ನೀವು ಅನೇಕ ಪೆಟ್ರೋಲ್, ಡೀಸೆಲ್, CNG ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ನೋಡಿರಬಹುದು. ಆದರೆ ನೀವು ಸೋಲಾರ್ ಎಲೆಕ್ಟ್ರಿಕ್ ಕಾರ್ ಅನ್ನು ನೋಡಿದ್ದೀರಾ?. ಪುಣೆ ಮೂಲದ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲಿಟಿ ತನ್ನ ಸೌರ ಚಾಲಿತ ಎಲೆಕ್ಟ್ರಿಕ್ ಕಾರ್ EVA ಯ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ ಆಯೋಜಿಸಲಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರ ಸಮಯದಲ್ಲಿ ಈ ಸೋಲಾರ್ ಕಾರನ್ನು ಜನರಿಗೆ ಪ್ರಸ್ತುತಪಡಿಸಲಿದೆ. ಇದು ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಆಗಿದ್ದು, ಆಟೋ ಎಕ್ಸ್‌ಪೋ 2023 ರಲ್ಲಿ ಇದರ ಎಲ್ಲ ಮಾಹಿತಿ ಬಹಿರಂಗಗೊಳ್ಳಲಿದೆ.
ನಗರದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಗಾತ್ರ ಚಿಕ್ಕದಾಗಿದೆ. ಹೀಗಾಗಿ ನಿಮಗೆ ಸಣ್ಣ ಜಾಗದಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ.
ಈ ಕಾರು ಒಂದೇ ಚಾರ್ಜ್‌ನಲ್ಲಿ 250 ಕಿಲೋ ಮೀಟರ್ ಗಳವರೆಗೆ ಕ್ರಮಿಸುತ್ತದೆ ಮತ್ತು ಛಾವಣಿಯ ಮೇಲೆ ಅಳವಡಿಸಲಾದ ಸೌರ ಫಲಕದ ಸಹಾಯದಿಂದ ಈ ಕಾರು ವರ್ಷದಲ್ಲಿ 3 ಸಾವಿರ ಕಿಲೋಮೀಟರ್‌ಗಳವರೆಗೆ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರು ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಕೇವಲ ಐದು ನಿಮಿಷಗಳ ಚಾರ್ಜ್‌ನಲ್ಲಿ 50 ಕಿಲೋ ಮೀಟರ್ ಗಳವರೆಗೆ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ.
ಈ ಸೋಲಾರ್ ಎಲೆಕ್ಟ್ರಿಕ್ ಕಾರು ಕೇವಲ ಐದು ಸೆಕೆಂಡುಗಳಲ್ಲಿ 0 ರಿಂದ 40 ಕಿ. ಮೀ ರವರೆಗೆ ವೇಗವನ್ನು ಹೊಂದುತ್ತದೆ ಮತ್ತು ಈ ಕಾರಿನ ಗರಿಷ್ಠ ವೇಗವು 70 ಕಿ ಮೀ. ಈ ಕಾರಿನ ಮತ್ತೊಂದು ವಿಶೇಷವೆಂದರೆ ಈ ಕಾರಿನ ಚಾಲನೆಯ ವೆಚ್ಚವೂ ಸಾಕಷ್ಟು ಕಡಿಮೆಯಾಗಿದೆ. ಈ ಕಾರನ್ನು ಒಂದು ಕಿಲೋಮೀಟರ್ ಓಡಿಸಲು ಕೇವಲ 0.50 ಪೈಸೆ ವೆಚ್ಚವಾಗುತ್ತದೆ ಅಷ್ಟೆ. ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಈ ಕಾರು ಸ್ಮಾರ್ಟ್‌ಫೋನ್ ಸಂಪರ್ಕ, ರಿಮೋಟ್ ಮಾನಿಟರಿಂಗ್ ಮತ್ತು ಏರ್ ಅಪ್‌ಡೇಟ್‌ಗಳಂತಹ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: 5 ರೂಪಾಯಿಗೆ 50 ಕಿ.ಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಬೈಕ್, 8ನೇ ತರಗತಿ ವಿದ್ಯಾರ್ಥಿಯ ಹೊಸ ಆವಿಷ್ಕಾರ
ಪ್ರಸ್ತುತ, ಈ ಸೋಲಾರ್ ಕಾರಿನ ಬೆಲೆ ಎಷ್ಟು ಎಂಬುದರ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಅಥವಾ ಈ ಕಾರಿನ ಅಪ್‌ಗ್ರೇಡ್ ಆವೃತ್ತಿಯನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಕಾರಿನ ಬೆಲೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ ಮೂಲಗಳ ಪ್ರಕಾರ ಈ ಕಾರಿನ ಬೆಲೆ 10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿರಬಹುದೆಂದು ನಿರೀಕ್ಷಿಸಲಾಗಿದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ