟ್ ಬೆಲೆಯ ಉತ್ತಮ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ ಯುವಿ300 ಅತ್ಯುತ್ತಮ ಆಯ್ಕೆಯಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.41 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ಗಳಿದ್ದರೂ ಬಜೆಟ್ ಮಾದರಿಯನ್ನು ಮಧ್ಯಮ ಕ್ರಮಾಂಕದ ವೆರಿಯೆಂಟ್ ಖರೀದಿಗೆ ಬಯಸುವ ಗ್ರಾಹಕರನ್ನು ಸಹ ಸೆಳೆಯಲಿದೆ. ಕಾರಿನ ಫೀಚರ್ಸ್ ಗಳು ವಿವಿಧ ವೆರಿಯೆಂಟ್ ಆಧರಿಸಿದ್ದು, ಇದರಲ್ಲಿ ಎಂಟ್ರಿ ಲೆವಲ್ ವೆರಿಯೆಂಟ್ ಸಹ ಅತ್ಯುತ್ತಮ ಫೀಚರ್ಸ್ ಜೊತೆ ಹೆಚ್ಚು ಸುರಕ್ಷಾ ಸೌಲಭ್ಯ ಹೊಂದಿದೆ.

ಇದನ್ನೂ ಓದಿ: ಅಪಘಾತಗಳನ್ನು ತಪ್ಪಿಸಲು ನೆರವಾಗುವ ಎಡಿಎಎಸ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತಾ?

ಹ್ಯುಂಡೈ ಐ20

ಅತ್ಯುತ್ತಮ ಫೀಚರ್ಸ್ ಹೊಂದಿರುವ ರೂ.10 ಲಕ್ಷ ಬಜೆಟ್ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ಐ20 ಕೂಡಾ ಪ್ರಮುಖವಾಗಿದೆ. ಈ ಕಾರಿನ ಮಧ್ಯಮ ಕ್ರಮಾಂಕದ ಮಾದರಿಗಳು ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾಗಿದ್ದು, ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊಂದಿದೆ. ಐ20 ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಇದು ರೂ. 7.07 ಲಕ್ಷ ಬೆಲೆ ಹೊಂದಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ.

ಟಾಟಾ ಟಿಯಾಗೋ ಇವಿ

ಇತ್ತೀಚೆಗೆ ಬಿಡುಗಡೆಯಾಗಿರುವ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಮಾದರಿಯು ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದೆ. ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.49 ಲಕ್ಷ ಬೆಲೆ ಹೊಂದಿದ್ದು, ಉತ್ತಮ ಫೀಚರ್ಸ್ ಹೊಂದಿರುವ ಮಧ್ಯಮ ಕ್ರಮಾಂಕದ ಮಾದರಿಯನ್ನ ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾಗಿದೆ.

ಹ್ಯುಂಡೈ ವೆನ್ಯೂ

ಕಂಪ್ಯಾಕ್ಟ್ ಎಸ್ ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ವೆನ್ಯೂ ಕಾರು ಮಾದರಿಯು ಸಹ ರೂ. 10 ಲಕ್ಷ ಬೆಲೆಯಲ್ಲಿ ಖರೀದಿಸಬಹುದಾದ ಉತ್ತಮ ಕಾರುಗಳಲ್ಲಿ ಒಂದಾಗಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 7.53 ಲಕ್ಷ ಬೆಲೆ ಹೊಂದಿದೆ. ಹೊಸ ಕಾರಿನ ಮಧ್ಯಮ ಕ್ರಮಾಂಕದ ಮಾದರಿಯು ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾಗಿದ್ದು, ಇದು ಐ20 ಮಾದರಿಯಲ್ಲಿಯೇ ಎಂಜಿನ್ ಆಯ್ಕೆ ಹೊಂದಿದೆ.

ಇದನ್ನೂ ಓದಿ: ಕರ್ನಾಟಕ ಕೈ ತಪ್ಪಿತು ರೂ. 10 ಸಾವಿರ ಕೋಟಿ ಮೌಲ್ಯದ ಮಹೀಂದ್ರಾ ಬೃಹತ್ ಯೋಜನೆ

2022 ಮಾರುತಿ ಬ್ರೆಝಾ

ಮಾರುತಿ ಸುಜುಕಿ ಹೊಸ ಬ್ರೆಝಾ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರುಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ. ಹೊಸ ಮಾದರಿಯು ಈ ಹಿಂದಿನ ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಇದು ಸದ್ಯ ಎಕ್ಸ್‌ ಶೋರೂಂ ಪ್ರಕಾರ ರೂ. 7.99 ಲಕ್ಷ ಬೆಲೆ ಹೊಂದಿದ್ದು, ರೂ. 10 ಲಕ್ಷ ಬಜೆಟ್ ನಲ್ಲಿ ಮಧ್ಯಮ ಕ್ರಮಾಂಕದ ವೆರಿಯೆಂಟ್ ಖರೀದಿಸಬಹುದಾಗಿದೆ.

ಕಿಯಾ ಸೊನೆಟ್

ಹೊಸ ಕಿಯಾ ಸೊನೆಟ್ ಮಾದರಿಯು ಹ್ಯುಂಡೈ ವೆನ್ಯೂ ಮಾದರಿಯಲ್ಲಿಯೇ ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ. ಸೊನೆಟ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 7.49 ಲಕ್ಷ ಬೆಲೆ ಹೊಂದಿದ್ದು, ರೂ. 10 ಲಕ್ಷ ಬೆಲೆಯಲ್ಲಿ ಮಧ್ಯಮ ಕ್ರಮಾಂಕದ ವೆರಿಯೆಂಟ್ ಖರೀದಿಸಬಹುದು.

ಹೋಂಡಾ ಜಾಝ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ತನ್ನದೇ ಗ್ರಾಹಕ ವರ್ಗ ಹೊಂದಿರುವ ಹೋಂಡಾ ಜಾಝ್ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್ ಹೊಂದಿರುವ ಕಾರು ಮಾದರಿಯಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8.01 ಲಕ್ಷ ಬೆಲೆ ಹೊಂದಿದೆ. ಇದರ ಮಧ್ಯಮ ಕ್ರಮಾಂಕ ವೆರಿಯೆಂಟ್ ಗಳನ್ನು ರೂ. 10 ಲಕ್ಷ ಬಜೆಟ್ ನಲ್ಲಿ ಖರೀದಿಸಬಹುದಾಗಿದ್ದು, ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Published On - 9:07 pm, Fri, 16 December 22

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್