ಐಷಾರಾಮಿ ಲುಕ್ ಹೊಂದಿರುವ ಹುಂಡೈ ಎಕ್ಸ್‌ಟರ್ ನೈಟ್ ಎಡಿಷನ್ ಬಿಡುಗಡೆ

ಹ್ಯುಂಡೈ ಕಂಪನಿ ತನ್ನ ಜನಪ್ರಿಯ ಎಕ್ಸ್‌ಟರ್ ಮೈಕ್ರೊ ಎಸ್ ಯುವಿ ಮಾದರಿಯಲ್ಲಿ ಹೊಸ ನೈಟ್ ಎಡಿಷನ್ ಬಿಡುಗಡೆ ಮಾಡಿದೆ.

ಐಷಾರಾಮಿ ಲುಕ್ ಹೊಂದಿರುವ ಹುಂಡೈ ಎಕ್ಸ್‌ಟರ್ ನೈಟ್ ಎಡಿಷನ್ ಬಿಡುಗಡೆ
ಹುಂಡೈ ಎಕ್ಸ್‌ಟರ್ ನೈಟ್ ಎಡಿಷನ್
Follow us
|

Updated on: Jul 10, 2024 | 5:18 PM

ಭಾರತದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ  (hyundi) ತನ್ನ ಜನಪ್ರಿಯ ಎಕ್ಸ್‌ಟರ್  ಮೈಕ್ರೊ ಎಸ್ ಯುವಿಯಲ್ಲಿ ಹೊಸದಾಗಿ ನೈಟ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಆವೃತ್ತಿಯು ಎಂಟು ಸಬ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 8.38 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 10.43 ಲಕ್ಷ ಬೆಲೆ ಹೊಂದಿದೆ.

ಎಕ್ಸ್‌ಟರ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಮೊದಲ ವರ್ಷದ ಸಂಭ್ರಮಕ್ಕಾಗಿ ನೈಟ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿರುವ ಹ್ಯುಂಡೈ ಕಂಪನಿಯು ಸಣ್ಣ ಗಾತ್ರದ ಕಾರುಗಳಲ್ಲೂ ಐಷಾರಾಮಿ ಫೀಚರ್ಸ್ ಹೊಂದಿರುವ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಬಹುದು ಎಂಬುವುದನ್ನು ಸಾಬೀತುಪಡಿಸಿದೆ. ಈ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಇದು ಆರಂಭಿಕ ಎಸ್ ಯುವಿ ಕಾರುಗಳನ್ನು ಖರೀದಿಗೆ ಅತ್ಯುತ್ತಮ ಆಯ್ಕೆಯಾಗಲಿದೆ.

ಎಕ್ಸ್‌ಟರ್ ನೈಟ್ ಎಡಿಷನ್ ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ) ವೆರಿಯೆಂಟ್ ಗಳನ್ನು ಆಧರಿಸಿ ಬಿಡುಗಡೆ ಮಾಡಲಾಗಿದ್ದು, ವಿಶೇಷ ಆವೃತ್ತಿಯಲ್ಲಿ ಆಲ್ ಬ್ಲ್ಯಾಕ್ ಥೀಮ್ ಜೊತೆಗೆ ರೆಡ್ ಹೈಲೆಟ್ಸ್ ಗಳನ್ನು ಪಡೆದುಕೊಂಡಿದೆ. ಹಾಗೆಯೇ ಹೊಸ ಆವೃತ್ತಿಯಲ್ಲಿ ಫ್ರಂಟ್ ಬಂಪರ್ ಮತ್ತು ಟೈಲ್ ಗೇಟ್ ನಲ್ಲಿ ರೆಡ್ ಆಕ್ಸೆಂಟ್ ನೀಡಲಾಗಿದ್ದು, ಇದರೊಂದಿಗೆ ರೆಡ್ ಬ್ರೇಕ್ ಕ್ಯಾಲಿಪರ್, ಬ್ಲ್ಯಾಕ್ ಫ್ರಂಟ್, ರಿಯರ್ ಸ್ಕೀಡ್ ಪ್ಲೇಟ್, ಬ್ಲ್ಯಾಕ್ ಬಣ್ಣದ ಅಲಾಯ್ ವ್ಹೀಲ್ ಗಳು ಮತ್ತು ಹಿಂಬದಿಯಲ್ಲಿ ನೈಟ್ ಎಡಿಷನ್ ಬ್ಲ್ಯಾಡ್ಜ್ ನೀಡಲಾಗಿದೆ.

ಇದನ್ನೂ ಓದಿ: ಸುರಕ್ಷತೆ ಮತ್ತು ಅನುಕೂಲತೆ ಹೊಂದಿರುವ ಇಂತಹ ಕಾರುಗಳನ್ನೇ ಖರೀದಿಸಿ..

ಹೊಸ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಕೂಡಾ ಆಕರ್ಷಕವಾದ ಬ್ಲ್ಯಾಕ್ ಥೀಮ್ ನೊಂದಿಗೆ ಕಾಂಟ್ರಾಸ್ಟಿಂಗ್ ರೆಡ್ ಆಕ್ಸೆಂಟ್ ಮತ್ತು ಸ್ಟೀಚಿಂಗ್ ನೀಡಲಾಗಿದ್ದು, ಹೆಚ್ಚುವರಿಯಾಗಿ ರೆಡ್ ಫುಟ್ ವೆಲ್ ಲೈಟಿಂಗ್, ಮೆಟಲ್ ಸ್ಕಫ್ ಪ್ಲೇಟ್, ರೆಡ್ ಸ್ಟೀಚಿಂಗ್ ಫ್ಲೋರ್ ಮ್ಯಾಟ್, ರೆಡ್ ಸ್ಟೀಚಿಂಗ್ ಅಪ್ ಆಸನಗಳು, ಬ್ಲ್ಯಾಕ್ ಸ್ಟ್ಯಾಲಿನ್ ಹೊಂದಿರುವ ಇಂಟಿರಿಯರ್ ಡೋರ್ ಮತ್ತು ಸ್ಟೀರಿಂಗ್ ವ್ಹೀಲ್ ಹೊಂದಿದೆ.

ಆಲ್ ಬ್ಲ್ಯಾಕ್ ಥೀಮ್ ಹೊರತಲಾಗಿಯು ಹೊಸ ಕಾರಿನಲ್ಲಿ ಹ್ಯುಂಡೈ ಕಂಪನಿಯು ಆಬ್ಸ್ ಬ್ಲ್ಯಾಕ್ ಮತ್ತು ಶ್ಯಾಡೋ ಗ್ರೇ ಎನ್ನುವ ಎರಡು ಬಣ್ಣಗಳ ಆಯ್ಕೆ ಹೊಂದಿದ್ದು, ಆಸಕ್ತ ಗ್ರಾಹಕರು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ಸಹ ಖರೀದಿಸಬಹುದಾಗಿದೆ.

ಇದನ್ನೂ ಓದಿ: ಹೈ-ಬೀಮ್ ಹೆಡ್‌ಲೈಟ್ ಹೊಂದಿರುವ ವಾಹನ ಮಾಲೀಕರಿಂದ ಭರ್ಜರಿ ದಂಡ ವಸೂಲಿ

ಇನ್ನು ಸ್ಪೆಷಲ್ ಎಡಿಷನ್ ನಲ್ಲಿ ಹ್ಯುಂಡೈ ಕಂಪನಿಯು ಸಾಮಾನ್ಯ ಮಾದರಿಯಲ್ಲಿರುವಂತೆ 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿದ್ದು, ಇದು 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 83 ಹಾರ್ಸ್ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಹಲವಾರು ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಹೊಸ ಕಾರು ವಿತರಣೆಯಾಗಲಿದೆ.

ತಾಜಾ ಸುದ್ದಿ
ಯುವನಟ ಮನೋಜ್ ವಿಹಾನ್ ಗೆ ಸಿಗಲಿಲ್ಲ ದರ್ಶನ್ ರನ್ನು ಭೇಟಿಯಾಗುವ ಅವಕಾಶ
ಯುವನಟ ಮನೋಜ್ ವಿಹಾನ್ ಗೆ ಸಿಗಲಿಲ್ಲ ದರ್ಶನ್ ರನ್ನು ಭೇಟಿಯಾಗುವ ಅವಕಾಶ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಸಭಾಧ್ಯಕ್ಷ ಯುಟಿ ಖಾದರ್ ಪಕ್ಷಾಪಾತ ದೋರಣೆ ಪ್ರದರ್ಶಿಸುತ್ತಿದ್ದಾರೆ ; ಅಶೋಕ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಆಸ್ಪತ್ರೆಗೆ ಬಂದು ಅಜ್ಜನೆದುರು ಮಂಡಿಯೂರಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಹೇಮಾವತಿ ಜಲಾಶಯದಿಂದ ಸಿಡಿದ ತುಂತುರು ಹನಿಗಳಲ್ಲಿ ಮಿಂದ ಯುವಕ ಯುವತಿಯರು
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ ಸಾಲಿ ಮಂಜಪ್ಪ ವಸೂಲಿ ಮಂಜಪ್ಪನಾದ ವಿಡಿಯೋ!
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ಚಡ್ಡಿ ಗ್ಯಾಂಗ್ ಪ್ರತ್ಯಕ್ಷ; ಹಾಸನ ಜಿಲ್ಲೆಯ ನಿವಾಸಿಗಳಲ್ಲಿ ಹೆಚ್ಚಿದ ಆತಂಕ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ಬಸನಗೌಡ ಯತ್ನಾಳ್ ಮಾತಿಗೆ ಅಸಂಬದ್ಧ ಉತ್ತರ ನೀಡಿದ ಸಚಿವ ಬೈರತಿ ಸುರೇಶ್
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ ಜೋಗಿ ಪ್ರೇಮ್?
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ
ಶಿರೂರು ದುರಂತ: ರಕ್ಷಣಾ ತಂಡಗಳಿಂದ ತಾರತಮ್ಯ ಆಗೋದು ಸಾಧ್ಯವೇ ಇಲ್ಲ