AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ADAS ಸೇರಿದಂತೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಕಿಯಾ ಸೊನೆಟ್ ಫೇಸ್‌ಲಿಫ್ಟ್‌

ಕಿಯಾ ಇಂಡಿಯಾ ಕಂಪನಿಯ ತನ್ನ ಬಹುನೀರಿಕ್ಷಿತ ಸೊನೆಟ್ ಫೇಸ್‌ಲಿಫ್ಟ್‌ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ADAS ಸೇರಿದಂತೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಕಿಯಾ ಸೊನೆಟ್ ಫೇಸ್‌ಲಿಫ್ಟ್‌
ಕಿಯಾ ಸೊನೆಟ್ ಫೇಸ್‌ಲಿಫ್ಟ್‌
Praveen Sannamani
|

Updated on: Dec 14, 2023 | 5:40 PM

Share

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ (Kia India) ಕಂಪನಿಯು ತನ್ನ ಬಹುನೀರಿಕ್ಷಿತ ಸೊನೆಟ್ ಫೇಸ್‌ಲಿಫ್ಟ್‌ (Sonet facelift) ಆವೃತ್ತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಭಾರೀ ಬದಲಾವಣೆಗೆ ಅನುಗುಣವಾಗಿ ನಿರ್ಮಾಣಗೊಂಡಿದೆ.

ಹೊಸ ಸೊನೆಟ್ ಫೇಸ್‌ಲಿಫ್ಟ್‌ ಅನಾವರಣದೊಂದಿಗೆ ಡಿಸೆಂಬರ್ 30ರಿಂದ ಅಧಿಕೃತ ಬುಕಿಂಗ್ ಆರಂಭಿಸುವುದಾಗಿ ಹೇಳಿಕೊಂಡಿರುವ ಕಿಯಾ ಕಂಪನಿಯು ಜನವರಿ ಮಧ್ಯಂತರದಲ್ಲಿ ಬೆಲೆ ಘೋಷಣೆ ಮಾಡುವ ಸಾಧ್ಯತೆಗಳಿದ್ದು, ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ನಿರ್ಮಾಣಗೊಂಡಿದೆ.

Kia Sonet facelift (4)

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಸೊನೆಟ್ ಫೇಸ್‌ಲಿಫ್ಟ್‌ ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಾನೆಟ್ ಮತ್ತು ಬಂಪರ್, ಸ್ಪೋರ್ಟಿಯಾಗಿರುವ ಹೊಸ ಎಲ್ಇಡಿ ಹೆಡ್ ಲೈಟ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಲಂಬಾಕಾರವಾಗಿರುವ ಎಲ್ಇಡಿ ಫಾಗ್ ಲೈಟ್ಸ್, 16 ಇಂಚಿನ ಅಲಾಯ್ ವ್ಹೀಲ್ ಗಳು, ಹಿಂಬದಿಯಲ್ಲಿ ಎಲ್ಇಡಿ ಲೈಟ್ ಬಾರ್, ಸಿ ಆಕಾರದ ಟೈಲ್ ಲೈಟ್ ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ನೀಡಲಾಗಿದೆ.

ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?

ಇದರೊಂದಿಗೆ ಹೊಸ ಕಾರಿನ ಸ್ಟ್ಯಾಂಡರ್ಡ್ ಜಿಟಿ ಆವೃತ್ತಿಗಳು ಮತ್ತು ಸ್ಪೋರ್ಟಿಯಾಗಿರುವ ಎಕ್ಸ್-ಲೈನ್ ಆವೃತ್ತಿಗಳಲ್ಲಿ ತುಸು ವಿಭಿನ್ನತೆಗಾಗಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು, ಇವು ಒಟ್ಟು 8 ಮೊನೊಟೊನ್ ಮತ್ತು 2 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ. ಇದರೊಂದಿಗೆ ಹೊಸ ಕಾರಿನ ಒಳಭಾಗದಲ್ಲೂ ಹೆಚ್ಚಿನ ಬದಲಾವಣೆ ತರಲಾಗಿದ್ದು, ಸೆಲ್ಟೊಸ್ ಫೇಸ್‌ಲಿಫ್ಟ್‌ ನಲ್ಲಿರುವಂತೆ 10.25 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಸಣ್ಣದಾದ ಕ್ಲೈಮೆಟ್ ಕಂಟ್ರೋಲ್ ಡಿಸ್ ಪ್ಲೇ, ಹ್ವಾಕ್ ಕಂಟ್ರೋಲ್ ಯುನಿಟ್, ಟ್ರಾಕ್ಷನ್, ಡ್ರೈವ್ ಮೋಡ್ ಕಂಟ್ರೋಲ್ ಸೇರಿದಂತೆ ಅರಾಮದಾಯಕವಾದ ಆಸನ ಸೌಲಭ್ಯವನ್ನು ನೀಡಲಾಗಿದೆ.

Kia Sonet facelift (4)

ಹೊಸ ಕಾರಿನಲ್ಲಿ ಮತ್ತೊಂದು ಕ್ರಾಂತಿಕಾರಿಯಾಗಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಇದು ಸೆನ್ಸಾರ್ ಮತ್ತು ರಡಾರ್ ಸೌಲಭ್ಯಗಳೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಕಷ್ಟು ಸಹಕಾರಿಯಾಗಿದೆ. ಹೊಸ ಎಡಿಎಎಸ್ ಸೌಲಭ್ಯವನ್ನು ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ವೆನ್ಯೂನಲ್ಲೂ ಈಗಾಗಲೇ ನೀಡಲಾಗಿದ್ದು, ಎಡಿಎಎಸ್ ಪ್ಯಾಕೇಜ್ ನಲ್ಲಿ ಫಾರ್ವಡ್ ಕೂಲಿಷನ್ ವಾರ್ನಿಂಗ್, ಲೇನ್ ಡಿಪಾರ್ಚರ್ ವಾರ್ನಿಂಗ್, ಫಾರ್ವಡ್ ಕೂಲಿಷನ್ ಅವಾಯ್ಡ್ಡೆನ್ಸ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಎಡಿಎಎಸ್ ಜೊತೆಗೆ ಹೊಸ ಕಾರಿನಲ್ಲಿ ಈ ಬಾರಿ ಆರು ಏರ್ ಬ್ಯಾಗ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕಾರ್ನರಿಂಗ್ ಲ್ಯಾಂಪ್ಸ್, ನಾಲ್ಕು ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ವ್ಯೂ ಮಾನಿಟರ್ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದಲ್ಲದೆ ಟಾಪ್ ಎಂಡ್ ವೆರಿಯೆಂಟ್ ಗಳಲ್ಲಿ ಹೆಚ್ಚುವರಿಯಾಗಿ ಕೂಲ್ಡ್ ಫ್ರಂಟ್ ಸೀಟ್ ಗಳು, ಬಾಷ್ ಆಡಿಯೋ ಸಿಸ್ಟಂ, ಸನ್ ರೂಫ್, ಎಲ್ಇಡಿ ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಡ್ಯುಯಲ್ ಕಲರ್ ಇಂಟಿರಿಯರ್ ನೀಡಲಾಗಿದೆ.

Kia Sonet facelift (4)

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಕಾರಿನಲ್ಲಿ ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಈ ಹಿಂದಿನಂತೆಯೇ 1.2 ಲೀಟರ್ ಎನ್ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮುಂದುವರಿಸಲಾಗಿದ್ದು, ಇವು ಬಿಎಸ್ 6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸಿವೆ. ಇದರೊಂದಿಗೆ ಇವು ಕಡಿಮೆ ಮಾಲಿನ್ಯ ಹೊರಸೂವಿಕೆಯೊಂದಿಗೆ ಪರಿಸರ ಸ್ನೇಹಿಯಾಗಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 7 -ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು! 

Kia Sonet facelift (4)

ಅಂದಾಜು ಬೆಲೆ ಮತ್ತು ವೆರಿಯೆಂಟ್ ಗಳು

ಜಿಟಿ ಆವೃತ್ತಿಗಳು ಮತ್ತು ಎಕ್ಸ್-ಲೈನ್ ಆವೃತ್ತಿಗಳೊಂದಿಗೆ ಸುಮಾರು ಏಳು ವೆರಿಯೆಂಟ್ ಗಳನ್ನು ಹೊಂದಿರುವ ಹೊಸ ಸೊನೆಟ್ ಕಾರು ಮಾದರಿಯು ಹಳೆಯ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 7.79 ಲಕ್ಷದಿಂದ ರೂ. 14.89 ಲಕ್ಷ ಬೆಲೆ ಹೊಂದಿರುವ ಸೊನೆಟ್ ಕಾರು ಹೊಸ ಆವೃತ್ತಿಯೊಂದಿಗೆ ಸುಮಾರು ರೂ. 50 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.