Telsa Showroom India: ಮುಂಬೈನಲ್ಲಿ ಟೆಸ್ಲಾ ಶೋ ರೂಂಗೆ ಪ್ರತಿ ತಿಂಗಳ ಬಾಡಿಗೆ ಎಷ್ಟು ಲಕ್ಷ ಗೊತ್ತೆ?
Tesla India: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ಭಾರತದಲ್ಲಿ ತನ್ನ ಮೊದಲ ಶೋ ರೂಂ ತೆರೆಯುವುದಾಗಿ ಟೆಸ್ಲಾ ಘೋಷಿಸಿದೆ. ಇದಕ್ಕಾಗಿ ಕಂಪನಿಯು 4000 ಚದರ ಅಡಿ ಪ್ರದೇಶವನ್ನು ಬಾಡಿಗೆಗೆ ಪಡೆದಿದೆ. ಆ್ಯಪಲ್ ಕೂಡ ಭಾರತದಲ್ಲಿ ತನ್ನ ಮೊದಲ ಶೋ ರೂಂ ಅನ್ನು ಬಿಕೆಸಿಯಲ್ಲಿ ತೆರೆದಿರುವುದು ಗಮನಿಸಬೇಕಾದ ಸಂಗತಿ.

ಬೆಂಗಳೂರು (ಮಾ. 06): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅಂತಿಮವಾಗಿ ತಮ್ಮ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾವನ್ನು (Tesla) ಭಾರತಕ್ಕೆ ತರಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ನಡುವಿನ ಭೇಟಿಯ ನಂತರ, ಟೆಸ್ಲಾ ಈಗ ಭಾರತಕ್ಕೆ ಬರಲಿದೆ. ಇತ್ತೀಚೆಗಷ್ಟೆ ಕಂಪನಿಯು ಭಾರತದಲ್ಲಿ ಶೋ ರೂಂಗಳನ್ನು ತೆರೆಯಲು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ತನ್ನ ಕೆಲಸವನ್ನು ತೀವ್ರಗೊಳಿಸಿತ್ತು. ಈಗ ಮತ್ತೊಂದು ದೊಡ್ಡ ಅಪ್‌ಡೇಟ್ ಬಂದಿದ್ದು, ಟೆಸ್ಲಾ ಕಂಪನಿಯ ಮೊದಲ ಶೋ ರೂಂ ಮುಂಬೈನಲ್ಲಿ ತೆರೆಯಲಿದ್ದು, ಕಂಪನಿಯು ಅದಕ್ಕಾಗಿ ಭಾರಿ ಬಾಡಿಗೆಯನ್ನು ಪಾವತಿಸಲಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿ ಭಾರತದಲ್ಲಿ ತನ್ನ ಮೊದಲ ಶೋ ರೂಂ ತೆರೆಯುವುದಾಗಿ ಟೆಸ್ಲಾ ಘೋಷಿಸಿದೆ. ಇದಕ್ಕಾಗಿ ಕಂಪನಿಯು 4000 ಚದರ ಅಡಿ ಪ್ರದೇಶವನ್ನು ಬಾಡಿಗೆಗೆ ಪಡೆದಿದೆ. ಆ್ಯಪಲ್ ಕೂಡ ಭಾರತದಲ್ಲಿ ತನ್ನ ಮೊದಲ ಶೋ ರೂಂ ಅನ್ನು ಬಿಕೆಸಿಯಲ್ಲಿ ತೆರೆದಿರುವುದು ಗಮನಿಸಬೇಕಾದ ಸಂಗತಿ.
35 ಲಕ್ಷ ರೂ. ಗಳಿಗಿಂತ ಹೆಚ್ಚಿನ ಬಾಡಿಗೆ ಪಾವತಿಸುತ್ತಾರೆ:
ಅಮೆರಿಕದ ಎಲೆಕ್ಟ್ರಿಕ್ ವಾಹನ (ಇವಿ) ಕಂಪನಿ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು 4,000 ಚದರ ಅಡಿ ಜಾಗವನ್ನು ಗುತ್ತಿಗೆಗೆ ಪಡೆದಿದೆ. ಅದಕ್ಕಾಗಿ ಕಂಪನಿಯು ಪ್ರತಿ ತಿಂಗಳು 35 ಲಕ್ಷ ರೂ. ಗಳಿಗೂ ಹೆಚ್ಚಿನ ಬಾಡಿಗೆಯನ್ನು ಪಾವತಿಸಲಿದೆ. ಎಲೋನ್ ಮಸ್ಕ್ ಅವರ ಕಂಪನಿ ಟೆಸ್ಲಾ ಈ ಬಾಡಿಗೆಯ ಜೊತೆಗೆ ಕೆಲವು ಪಾರ್ಕಿಂಗ್ ಸ್ಥಳಗಳನ್ನು ಸಹ ಪಡೆಯಲಿದೆ. CRE ಮ್ಯಾಟ್ರಿಕ್ಸ್ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಂಡಿದೆ.
Volvo XC90: ಭಾರತದಲ್ಲಿ ಬರೋಬ್ಬರಿ 1.03 ಕೋಟಿ ರೂ. ವಿನ ಹೊಸ ಕಾರು ಬಿಡುಗಡೆ: ಯಾವುದು?, ಅಂತದ್ದೇನಿದೆ ಇದರಲ್ಲಿ?
ಭಾರತಕ್ಕೆ ಟೆಸ್ಲಾ ಆಗಮನವನ್ನು ಬಹಳ ದಿನಗಳಿಂದ ನಿರೀಕ್ಷಿಸಲಾಗಿತ್ತು. ಎಲೋನ್ ಮಸ್ಕ್ ಸ್ವತಃ 2022 ರಿಂದ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಆದರೆ ಪ್ರತಿ ಬಾರಿಯೂ ಭಾರತದಲ್ಲಿ ವಿದ್ಯುತ್ ವಾಹನಗಳ ಮೇಲೆ ವಿಧಿಸಲಾದ ಆಮದು ಸುಂಕದಿಂದಾಗಿ ವಿಷಯವು ಸಿಲುಕಿಕೊಳ್ಳುತ್ತಿತ್ತು. ಸರ್ಕಾರ ಇತ್ತೀಚೆಗೆ ಹೊಸ ವಿದ್ಯುತ್ ವಾಹನ ನೀತಿಯನ್ನು ಜಾರಿಗೆ ತಂದಿದೆ.
ಇದರ ಪ್ರಕಾರ, ಒಂದು ವಿದೇಶಿ ಕಂಪನಿಯು ಭಾರತದಲ್ಲಿ ಕನಿಷ್ಠ $500 ಮಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿದ್ದರೆ ಮತ್ತು 3 ವರ್ಷಗಳಲ್ಲಿ ತನ್ನ ಅಸೆಂಬ್ಲಿ ಸ್ಥಾವರವನ್ನು ಇಲ್ಲಿ ಸ್ಥಾಪಿಸಿದರೆ, ಅದು ಶೇಕಡಾ 15 ರಷ್ಟು ಆಮದು ಸುಂಕದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಆಮದು ಮಾಡಿಕೊಳ್ಳಬಹುದು. ಈ ಹಿಂದೆ ಈ ತೆರಿಗೆ ದರ ಶೇ. 70 ರಿಂದ ಶೇ. 110 ರವರೆಗೆ ಇತ್ತು.
5 ವರ್ಷಗಳ ನಂತರ ಬಾಡಿಗೆ ಇಷ್ಟೊಂದು ಹೆಚ್ಚಾಗುತ್ತೆ:
ಟೆಸ್ಲಾದ ಈ ಶೋ ರೂಂ ಮೇಕರ್ ಮ್ಯಾಕ್ಸಿಟಿಯಲ್ಲಿ ಇರಬಹುದು. ಅವರು ಈ ಸ್ಥಳವನ್ನು 5 ವರ್ಷಗಳ ಗುತ್ತಿಗೆಗೆ ಪಡೆದಿದ್ದಾರೆ. ಪ್ರತಿ ವರ್ಷ ಶೋ ರೂಂ ಬಾಡಿಗೆ ಶೇ. 5 ರಷ್ಟು ಹೆಚ್ಚಾಗಲಿದ್ದು, 5 ವರ್ಷಗಳಲ್ಲಿ ತಿಂಗಳಿಗೆ 43 ಲಕ್ಷ ರೂ. ತಲುಪಲಿದೆ. ಈ ಟೆಸ್ಲಾ ಶೋ ರೂಂ ದೇಶದ ಮೊದಲ ಆ್ಯಪಲ್ ಶೋ ರೂಂ ಬಳಿಯೇ ಇದೆ. ಕಂಪನಿಯು ಈ ಸ್ಥಳವನ್ನು ಯುನಿವ್ಕೊ ಪ್ರಾಪರ್ಟೀಸ್‌ನಿಂದ ಗುತ್ತಿಗೆಗೆ ಪಡೆದಿದೆ. ಟೆಸ್ಲಾ ಶೋ ರೂಂನ ಆರಂಭಿಕ ಮಾಸಿಕ ಬಾಡಿಗೆ ಪ್ರತಿ ಚದರ ಅಡಿಗೆ 881 ರೂ. ಇದಕ್ಕಾಗಿ ಕಂಪನಿಯು 2.11 ಕೋಟಿ ರೂಪಾಯಿಗಳ ಭದ್ರತಾ ಠೇವಣಿ ಇಟ್ಟಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ