ಪುಸ್ತಕ ಪ್ರೇಮಿಗಳ ಆಶ್ರಯತಾಣ ಪುಸ್ತಕ ಗೂಡು
ಪುಸ್ತಕ ಗೂಡು, ಹೆಸರೇ ಹೇಳುವಂತೆ, ಇದು ಪುಸ್ತಕಗಳ ಪುಟ್ಟ ಗೂಡು. ಈ ಪರಿಕಲ್ಪನೆ ನಮಗೆಲ್ಲಾ ಚಿರಪರಿಚಿತ. ಏಕೆಂದರೆ, ಪುಸ್ತಕ ಗೂಡು ಎಂಬ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾದ ಒಂದು ಪುಟ್ಟ ಗ್ರಂಥಾಲಯವಿದು. ಯಾವುದೇ ರೀತಿಯ ಬೀಗ ಹಾಕುವ ಯಾಂತ್ರಿಕ ವ್ಯವಸ್ಥೆ ಈ ಗೂಡಿಗಿಲ್ಲ. ಈ ಗೂಡನ್ನು ಬಸ್ಸು ನಿಲ್ದಾಣಗಳಲ್ಲಿ, ಉದ್ಯಾನಗಳಲ್ಲಿ, ಆಟದ ಮೈದಾನಗಳಲ್ಲಿ, ಸಾರ್ವಜನಿಕ ಕಚೇರಿ ಕಟ್ಟಡಗಳಲ್ಲಿ ಕಾಣಬಹುದು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಬಹಳ ವಿಶೇಷವಾಗಿ ಗಮನ ಸೆಳೆದದ್ದು ಪುಸ್ತಕ ಮೇಳ. ಇದರ ಪ್ರವೇಶ ದ್ವಾರದಲ್ಲಿ ಪುಸ್ತಕ ಗೂಡೊಂದನ್ನು ಬಹಳ ಅಂದವಾಗಿ ನಿರ್ಮಿಸಿದ್ದಾರೆ. ವೃಕ್ಷಾಕಾರದಲ್ಲಿರುವ ಈ ಪುಸ್ತಕ ಗೂಡು ವೀಕ್ಷಿಸಲು ಬಹಳ ಸೊಗಸಾಗಿದೆ. ಇದರಲ್ಲಿ ಕೇವಲ ಬೆರಳೆಣಿಕೆಯ ಪುಸ್ತಕಗಳಿದ್ದರೂ ಈ ಗೂಡು ಬಹಳ ಉಪಯುಕ್ತ ಸಂಗ್ರಹಗಳನ್ನು ಹೊಂದಿದೆ.
ಪುಸ್ತಕ ಗೂಡು, ಹೆಸರೇ ಹೇಳುವಂತೆ, ಇದು ಪುಸ್ತಕಗಳ ಪುಟ್ಟ ಗೂಡು. ಈ ಪರಿಕಲ್ಪನೆ ನಮಗೆಲ್ಲಾ ಚಿರಪರಿಚಿತ. ಏಕೆಂದರೆ, ಪುಸ್ತಕ ಗೂಡು ಎಂಬ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾದ ಒಂದು ಪುಟ್ಟ ಗ್ರಂಥಾಲಯವಿದು. ಯಾವುದೇ ರೀತಿಯ ಬೀಗ ಹಾಕುವ ಯಾಂತ್ರಿಕ ವ್ಯವಸ್ಥೆ ಈ ಗೂಡಿಗಿಲ್ಲ. ಈ ಗೂಡನ್ನು ಬಸ್ಸು ನಿಲ್ದಾಣಗಳಲ್ಲಿ, ಉದ್ಯಾನಗಳಲ್ಲಿ, ಆಟದ ಮೈದಾನಗಳಲ್ಲಿ, ಸಾರ್ವಜನಿಕ ಕಚೇರಿ ಕಟ್ಟಡಗಳಲ್ಲಿ ಕಾಣಬಹುದು.
ನಿಯತಕಾಲಿಕೆಗಳು, ಸುದ್ದಿ ಪತ್ರಿಕೆಗಳು, ಪುಸ್ತಕಗಳು, ಸರಕಾರಿ ಕಾಯ್ದೆ ಪುಸ್ತಕಗಳು ಇತ್ಯಾದಿಗಳನ್ನು ಸಾರ್ವಜನಿಕರು ಈ ಪುಸ್ತಕ ಗೂಡಿನಿಂದ ಆರಿಸಿ ಓದಬಹುದು. ಇಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುಗರು ಅಲ್ಲೇ ಕುಳಿತು ಓದಬಹುದು ಅಥವಾ ಮನೆಗೆ ತೆಗೆದುಕೊಂಡು ಹೋಗಿ ಓದಬಹುದು. ಬಳಿಕ ಆ ಪುಸ್ತಕವನ್ನು ಮರಳಿ ಅಲ್ಲೇ ಇಡಬೇಕು. ಇದು ಕೇವಲ ಪುಸ್ತಕಗಳಿಗಾಗಿ ಮೀಸಲಿರುವ ಗೂಡು.
ಇದನ್ನು ಓದಿ: ಭಾರತದ ಹಳೆಯ ಸಂಸ್ಕೃತಿಯನ್ನು ನೆನಪಿಸಿದ ಜಾಂಬೂರಿ, ಅದ್ಭುತವಾಗಿತ್ತು ಪ್ರಾಚ್ಯ ವಸ್ತು ಸಂಗ್ರಹ
ಈ ಪುಸ್ತಕ ಗೂಡನ್ನು ಪಂಚಾಯಿತಿಯ ಗ್ರಂಥಪಾಲಕರು, ಸಮೀಪದ ಅಂಗಡಿ ಮಾಲೀಕರು, ಸಾರ್ವಜನಿಕರು ನಿಗಾ ವಹಿಸುತ್ತಾರೆ. ಮೇಲ್ವಿಚಾರಣೆ ಮತ್ತು ಅನುಷ್ಠಾನವನ್ನು ಗ್ರಾಮ ಪಂಚಾಯತ್ ಕಚೇರಿ ಮಾಡುತ್ತದೆ. ಪುಸ್ತಕ ಗೂಡಿನಲ್ಲಿ ಶೇಕಡ 90% ಪುಸ್ತಕಗಳನ್ನು ಸಾರ್ವಜನಿಕರಿಂದ ಕೊಡುಗೆಯಾಗಿ ನೀಡಲಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸಲು, ಅವರ ಜ್ಞಾನವನ್ನು ಉತ್ಕೃಷ್ಟಗೊಳಿಸಲು, ಪುಸ್ತಕದ ಬಗೆಗೆ ಒಲವು ಬೆಳೆಸಲು ಈ ಉಪಕ್ರಮವು ಸಹಾಯ ಮಾಡುತ್ತದೆ.
ಈ ಪರಿಕಲ್ಪನೆಯನ್ನು ಎಲ್ಲೂ ಅನುಷ್ಠಾನಗೊಳಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಗೂಡನ್ನು ನಿರ್ಮಿಸಿ, ಪ್ರತಿಯೊಬ್ಬರಿಗೂ ಇಲ್ಲಿಗೆ ಮುಕ್ತ ಅವಕಾಶ ನೀಡಬೇಕು. ಓದಿ ಆದ ಪುಸ್ತಕವನ್ನು ಇಲ್ಲಿ ತಂದು ಒಪ್ಪಿಸುವುದು, ಅದನ್ನು ಯಾರಾದ್ರೂ ಇನ್ನೂ ಓದಿರದಿದ್ರೆ ತೆಗೆದುಕೊಂಡು ಹೋಗಿ ಓದುವುದು ಹೀಗೆ ವಿನಿಮಯ ಮಾಡಿಕೊಳ್ಳಬಹುದು. ಪುಸ್ತಕಗಳನ್ನು ಬಿಸಾಡುವುದರ ಬದಲು ಹೀಗೆ ಮಾಡುವುದೇ ಒಂದು ಉಪಯುಕ್ತ ಮಾರ್ಗ
ವೈಷ್ಣವಿ, ಉಜಿರೆ
ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:12 am, Thu, 29 December 22